ಖಜೂರಿಯಲ್ಲಿ ಬೆಂಬಲ ಬೆಲೆಗೆ ಕಡಲೆ ಖರೀದಿ
Team Udayavani, Apr 12, 2022, 1:24 PM IST
ಆಳಂದ: ಖಜೂರಿ ಮತ್ತು ಬಬಲೇಶ್ವರ ಹೀಗೆ ಹಲವಾರ ಕಡೆ ಕಡಲೆ ಬೆಳೆ ಕುರಿತು ಬೆಳೆದಷ್ಟು ನಿಖರವಾಗಿ ಅಧಿಕಾರಿಗಳು ಬೆಳೆಯ ಸರ್ವೇ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಳೆಗಾರರು ಬೆಂಬಲ ಬೆಲೆಯಿಂದ ವಂಚಿತರನ್ನಾಗಿಸಲಾಗಿದೆ ಎಂದು ಕಲಬುರಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಬೆಂಬಲ ಬೆಲೆಯಲ್ಲಿ ಖಜೂರಿ ಕೃಷಿ ಪತ್ತಿನ ಸಹಕಾರ ಸಂಘದ ಅಡಿ ಖಜೂರಿ ಮತ್ತು ಬಬಲೇಶ್ವರ ಗ್ರಾಮದ ರೈತರ ಕಡಲೆ ಧಾನ್ಯ ಖರೀದಿಗೆ ಸಂಬಂಧಿ ಸಿದಂತೆ ಖರೀದಿ ಕೇಂದ್ರವನ್ನು ಆರಂಭಿಸಿ ನೋಂದಾಯಿತ ರೈತರ ಕಡಲೆ ಖರೀದಿ ಆರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸದ್ಯ ಮೂರು ಸಾವಿರ ಪಾಕೇಟ್ ಕಡಲೆ ಖರೀದಿಸಲಾಗಿದೆ. ಇನ್ನೂ ಮೂರ್‍ನಾಲ್ಕು ಸಾವಿರ ರೈತರು ಮಾರಾಟಕ್ಕೆ ನೋಂದಾಯಿಸಿದ್ದಾರೆ. ಎಲ್ಲ ಕಡಲೆ ಖರೀದದಿಗೆ ಒತ್ತು ನೀಡಲಾಗಿದೆ. ಖಜೂರಿಯಲ್ಲಿ ರೈತರು ಕಡಲೆ ಬಹಳಷ್ಟು ಬೆಳೆದರು ಅಧಿಕಾರಿಗಳು ನಡೆಸಿದ ಸರ್ವೇಯಲ್ಲಿ ಕಡಲೆ ಬೆಳೆ ದಾಖಲಿಸುವ ಬದಲು ತೊಗರಿ ಇತರ ಬೆಳೆಯನ್ನೇ ದಾಖಲಿಸಿದ್ದಾರೆ. ಖಜೂರಿಯ ಗ್ರಾಮವೊಂದಲ್ಲೇ ಐದಾರು ಸಾವಿರ ಕ್ವಿಂಟಲ್ ಕಡಲೆ ಬೆಳೆದು ಅಗ್ಗದರದಲ್ಲಿ ಹೊರಗೆ ಮಾರಾಟ ಮಾಡಿದ್ದಾರೆ. ಸರ್ವೇಯಲ್ಲಿ ಕಡಲೆ ಬೆಳೆಯ ಬಗ್ಗೆ ಸರ್ಕಾರಿ ನೌಕರರ ದಾಖಲಿಸಿದೆ ಇರುವುದು ರೈತರಿಗೆ ಅನ್ಯಾಯ ಎಂದರು.
ಬಬಲೇಶ್ವರ ಮತ್ತು ಖಜೂರಿ ಈ ಎರಡು ಗ್ರಾಮಗಳು ನಾಮಕೆವಾಸ್ತೆ ಸರ್ವೇ ಮಾಡಿದ್ದಾರೆ. ಆನ್‌ಲೈನಲ್ಲಿ ಕಡಲೆ ಬೆಳೆ ಸರ್ವೇ ಗಮನಿಸಿದರೆ ಸರ್ವೇ ಪೂರ್ಣವಾಗಿಲ್ಲ ಎಂದೇ ತೋರಿಸುತ್ತದೆ. ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಉಪ ನಿರ್ದೇಶಕರಿಗೆ ಸಾಕಷ್ಟು ಬಾರಿ ಮನವಿ ಮಾಡಿ ಬೆಳೆ ಸರ್ವೇ ಸರಿಪಡಿಸುವಂತೆ ಮನವಿ ಮಾಡಿದರು ದಿನದೊಡಿದ್ದಾರೆ. ಆದರೆ ಅಧಿಕಾರಿಗಳ ಇಂತಹ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ರೈತರಿಗೆ ಸಿಗಬೇಕಾದ ಕಡಲೆಗೆ ಬೆಂಬಲ ಬೆಲೆ ಬಹುತೇಕರು ವಂಚಿತವಾಗಿದ್ದಾರೆ. ಮುಂದೆಯಾದರು ಇಂತಹ ಪ್ರಮಾದ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಖರೀದಿ ಪ್ರಕ್ರಿಯೆ ವೀಕ್ಷಿಸಿದರು. ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗುಣಮಂತ ಢಗೆ, ನಿರ್ದೇಶಕ ಗಾಂಧಿ ಘಂಟೆ, ಬಸವರಾಜ ಸುತಾರ, ಮಲ್ಲು ವಾನೆಗಾಂವ, ಮಲ್ಲು ಬಂಗರಗೆ, ಬಸವರಾಜ ಢಗೆ, ಪಾಟೀಲ, ಕಾರ್ಯದರ್ಶಿ ಸಿದ್ರಾಮ ಆಳಂಗೆ, ಸೂರ್ಯಕಾಂತ ಗುಂಜೋಟೆ ಸೇರಿದಂತೆ ರೈತರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.