ನುಡಿದಂತೆ ನಡೆಯದ ಬಿಜೆಪಿ-ಕಾಂಗ್ರೆಸ್: ಪಾಟೀಲ
Team Udayavani, Jan 11, 2022, 12:50 PM IST
ಜೇವರ್ಗಿ: ದೇಶದಲ್ಲಿ ಕಳೆದ ಅನೇಕ ದಶಕಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳು ಯಾವುದೆ ಅಭಿವೃದ್ಧಿ ಮಾಡದೇ ಬರೀ ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ತಾಲೂಕು ಸಂಚಾಲಕ ಈರಣ್ಣಗೌಡ ಆರ್ ಪಾಟೀಲ್ ಗುಳ್ಳಾಳ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಮ್ ಆದ್ಮಿ ಪಕ್ಷದ ತಾಲೂಕು ಪದಾಧಿಕಾರಿಗಳ ನೇಮಕ ಮಾಡಿದ ನಂತರ ಅವರು ಮಾತನಾಡಿ, ದೆಹಲಿ ಮಾದರಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿ ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಎಎಪಿ ಪಕ್ಷವನ್ನು ಬಲಿಷ್ಠಗೊಳಿಸಲು ಕಾರ್ಯಕರ್ತರು ಮುಂದಾಗಬೇಕಾಗಿದೆ. ದೆಹಲಿಯಲ್ಲಿ ಹೇಳಿದಂತೆ ನಡೆದುಕೊಂಡು ಅಭಿವೃದ್ಧಿ ಪಡಿಸಿದ್ದು ಆಮ್ ಆದ್ಮಿ ಪಕ್ಷದ ನಾಯಕ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾತ್ರ. ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳು ಎಲ್ಲವನ್ನು ಈಡೇರಿಸಿದ್ದಾರೆ ಎಂದರು.
ದೆಹಲಿಯಲ್ಲಿ ಸರಕಾರಿ ಶಾಲೆಗಳು ಹೈಟೆಕ್ ಶಾಲೆಗಳಾಗಿವೆ. ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ಬಡವರಿಗೆ ಉಚಿತ ವಿದ್ಯುತ್, ಸೇರಿದಂತೆ ಮೂಲ ಸೌಲಭ್ಯಗಳು ನೀಡಿದ್ದು ಕೇಜ್ರಿವಾಲ್ ಸರಕಾರ. ಅದರಂತೆ ದೇಶದ ಪ್ರತಿ ಜಿಲ್ಲೆ, ತಾಲೂಕು, ಹಳ್ಳಿಗಳು ಅಭಿವೃದ್ಧಿ ಹೊಂದಬೇಕಾದರೆ ಆಮ್ ಆದ್ಮಿ ಪಕ್ಷಕ್ಕೆ ಎಲ್ಲರು ಬೆಂಬಲಿಸಬೇಕೆಂದು ಅವರು ಹೇಳಿದರು. ]
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಹನುಮಂತ್ರಾಯಗೌಡ ವರವಿ, ದಸ್ತಗಿರಸಾಬ ಹರನೂರ, ಬಸವರಾಜ ಹವಾಲ್ದಾರ್ ಸಹ ಸಂಚಾಲಕ, ಶರಣು ಪೂಜಾರಿ ನೇರಡಗಿ ಕಾರ್ಯದರ್ಶಿ, ಅಯ್ಯಣ್ಣ ಹೆಡಗಿಜೋಳ ಆಲೂರ ಸಹ ಕಾರ್ಯದರ್ಶಿ, ಅಬ್ದುಲ್ ನದಾಫ್ ಯಡ್ರಾಮಿ ಸಂಘಟನಾ ಕಾರ್ಯದರ್ಶಿ, ಶಿವಾಜಿ ಧಶರಥ ಕಟ್ಟಿಸಂಗಾವಿ ಖಜಾಂಚಿ, ಅಬ್ದುಲ್ ಇನಾಮದಾರ, ಮಹಾಂತಗೌಡ ಗಂವ್ಹಾರ, ಅಶೋಕ ಪೂಜಾರಿ, ಸಿದ್ದು ಹೂಗಾರ, ಸೊಪಿಸಾಬ್ ನರಿಬೋಳ, ದೇವೀಂದ್ರ ದೊರೆ, ಎಂ.ಬಿ ಯಾಳಗಿ ಸದಸ್ಯರಾಗಿ ನೇಮಕ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.