ಕಾನೂನು ಬಲವರ್ಧನೆಗೆ ಟಾನಿಕ್‌ ನೀಡುವರೇ ಅಲೋಕಕುಮಾರ?


Team Udayavani, Jul 18, 2022, 9:48 AM IST

1ALOK-kumar

ಕಲಬುರಗಿ: ಜಿಲ್ಲೆಯ ಎಸ್ಪಿ ಹಾಗೂ ಈ ಭಾಗದ ಐಜಿಪಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಲೋಕಕುಮಾರ ಎರಡು ದಿನಗಳ ಭೇಟಿಗಾಗಿ ಸೋಮವಾರ ನಗರಕ್ಕೆ ಆಗಮಿಸುತ್ತಿದ್ದಾರೆ.

ಎಡಿಜಿಪಿಯಾದ ನಂತರ ರಾಜ್ಯದ ಎಲ್ಲ ವಿಭಾಗೀಯ ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೋಕಕುಮಾರ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಮಹತ್ವದ ಸಭೆಗಳನ್ನು ನಡೆಸುತ್ತಿರುವುದರ ಜತೆಗೆ ಕಠಿಣ ಸೂಚನೆಗಳನ್ನು ನೀಡುತ್ತಿರುವುದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸ್ಪಂದಿಸುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕಲಬುರಗಿ ಎಸ್ಪಿಯಾಗಿದ್ದಾಗ ರೌಡಿಗಳ ಹೆಡೆ ಮುರಿದಿದ್ದ ಅವರು ಹಲವು ರೌಡಿಗಳು ಕಲಬುರಗಿ ಬಿಡುವಂತೆ ಮಾಡಿದ್ದರು. ಜಿಲ್ಲೆಯ ದೊಡ್ಡ ರೌಡಿಯಿಂದ ಹಿಡಿದು ಪುಡಿ ರೌಡಿಗಳನ್ನು ಹೆಸರು-ಅಪರಾಧ ಸಮೇತ ಮಾಹಿತಿ ಹೊಂದಿದ್ದ ಅಲೋಕಕುಮಾರ ಅವರು ಅಪರಾಧ ಪ್ರಕರಣಗಳನ್ನು ಸಂಪೂರ್ಣ ಹತ್ತಿಕ್ಕಿದ್ದರು. ಪ್ರಮುಖವಾಗಿ ಆಟದ ಗೊಂಬೆಗಳಾಗಿದ್ದ ನಾಡಪಿಸ್ತೂಲು ಮಾರಾಟ ಜಾಲ ಪತ್ತೆ ಹಚ್ಚಿ, ಆ ತಂಡವನ್ನು ಬುಡಸಮೇತ ಕಿತ್ತು ಹಾಕಿದ್ದರು. ನಾಡಪಿಸ್ತೂಲು ಮಾರಾಟ ಜಾಲಕ್ಕೆ ಬ್ರೇಕ್‌ ಹಾಕಿದ್ದರು. ತದನಂತರ ಐಜಿಪಿಯಾಗಿದ್ದಾಗಲೂ ಕರಿಚಿರತೆ ಅಲಿಯಾಸ್‌ ಶಿವಾನಂದ ಬಡಿಗೇರ ಸೇರಿದಂತೆ ಇತರೆ ಖತರ್ನಾಕ್‌ ರೌಡಿಗಳನ್ನು ಎನ್‌ಕೌಂಟರ್‌ ಮೂಲಕ ಹತ್ತಿಕ್ಕಿದ್ದಲ್ಲದೇ ಮಾರ್ಕೆಟ್‌ ಸತೀಶ ಸೇರಿ ಇತರೆ ವಿರುದ್ಧ ಕೋಕಾ ಕಾಯ್ದೆ ಜಾರಿಗೆ ತಂದಿದ್ದರು. ಈಗ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಅಲೋಕಕುಮಾರ ಕಲಬುರಗಿಗೆ ಆಗಮಿಸುತ್ತಿದ್ದು, ಕಲಬುರಗಿಯಲ್ಲಿ ಅದರಲ್ಲೂ ಮಹಾನಗರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಗೆ ಯಾವ ನಿಟ್ಟಿನಲ್ಲಿ ಕ್ರಮಕ್ಕೆ ಸೂಚಿಸುತ್ತಾರೆಂಬುದನ್ನು ಜನ ಕಾತರದಿಂದ ಕಾಯುತ್ತಿದ್ದಾರೆ. ಯಾವ ಟಾನಿಕ್‌ ನೀಡುತ್ತಾರೆ ಎಂಬುದು ಕುತೂಹಲ ಮೂಡಿದೆ.

ಇದನ್ನೂ ಓದಿ: ನಾಲ್ಕು ತಿಂಗಳ ಮಗುವನ್ನು ಮನೆ ಛಾವಣಿಯಿಂದ ಕೆಳಕ್ಕೆಸೆದ ಕೋತಿ!

ಇಂದು ಅಹವಾಲು ಸ್ವೀಕಾರ

ಜುಲೈ 18ರಂದು ಸಂಜೆ 4ಕ್ಕೆ ಕಲಬುರಗಿ ಮಹನಾಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಎಡಿಜಿಪಿ ಅಲೋಕಕುಮಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ಪೊಲೀಸ್‌ ಇಲಾಖೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಬಹುದಾಗಿದೆ.

ಅಪರಾಧ ಪ್ರಕರಣಗಳು ಹೆಚ್ಚಳ

ಕಲಬುರಗಿ ಮಹಾನಗರ ಪೊಲೀಸ್‌ ಆಯುಕ್ತಾಲಯ ಆದ ನಂತರ ಅಪರಾಧ ಪ್ರಕರಣಗಳು ಕಡಿಮೆ ಆಗಬೇಕು. ಆದರೆ ಉಲ್ಟಾ ಜಾಸ್ತಿಯಾಗಿರುವುದನ್ನು ಅಂಕಿ-ಅಂಶಗಳೇ ನಿರೂಪಿಸುತ್ತಿವೆ. ಕೊಲೆಗಳಂತೂ ರಾಜಾರೋಷವಾಗಿ ನಡೆಯುತ್ತಿವೆ. ಯುವಕರಂತೂ ಯಾರ ಭಯವಿಲ್ಲದೇ ನಿರ್ಭಯವಾಗಿ ಅಪರಾಧ ಪ್ರಕರಣಗಳಲ್ಲಿ ಆಸಕ್ತಿ ತೋರುತ್ತಿರುವುದು ಭಯ ಮೂಡಿಸುತ್ತಿದೆ. ಯುವಕರ ತ್ರಿಬಲ್‌ ರೈಡ್‌ ಸಾಮಾನ್ಯ ಎನ್ನುವಂತಾಗಿದೆ. ಇದೇ ಕಾರಣಕ್ಕೆ ಅಪಘಾತಗಳು ನಿಯಂತ್ರಣ ಇಲ್ಲ ಎನ್ನುವಂತೆ ನಡೆಯುತ್ತಿವೆ. ಒಟ್ಟಾರೆ ಅಪರಾಧಿಗಳಿಗೆ ಪೊಲೀಸರ ಭಯಯೇ ಇಲ್ಲ ಎನ್ನುವಂತಾಗಿದೆ.

ಕಳೆದ ಆರು ತಿಂಗಳ ಅವಧಿಯಲ್ಲಿ ಕಲಬುರಗಿ ಮಹಾನಗರದಲ್ಲಿ 18 ಕೊಲೆಗಳಾಗಿವೆ. ಕಳೆದ ವರ್ಷ 38 ಹಾಗೂ ಅದರ ಹಿಂದಿನ ವರ್ಷ 27 ಕೊಲೆಗಳಾಗಿದ್ದವು. ಅದೇ ರೀತಿ ಪ್ರಸ್ತುತ ಆರು ತಿಂಗಳ ಅವಧಿಯಲ್ಲಿ 45 ಮನೆ ಹಾಗೂ ದರೋಡೆ ಪ್ರಕರಣಗಳು ನಡೆದಿದ್ದರೆ ಕಳೆದ ವರ್ಷ 86, ಅದರ ಹಿಂದಿನ ವರ್ಷ 68 ಪ್ರಕರಣಗಳು ನಡೆದಿದ್ದವು. ಇದು ಪೊಲೀಸ್‌ ಆಯುಕ್ತಾಲಯವಾಗಿದ್ದರೂ ಅಪರಾಧ ಸಂಖ್ಯೆಗಳು ಕಡಿಮೆಯಾಗದೇ ಹೆಚ್ಚಳವಾಗಿರುವುದು ನಿರೂಪಿಸುತ್ತದೆ.

ಕಳೆದೆರಡು ವರ್ಷಗಳಿಂದ ರೌಡಿಗಳಿಗೆ ಭಯ ಹುಟ್ಟಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಾಚರಣೆ ನಡೆದಿರುವುದನ್ನು ಕಾಣಬಹುದಾಗಿದೆ. ರೌಡಿ ಪರೇಡ್‌ ನಡೆಸಿ ಎಚ್ಚರಿಕೆ ನೀಡುವುದಕ್ಕೆ ಮಾತ್ರ ಸಿಮೀತ ಎನ್ನುವಂತಾಗಿದೆ.

ಗಾಣಗಾಪುರ ನಕಲಿ ವೆಬ್ಸೈಟ್

ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅರ್ಚಕರು ನಕಲಿ ವೆಬ್‌ಸೈಟ್‌ ತೆರೆದು ಸರ್ಕಾರಕ್ಕೆ ಬೊಕ್ಕಸಕ್ಕೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ ಐಆರ್‌ ದಾಖಲಾಗಿದೆ. ಆದರೆ ತನಿಖೆಗೆ ಸಂಬಂಧಿಸಿದಂತೆ ಸರಿಯಾದ ನಿಟ್ಟಿನಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಸರಿಯಾದ ದಾಖಲೆಗಳನ್ನು ತನಿಖಾಧಿಕಾರಿ ನಿರ್ವಹಿಸುತ್ತಿಲ್ಲ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಎಡಿಜಿಪಿಯವರು ನಿಗಾ ವಹಿಸುವುದು ಅಗತ್ಯವಾಗಿದೆ.

ಎಸ್ಪಿ ಹಾಗೂ ಐಜಿಯಾಗಿದ್ದಾಗ ನೇರವಾಗಿ ಕೆಲಸ ಮಾಡಬಹುದಾಗಿದೆ. ಆದರೆ ಈ ಎಡಿಜಿಪಿಯಾಗಿ ಕೆಲಸ ಮಾಡಿಸಬೇಕಿದೆ. ಕಲಬುರಗಿ ಜಿಲ್ಲೆ ಹಾಗೂ ಮಹಾನಗರ ಕಾನೂನು ಸುವ್ಯವಸ್ಥೆ ಕುರಿತಾಗಿ ಸುದೀರ್ಘ‌ ಸಭೆ ನಡೆಸಿ ಸಮಾಲೋಚಿಸಲಾಗುವುದು.ಅಲೋಕಕುಮಾರ, ಎಡಿಜಿಪಿ

-ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.