ಗಡಿನಾಡಿಗೆ ಚಂಪಾ ಕೊಡುಗೆ ಅಪಾರ: ಬೆಳ್ಳುಬ್ಬಿ
Team Udayavani, Jan 14, 2022, 12:20 PM IST
ಸೊಲ್ಲಾಪುರ: ಗಡಿನಾಡು ಕನ್ನಡಿಗರು ಸಾಹಿತಿ ದಿ. ಚಂದ್ರಶೇಖರ ಪಾಟೀಲ ಅವರ ಖುಣ ತೀರಿಸಲು ಸಾಧ್ಯವಿಲ್ಲ ಎಂದು ಕನ್ನಡ ಹೋರಾಟಗಾರ ಸುಭಾಷ ಬೆಳ್ಳುಬ್ಬಿ ಹೇಳಿದರು.
ಜತ್ತ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮಾಧ್ಯಮ ವಿದ್ಯಾ ಲಯದ ಸಂಯುಕ್ತ ಆಶ್ರಯದಲ್ಲಿ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿ ದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಂಪಾ ಅವರು “ಕನ್ನಡ-ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಚಂಪಾ ಕನ್ನಡಿಗರಿಗೆ ಕರೆ ಕೊಟ್ಟಿದ್ದರು. ಅದರಂತೆ ನಾವೆಲ್ಲ ಒಟ್ಟಾಗಿ ಗಡಿ ಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಿ.ಎಸ್. ಕುಂಬಾರ ಮಾತನಾಡಿ, ಚಂಪಾ ಬಹುಮುಖ ಪ್ರತಿಭೆ. ನಾಡು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕ್‌ಜಾನ್ ಶೇಖ ಮಾತನಾಡಿ, ಮಹಾಜನ್ ವರದಿ ಯಥಾವತ್ತಾಗಿ ಜಾರಿ ಆಗಬೇಕೆಂಬುದು ಚಂಪಾ ಅವರ ಆಶಯವಾಗಿತ್ತು. ಜತ್ತ ಮತ್ತು ಅಕ್ಕಲಕೋಟ ತಾಲೂಕಿನ ಕನ್ನಡರೂ ನಮ್ಮವರು ಎನ್ನುವ ಕಾಳಜಿ ಅವರಲ್ಲಿತ್ತು. ಅವರು ಗಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ ಎಂದು ಹೇಳಿದರು.
ಚಂಪಾ ಪ್ರತಿಮೆ ಹಾಗೂ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠಗೆ ಕನ್ನಡ ಮಾಧ್ಯಮ ವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್. ಸೋಲಾಪುರೆ ಹಾಗೂ ಜತ್ತ ತಾಲೂಕಿನ ಸಾಹಿತ್ಯಾಸಕ್ತರು, ಹೋರಾಟಗಾರರು, ಪ್ರಾಥಮಿಕ ಶಾಲೆ ಶಿಕ್ಷಕರು, ವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸಿದರು. ಬಿ ಜಿ ಕುಂಬಾರ ನಿರೂಪಿಸಿದರು, ಆರ್.ಜಿ. ವಾಳವೇಕರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.