ಅನ್ನಛತ್ರ ಕಾರ್ಯ ಶ್ಲಾಘನೀಯ: ಪ್ರತಾಪಸಿಂಗ್
Team Udayavani, Dec 16, 2021, 11:55 AM IST
ಸೊಲ್ಲಾಪುರ: ಅಕ್ಕಲಕೋಟ ಪಟ್ಟಣದ ಶ್ರೀ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನಮೇಜಯರಾಜೆ ಭೋಸಲೆ ಮತ್ತು ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ಮಾರ್ಗದರ್ಶನದಲ್ಲಿ ಕಳೆದ 32 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದ ಕಾರ್ಯ ಗಮನಾರ್ಹವಾಗಿವೆ ಎಂದು ಸಾತಾರ ಜಿಲ್ಲೆಯ ಭಾರತ ಫೋರ್ಸ್ ಕಂಪನಿಯ ಪ್ಲಾಂಟ್ ಮುಖ್ಯಸ್ಥ ಪ್ರತಾಪಸಿಂಗ್ ಬಂಡುಸಿಂಗ್ ರಜಪೂತ ಹೇಳಿದರು.
ಅಕ್ಕಲಕೋಟ ತಾಲೂಕಿನ ದೇಶಮುಖ ಬೋರಗಾಂವದ ಸುಪುತ್ರ ಸದ್ಯ ಸಾತಾರಾದಲ್ಲಿ ಇರುವ ಭಾರತ್ ಫೋರ್ಸ್ ಕಂಪನಿಯ ಪ್ಲಾಂಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಅವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಅಕ್ಕಲಕೋಟಕ್ಕೆ ಬಂದು ಸ್ವಾಮಿ ಸಮರ್ಥರ ದರ್ಶನ ಪಡೆದು, ಅನ್ನಛತ್ರ ಮಂಡಳಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸ್ವಾಮಿ ಸಮರ್ಥ ಟ್ರಸ್ಟ್ ಯಾವಾ ಗಲೂ ಸಾಮಾಜಿಕ ಬದ್ಧತೆ ನಿರ್ವಹಿಸುತ್ತ ಬಂದಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಸ್ವಾಮಿ ಸಮರ್ಥರ ಆಶೀರ್ವಾದವೇ ಪ್ರಸಾದವಾಗಿದ್ದು, ಭವಿಷ್ಯದಲ್ಲಿ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಪ್ರಕಾಶ ಸುರವಸೆ, ಶಂಕರ ವ್ಹನಮಾನೆ, ವಾಲ್ಚಂದ ನಗರದ ಸ್ವಾಮಿ ಸಮರ್ಥ ಸೇವಾ ಮಂಡಳದ ಕಾರ್ಯದರ್ಶಿ ಅಮೋಲ ರಜಪೂತ, ರೇಖಾ ರಜಪೂತ, ಅಭಿಷೇಕ್ ರಜಪೂತ, ರಾಧಿಕಾ ರಜಪೂತ ಹಾಗೂ ಭಕ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.