ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ಮೀಸಲಿಡಿ; ಎಚ್.ವಿ. ಅನಂತಸುಬ್ಬರಾವ
ಸರ್ಕಾರಿ ನೌಕರರು ಮತ್ತು ಸಾರಿಗೆ ನೌಕರರ ಸಂಬಳದಲ್ಲಿ ಭಾರೀ ವ್ಯತ್ಯಾಸ ಉಂಟಾಗಿದೆ
Team Udayavani, Jan 12, 2021, 3:12 PM IST
ಕಲಬುರಗಿ: ರಾಜ್ಯದ ಸಾರಿಗೆ ಸಂಸ್ಥೆಗಳ ವಿಚಾರದಲ್ಲಿ ಸರ್ಕಾರ ಲಾಭ-ನಷ್ಟ ಲೆಕ್ಕಾಚಾರ ಮಾಡದೆ, ಸಾರಿಗೆಯು ನಾಗರಿಕ ಸೇವೆ ಎಂದು ಭಾವಿಸಿ ಆರ್ಥಿಕ ಬಲ ತುಂಬಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಈಶಾನ್ಯ ರಸ್ತೆ ಸಾರಿಗೆ, ವಾಯವ್ಯ ರಸ್ತೆ ಸಾರಿಗೆ ಮತ್ತು ಬಿಎಂಟಿಸಿ ನಾಲ್ಕೂ ನಿಗಮಗಳನ್ನು ವಿಲೀನ ಮಾಡಬೇಕು. ಪ್ರತಿ ಬಿಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 63 ವರ್ಷಗಳ ಹಿಂದೆ ಕೇವಲ 3,500 ಕೋಟಿ ರೂ.ಬಂಡಾವಳ ಹಾಕಿ ಸಾರಿಗೆ ಸಂಸ್ಥೆಗಳನ್ನು ಹುಟ್ಟು ಹಾಕಿತ್ತು. ಸಾರಿಗೆ ನೌಕರರು ಮತ್ತು ಕಾರ್ಮಿಕರ ಪರಿಶ್ರಮದಿಂದ ಈಗ ಒಂದು ಲಕ್ಷ ಕೋಟಿ ಆಸ್ತಿಯಾಗಿದೆ. ಆದರೆ, ಸರ್ಕಾರದ ತಪ್ಪು ಧೋರಣೆಯಿಂದ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಸರ್ಕಾರದ ಸಾಮಾಜಿಕ ಹೊಣೆಗಾರಿಕೆಯನ್ನು ಸಾರಿಗೆ ನಿಗಮಗಳು ಹೊರುತ್ತಿದ್ದು, ಅದಕ್ಕೆ ಪರಿಹಾರ ಧನ ಕೊಡುತ್ತಿಲ್ಲ. ವೃತ್ತಿಪರ ಸಂಸ್ಥೆಯಾಗಿ ನಡೆಸಲೂ ಬಿಡುತ್ತಿಲ್ಲ ಎಂದು ಕಿಡಿಕಾರಿದರು.
ಸಾರಿಗೆ ಸಂಸ್ಥೆಗಳು ಸುಗಮವಾಗಿ ನಡೆಯಲು ಸರ್ಕಾರ ಆರ್ಥಿಕವಾಗಿ ಬೆಂಬಲ ಕೊಡಬೇಕು. ಆದಾಯದ ದುಂದು ವೆಚ್ಚ ನಿಯಂತ್ರಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಸಾರಿಗೆಗೆ ಒಂದು ಸಾವಿರ ಕೋಟಿ ರೂ. ಮೀಸಲಿಡಬೇಕು. ನಾಲ್ಕು ನಿಗಮಗಳನ್ನೂ ಒಂದು ಮಾಡಬೇಕು. ಇದರಿಂದ ನಿಗಮಗಳ ನಿರ್ವಹಣೆಗೆ ವ್ಯಯವಾಗುವ 100 ರಿಂದ 150 ಕೋಟಿ ರೂ. ಉಳಿತಾಯವಾಗಲಿದೆ. ನೌಕರರ ಸಂಪೂರ್ಣ ವೇತನವನ್ನು ಸರ್ಕಾರವೇ ಭರಿಸಬೇಕು ಎಂದರು.
ಸಾರಿಗೆ ನಿಗಮಗಳ ಮೇಲೆ ಹೊರಿಸಿರುವ ಮೋಟಾರು ವಾಹನ ತೆರಿಗೆಯನ್ನು ಸರ್ಕಾರ ರದ್ದು ಮಾಡಬೇಕು. ಟೋಲ್‌ಗಾಗಿ ಪ್ರತಿ ನಿಗಮಗಳಿಂದ 200ರಿಂದ 300 ಕೋಟಿ ರೂ. ಖರ್ಚಾಗುತ್ತಿದ್ದು, ಸಾರಿಗೆ ಬಸ್‌ಗಳಿಗೆ ಟೋಲ್ ಸಂಗ್ರಹ ನಿಲ್ಲಿಸಬೇಕು. ಇಂಧನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂಧನದ ಮೇಲೆರಾಜ್ಯ ಸರ್ಕಾರ ಹಾಕುವ ಶೇ.50ರಷ್ಟು ಸುಂಕ ಕಡಿತ ಮಾಡಬೇಕು.
ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ಹಾಗೂ ಇತರ ಸಾಮಾಜಿಕ ಹೊಣೆಗಾರಿಕೆಯ ಸುಮಾರು ಮೂರು ಸಾವಿರ ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಅದನ್ನು ತಕ್ಷಣವೇ ನಿಗಮಗಳಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೊರೊನಾಗೆ 50 ಜನ ಬಲಿ: ಕೊರೊನಾ ಸಂದರ್ಭದಲ್ಲಿ ಕಾರ್ಮಿಕರ ಸ್ಥಳಾಂತರ ಮತ್ತು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ನಾಲ್ಕು ನಿಗಮಗಳ 50 ಜನ ನೌಕರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಆದರೆ, ಇದುವರೆಗೂ ಸರ್ಕಾರ ಘೋಷಿಸಿದ 30 ಲಕ್ಷ ರೂ. ಪರಿಹಾರ ಸಿಕ್ಕಿಲ್ಲ. ತಕ್ಷಣವೇ ಮೃತ ನೌಕರರ ಕುಟುಂಬಗಳಿಗೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಅನಂತಸುಬ್ಬರಾವ ಮನವಿ ಮಾಡಿದರು.
ಕರ್ತವ್ಯದಲ್ಲಿದ್ದಾಗ ಕೊರೊನಾ ಬಂದು ಸಾವನ್ನಪ್ಪಿದ್ದರೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ನಾವು ಕರ್ತವ್ಯದಲ್ಲಿ ಇರಲಿ, ಬಿಡಲಿ ಸಾರಿಗೆ ನೌಕರ ಕೊರೊನಾದಿಂದ ಮೃತಪಟ್ಟರೆ, ಆತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಸಾರಿಗೆ ಸಚಿವ ಮೇಲೆ ಒತ್ತಡ ಹಾಕಿದ್ದೇವು. ಅದಕ್ಕೆ ಸಚಿವರು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್, ಮುಖಂಡರಾದ ಎಚ್.ಎಸ್.ಪದಕಿ, ಸಿದ್ದಪ್ಪ ಪಾಲ್ಕಿ, ಪ್ರಭುದೇವ ಯಳಸಂಗಿ ಹಣಮಂತರಾಯ ಅಟ್ಟೂರ ಇದ್ದರು.
ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರು ಆಗುವುದೇ ಬೇಕಾಗಿಲ್ಲ: ಎಚ್.ವಿ. ಅನಂತಸುಬ್ಬರಾವ ಕಲಬುರಗಿ: ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಸರ್ಕಾರಿ ನೌಕರರು ಮತ್ತು ಸಾರಿಗೆ ನೌಕರರ ಸಂಬಳದಲ್ಲಿ ಭಾರೀ ವ್ಯತ್ಯಾಸ ಉಂಟಾಗಿದೆ. ನಿಯಮಗಳ ಪ್ರಕಾರ ಸಾರಿಗೆ ನೌಕರರಿಗೆ ಸರ್ಕಾರಿ ನೌಕರಗಿಂತ ಹೆಚ್ಚು ಸಂಬಳ ಸಿಗುತ್ತದೆ. ಸರ್ಕಾರಿ ನೌಕರರು ಆಗುವುದೇ ಬೇಕಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್ .ವಿ.ಅನಂತ ಸುಬ್ಬರಾವ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಾಲ್ಕು ವರ್ಷಕ್ಕೊಮ್ಮೆ ಸ್ವಲ್ಪ ಹಣ ಹೆಚ್ಚಾಗಿ ಕೊಟ್ಟು ವೇತನ ಹೆಚ್ಚಳ ಎಂದು ಕರೆಯುತ್ತಿದೆ. 2004ರಿಂದ ನೌಕರರ ವೇತನವನ್ನು ಶೇ.6ರಷ್ಟು ಹೆಚ್ಚಿಸಿ, ಬಡ್ಡಿ ಸಮೇತ ಕೊಡಬೇಕು ಮತ್ತು ಚಾಲಕ-ನಿರ್ವಾಹಕರ ದೈನಂದಿನ ಭತ್ಯೆಯನ್ನು ಎರಡು ಪಟ್ಟು ಮಾಡಬೇಕೆಂದು ಕೈಗಾರಿಕಾ ನ್ಯಾಯಾಧಿಕರಣವು 2017ರಲ್ಲೇ ತೀರ್ಪು ನೀಡಿದೆ. ಆದರೆ, ಸರ್ಕಾರ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿ ತಡೆಯಾಜ್ಞೆ ತಂದಿದೆ.
ಸರ್ಕಾರದ ಈ ನೀತಿಯಿಂದ ವೇತನದ ವಿಷಯದಲ್ಲಿ ನೌಕರರಿಗೆ ಅಸಮಾಧಾನ ಇದೆ. ಈಗ 2020ರ ಜನವರಿಯಿಂದ ವೇತನ ಹೆಚ್ಚಳಕ್ಕಾಗಿ ನೌಕರರು ಕಾದಿದ್ದಾರೆ ಎಂದರು. ನಮ್ಮ ಸಂಘಟನೆ ಎಂದೂ ಬಂದ್ ಮಾಡಿಲ್ಲ. ಮುಷ್ಕರದ ಹೆಸರಲ್ಲಿ ಹೋರಾಟ ಮಾಡಿ ಎರಡು ಬಾರಿ ಸಂಬಳ ಏರಿಕೆ ಆಗುವಂತೆ ಮಾಡಿತ್ತು. ಆದರೆ, ಮೊನ್ನೆ ನಾಲ್ಕು ದಿನಗಳ ಕಾಲ ಬಂದ್ ಮಾಡಿದರೂ ಸರ್ಕಾರದಿಂದ ಕೇವಲ ಭರವಸೆ ಸಿಕ್ಕಿದೆ ಹೊರತು ಒಂದು ಪೈಸೆ ತರಲೂ
ಆಗಿಲ್ಲ. ಅಲ್ಲದೇ, ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ ಸರ್ಕಾರ ಸ್ಪಪ್ಟವಾಗಿ ಹೇಳಿದೆ. ನಾನೂ ರೈತನ ಮಗ. ಆದರೆ, ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು ರೈತರ ಹೋರಾಟಕ್ಕೆ ಹೋಗಿಲ್ಲ. ಏನೂ ತಿಳಿಯದೆ ಹೋರಾಟಕ್ಕೆ ಇಳಿದರೆ ಹೀಗೆ ಆಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಗೆ ಅವರು ಟಾಂಗ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.