ಚಿಂಚೋಳಿ ಪಟ್ಟಣದ ಸಿಸಿ ಕ್ಯಾಮೆರಾ ನಿಷ್ಕ್ರಿಯ: ಪಿಎಸ್‌ಐ
Team Udayavani, Nov 19, 2021, 11:03 AM IST
ಚಿಂಚೋಳಿ: ಪುರಸಭೆಯ 15ನೇ ಹಣಕಾಸು ಯೋಜನೆ ಅಡಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿ ಪಟ್ಟಣದ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ನಿಷ್ಕ್ರೀಯವಾಗಿದ್ದು, ಈ ಕುರಿತು ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪಿಎಸ್‌ಐ ಹಣಮಂತರಾವ್ ಬಿ. ತಿಳಿಸಿದ್ದಾರೆ.
ಈ ಸಿಸಿ ಕ್ಯಾಮೆರಾಗಳನ್ನು ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್ ಚೌಕ್, ತಾಂಡೂರ ಕ್ರಾಸ್, ಹೊಸ ಊರು, ಬಡಿದರ್ಗಾ, ಗಾಂಧಿ ಚೌಕ್, ಪೊಲೀಸ್ ಠಾಣೆ, ಪದ್ಮಾ ಕಾಲೇಜು, ಬಸ್ ನಿಲ್ದಾಣ, ಗಂಗು ನಾಯಕ ತಾಂಡಾ, ಲಕ್ಷ್ಮೀ ದೇವಾಲಯ, ನಿಣ್ಣಿ ಕ್ರಾಸ್ ಸೇರಿದಂತೆ ಒಟ್ಟು 25 ಸಿಸಿ ಕ್ಯಾಮೆರಾಗಳನ್ನು 15 ಕಡೆಗಳಲ್ಲಿ ಅಳವಡಿಸಲಾಗಿದೆ. ಅಲ್ಲದೇ ಚಂದಾಪುರ ಮಹಾತ್ಮಾಗಾಂಧಿ ವೃತ್ತದಲ್ಲಿ ಕಳೆದ ಆಗಸ್ಟ್ 18ರಂದು ಈ ಕ್ಯಾಮೆರಾಗಳನ್ನು ಉದ್ಘಾಟಿಸಲಾಗಿತ್ತು. ಆ ನಂತರ ಇವುಗಳ ನಿರ್ವಹಣೆಯನ್ನು ಪೊಲೀಸ್ ಇಲಾಖೆಗೆ ನೀಡಿರಲಿಲ್ಲ. ಈ ಸಿಸಿ ಕ್ಯಾಮೆರಾಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಆದ್ದರಿಂದ ಕೆಲವೆಡೆ ಜೋತು ಬಿದ್ದಿದ್ದು, ಯಾವುದೇ ಅಪರಾಧ ಕೃತ್ಯಗಳ ದೃಶ್ಯಗಳು ಲಭ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದುರಸ್ತಿಗೆ ಗುತ್ತಿಗೆದಾರನಿಗೆ ಸೂಚನೆ
ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಇಂದಿರಾ ಕ್ಯಾಂಟಿನ್, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಹತ್ತಿರದ ಸಿಸಿ ಕ್ಯಾಮೆರಾಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಗಾಂಧಿ ಚೌಕ್ ಹತ್ತಿರ ಮಳೆ ನೀರಿನಿಂದ ಸಿಸಿ ಕ್ಯಾಮೆರಾಗಳು ಹಾಳಾಗಿವೆ. ಇವುಗಳನ್ನು ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆ ದಾರನಿಗೆ ತಿಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.