ಗಮನ ಬೇರೆಡೆ ಸೆಳೆದು ಆಭರಣ-ನಗದು ಕಳ್ಳತನ
Team Udayavani, Feb 4, 2022, 10:16 AM IST
ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರ ಬಂಗಾರ ವ್ಯಾಪಾರಿಯ ಅಂದಾಜು 15.20 ಲಕ್ಷ ರೂ. ಮೌಲ್ಯದ 380 ಗ್ರಾಂ ಬಂಗಾರ ಆಭರಣ ಮತ್ತು 1.50 ಲಕ್ಷ ರೂ. ಹಣವಿರುವ ಬ್ಯಾಗ್ ಕಳ್ಳತನವಾಗಿರುವ ಪ್ರಕರಣ ಬುಧವಾರ ಸಂಜೆ ನಡೆದಿದೆ.
ಕಲಬುರಗಿ ಬಸವೇಶ್ವರ ಕಾಲೋನಿಯಲ್ಲಿ ವಾಸವಿರುವ ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಚೋಟಿ ನಿವಾಸಿ ನಾಗಯ್ಯ ಸ್ವಾಮಿ ಪಟ್ಟಣದಲ್ಲಿನ ಬಂಗಾರದ ಅಂಗಡಿಗಳಿಗೆ ಬಂಗಾರದ ಮೂಗಿನ ಕಡ್ಡಿ, ಇತರೆ ಬಂಗಾರ ಸಾಮಾನು ಮಾರಾಟ ಮಾಡಿ ಮರಳಿ ಕಲಬುರಗಿಗೆ ಹೋಗುವಾಗ ಕಳ್ಳತನ ನಡೆದಿದೆ.
ನಾಗಯ್ಯ ಸ್ವಾಮಿ ಅವರು ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುವಾಗ ಅಪರಿಚಿತ ವ್ಯಕ್ತಿಯೊಬ್ಬ ಅವರ ಹತ್ತಿರ ಬಂದು ನಿಮ್ಮ ಅಂಗಿ ಮೇಲೆ ಯಾರೋ ವಾಂತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾಗಯ್ಯ ಸ್ವಾಮಿ ಅವರು ಸಮೀಪದ ಹೊಟೇಲ್ ಹತ್ತಿರ ಹೋಗಿ ಅಂಗಿ ತೊಳೆದುಕೊಳ್ಳಲು ಮುಂದಾದಾಗ ಅಪರಿಚಿತ ವ್ಯಕ್ತಿಯೇ ನೀರು ಹಾಕಿ ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಗಾರ ಸಾಮಾನು ಮತ್ತು ನಗದು ಹಣವಿದ್ದ ಬ್ಯಾಗ್ ಕುರ್ಚಿಯ ಮೇಲಿಟ್ಟು ನಾಗಯ್ಯ ಅವರು ಅಂಗಿ ತೊಳೆದುಕೊಳ್ಳುವಾಗ ನೀರು ಹಾಕಿ ಸಹಾಯ ಮಾಡಿದ ವ್ಯಕ್ತಿ ಬಸ್ ಹೋಗುತ್ತಿದೆ ನಾನು ಹೋಗುತ್ತೇನೆ ಎಂದು ತೆರಳಿದ್ದಾರೆ. ಅಂಗಿ ತೊಳೆದುಕೊಂಡು ತಿರುಗಿ ನೋಡುವಷ್ಟರಲ್ಲಿ ಕುರ್ಚಿ ಮೇಲಿಟ್ಟಿದ್ದ ಬಂಗಾರ ಮತ್ತು ನಗದು ಹಣವಿದ್ದ ಬ್ಯಾಗ್ ನಾಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಗಯ್ಯ ಸ್ವಾಮಿ ಅವರು ಆಂಧ್ರಪ್ರದೇಶದ ವಿಜಯವಾಡದಿಂದ ಬಂಗಾರ ಆಭರಣ ತಂದು ಕಲಬುರಗಿ, ಸೇಡಂ, ಚಿತ್ತಾಪುರ ಮುಂತಾದೆಡೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ಸಂಜೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.
ಬಸ್ ನಿಲ್ದಾಣದಲ್ಲಿರುವ ಸಿಸಿ ಕ್ಯಾಮೆರಾ ಕುರಿತು ಮಾಹಿತಿ ಪಡೆಯಲು ಮುಂದಾದಾಗ ಕಳ್ಳತನ ಪ್ರಕರಣ ನಡೆದಿರುವ ಕಡೆಗೆ ಇದ್ದ ಸಿಸಿ ಕ್ಯಾಮೆರಾ ದುರಸ್ತಿಗೆ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ. ಗುರುವಾರ ಬೆಳಗ್ಗೆ ಶಹಾಬಾದ ಡಿವೈಎಸ್ಪಿ ಉಮೇಶ ಚಿಕ್ಕಮಠ ಅವರು ಘಟನಾ ಸ್ಥಳಕ್ಕೆ ಆಗಮಿಸಿ ನಾಗಯ್ಯ ಸ್ವಾಮಿ ಅವರನ್ನು ವಿಚಾರಿಸಿ ಕಳ್ಳತನ ಘಟನೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಎ.ಎಸ್ ಪಟೇಲ್ ಇದ್ದರು. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ತಾಪುರ ಪಟ್ಟಣದಲ್ಲಿ ಇತ್ತೀಚೆಯ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಹಿಂದೇಯೇ ಬಸ್ ನಿಲ್ದಾಣದ ಹತ್ತಿರದ ಎಸ್‌ಬಿಎಚ್ ಬ್ಯಾಂಕ್‌ನಿಂದ ಹಣ ಪಡೆದುಕೊಂಡು ಹೊರಗಡೆ ಬರುವಷ್ಟರಲ್ಲಿಯೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಹಗಲು ಹೊತ್ತಿನಲ್ಲಿ ಮನೆಯ ಕೀಲಿ ಕೈ ಮುರಿದು ಕಳ್ಳತನ ಮಾಡಿದ್ದರು. ಬೈಕ್ ಕಳ್ಳತನಗಳು ವ್ಯಾಪಕವಾಗಿ ನಡೆದಿವೆ. ಇದೀಗ ಬಂಗಾರ ಆಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ ಇಲ್ಲಿಯ ವರೆಗೆ ಮಾತ್ರ ಕಳ್ಳರು ಮಾತ್ರ ಸಿಕ್ಕಿಲ್ಲ. ಹೀಗಾಗಿ ಪಟ್ಟಣದ ಜನತೆಯಲ್ಲಿ ಆತಂಕ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.