ಬೀದರ:15 ಜನರಿಗೆ ಸೋಂಕು
ಖಾಕಿಗಳನ್ನು ಬೆಂಬಿಡದ ಕೋವಿಡ್ ಕಂಟ್ರೋಲ್ ರೂಂ. ಸೀಲ್‌ಡೌನ್
Team Udayavani, Jul 10, 2020, 11:33 AM IST
ಬೀದರ: ಗಡಿ ನಾಡು ಬೀದರನಲ್ಲಿ ಹೆಮ್ಮಾರಿ ಕೋವಿಡ್ ಸೊಂಕಿನ ಅಬ್ಬರ ಕಳೆದೆರಡು ದಿನಗಳಿಂದ ಕಡಿಮೆಯಾಗಿದ್ದು, ಗುರುವಾರ 15 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 894ಕ್ಕೆ ಏರಿಕೆಯಾಗಿದೆ.
ಬೀದರ ಮತ್ತು ಹುಮನಾಬಾದ ತಾಲೂಕಿನಲ್ಲಿ ತಲಾ 6 ಮತ್ತು ಭಾಲ್ಕಿ ತಾಲೂಕಿನಲ್ಲಿ 3 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂ. ಸಿಬ್ಬಂದಿಯೊಬ್ಬರಿಗೆ ಸೋಂಕು ಒಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಕಂಟ್ರೋಲ್ ರೂಂ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ ಎಂಬ ಅಧಿಕೃತ ಮಾಹಿತಿ ಇದೆ. ಬೀದರ್ ನಗರದ ಎಸ್‌ಪಿ ಕಚೇರಿ ಕಂಟ್ರೋಲ್ ರೂಂ ಕಚೇರಿ 1, ಮುಲ್ತಾನಿ ಕಾಲೋನಿ 01, ಚೌಬಾರಾ 02, ವಿದ್ಯಾನಗರ ಕಾಲೋನಿ 1, ಕೆಇಬಿ ರಸ್ತೆ 1 ಹಾಗೂ ಅಷ್ಟೂರಿನ ಮಂದಿರ ಬಳಿ ನಿವಾಸಿಗೆ ಸೋಂಕು ತಗುಲಿದೆ.
ಹುಮನಾಬಾದನ ಕುಪಲ್‌ತೋಡ್ ಮೊಹಲ್ಲಾದ 3, ಟೀಚರ್ ಕಾಲೋನಿಯ 1, ಪಿಡಬ್ಲ್ಯೂಡಿ ಕ್ವಾಟರ್ 1 ಹಾಗೂ ಹುಣಸಗೇರಾ ಗ್ರಾಮದಲ್ಲಿ 1 ಕೇಸ್ ಪತ್ತೆಯಾಗಿದ್ದರೆ, ಭಾಲ್ಕಿ ತಾಲೂಕು ಮಾಸಿಮಾಡ, ಮರ್ಜಾಪುರ, ಡೋಣಗಾಪುರ ಗ್ರಾಮದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ. ಇಂದಿನ 15 ಜನ ಸೋಂಕಿತರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 894ಕ್ಕೆ ಏರಿಕೆಯಾಗಿದೆ. ಈ ಪೈಕಿ 49 ಮಂದಿ ಸಾವನ್ನಪ್ಪಿದ್ದರೆ, 562 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 283 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯ ಒಟ್ಟು 41,839 ಜನರ ಗಂಟಲ ದ್ರವದ ಮಾದರಿ ಪರೀಕ್ಷಿಸಲಾಗಿದ್ದು, ಈ ಪೈಕಿ 37, 827 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 3118 ಜನರ ವರದಿ ಬರಬೇಕಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.