ಸಂಸದ ಜಾಧವಗೆ ಬಂಜಾರ ಸಂಘದ ನೋಟಿಸ್‌


Team Udayavani, Dec 22, 2021, 12:01 PM IST

8notice

ಕಲಬುರಗಿ: ಪರಿಶಿಷ್ಟ ಜಾತಿಯಲ್ಲಿರುವ ಬಂಜಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದ ಡಾ|ಉಮೇಶ ಜಾಧವ ಅವರಿಗೆ ಅಖೀಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಘಟಕದಿಂದ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ್‌ ಚವ್ಹಾಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಸಮುದಾಯವನ್ನು ಹೈಜಾಕ್‌ ಮಾಡುವ ಉದ್ದೇಶದಿಂದ ಡಾ|ಜಾಧವ ಸಮಾಜದ ಧರ್ಮಗುರುಗಳಾಗಿದ್ದ ದಿ| ರಾಮರಾವ್‌ ಮಹಾರಾಜರನ್ನು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಕರೆದೊಯ್ದು ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತ ಪ್ರಸ್ತಾವವನ್ನು ಮನವಿ ರೂಪದಲ್ಲಿ ಸಲ್ಲಿಸಿದ್ದಾರೆ. ಇದರಿಂದ ಸಮುದಾಯದ ಜನರಲ್ಲಿ ಗೊಂದಲ ಮೂಡಿದೆ. ಈ ಸಂಬಂಧ ಸಮುದಾಯದ ಮಟ್ಟದಲ್ಲಿ ಒಂದು ಸುತ್ತಿನ ಸಭೆ ಮಾಡಿ ಚರ್ಚಿಸಲಾಗಿದ್ದು, ಮತ್ತೊಮ್ಮೆ ಸಭೆ ಸೇರಿ ವಿವರಣೆ ನೀಡುವಂತೆ ಡಾ|ಜಾಧವ ಅವರಿಗೆ ನೋಟಿಸ್‌ ನೀಡಲಾಗುವುದು ಎಂದರು.

ಅವರು ನೋಟಿಸ್‌ಗೆ ವಿವರಣೆ ನೀಡುವ ಆಧಾರದ ಮೇಲೆ ನ್ಯಾಯ ಪಂಚಾಯಿತಿ ಕರೆಯಲಾಗುತ್ತದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜನ ಜಾಗೃತಿ ಸಮಾವೇಶಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಅಧಿಕಾರ ಕೊಟ್ಟಿದ್ಯಾರು?

ಬಂಜಾರ ಸಮುದಾಯ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಇತರೆ ರಾಜ್ಯಗಳಲ್ಲಿ ಹಿಂದಳಿದ ವರ್ಗ, ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದೆ. ಆದರೆ, ಡಾ|ಉಮೇಶ ಜಾಧವ ಇಡೀ ಬಂಜಾರ ಜನಾಂಗಕ್ಕೆ ಪರಿಶಿಷ್ಟ ಪಂಗಡದಲ್ಲಿನ ಅರಣ್ಯ ಹಕ್ಕು ನಿಯಮಗಳ ವಿನಾಯಿತಿ ಕುರಿತು ಪ್ರಧಾನಿವರೆಗೆ ಮನವಿ ಸಲ್ಲಿಸಿದ್ದಾರೆ. ಇದು ಈಗಾಗಲೇ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯೊಳಗಿರುವ ಸಮುದಾಯಕ್ಕೆ ಯಾವ ಸಂದೇಶ ರವಾನೆ ಮಾಡುತ್ತದೆ? ಸ್ವತಃ ತಂದೆ-ಮಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗೆದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೇಳುವುದು ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.

ಜಾತಿ-ಧರ್ಮದ ಮೇಲೆ ಸಂಸದರು ರಾಜ ಕೀಯ ಮಾಡಬಾರದು. ಪ್ರಧಾನಿ ಅವರಿಗೆ ಸಲ್ಲಿಸಿ ರುವ ಮನವಿ ಪತ್ರ ವಾಪಸ್‌ ಪಡೆಯಬೇಕು. ಇಲ್ಲವೇ, ಸಮಾಜದ ಎಲ್ಲ ಗುರುಗಳನ್ನು ಮತ್ತೂಮ್ಮೆ ಪ್ರಧಾನಿ ಬಳಿಗೆ ಕರೆದೊಯ್ದು, ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ಮಾಡಬೇಕೆಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಪ್ರವೀಣ ಜಾಧವ, ಕಿಶನ್‌ ಚವ್ಹಾಣ, ತುಳಸಿರಾಮ ಪವಾರ, ಬಾಳು ರಾಠೊಡ ಹಾಗೂ ಮತ್ತಿತರರು ಇದ್ದರು.

ಟಾಪ್ ನ್ಯೂಸ್

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Chaitra-Kundapur

BBK11: ಬಿಗ್ ಬಾಸ್ ಸೀಸನ್ 10 ಜೈಲಲ್ಲಿ ವೀಕ್ಷಿಸಿ, 11ರ ಸ್ಪರ್ಧಿಯಾದ ಚೈತ್ರಾ

gold-suresh-bigg-boss

BBK-11: ಬಾಡಿಗಾರ್ಡ್ ಗಳೊಂದಿಗೆ ಬಿಗ್ ಬಾಸ್ ಬಂದ ‘ಗೋಲ್ಡ್ ಸುರೇಶ್’

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

3-aland

Aland: ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು

5-chincholi

Chincholi: ಸಾಲ ಭಾದೆ, ಮುಂಗಾರು ಬೆಳೆ ಹಾನಿಯಿಂದ ‌ಮನನೊಂದು ರೈತ ಆತ್ಮಹತ್ಯೆ

11-

Chittapur: 120 ಮನೆಗಳಿಗೆ ನುಗ್ಗಿದ ಮಳೆ ನೀರು; ಅಪಾರ ಹಾನಿ

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Chaitra-Kundapur

BBK11: ಬಿಗ್ ಬಾಸ್ ಸೀಸನ್ 10 ಜೈಲಲ್ಲಿ ವೀಕ್ಷಿಸಿ, 11ರ ಸ್ಪರ್ಧಿಯಾದ ಚೈತ್ರಾ

byndoor

Udupi: ಕಾರುಗಳ ಢಿಕ್ಕಿ; ಮೂವರಿಗೆ ಗಾಯ

gold-suresh-bigg-boss

BBK-11: ಬಾಡಿಗಾರ್ಡ್ ಗಳೊಂದಿಗೆ ಬಿಗ್ ಬಾಸ್ ಬಂದ ‘ಗೋಲ್ಡ್ ಸುರೇಶ್’

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.