ಕೈಯಲ್ಲಿ ಮೊಟ್ಟೆ ಹಿಡಿದು ಮಕ್ಕಳ ಪ್ರತಿಭಟನೆ
Team Udayavani, Dec 23, 2021, 11:11 AM IST
ಜೇವರ್ಗಿ: ಮಠಾಧೀಶರ ಒತ್ತಡಕ್ಕೆ ಮಣಿಯದೇ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ ಯೋಜನೆ ಸರ್ಕಾರ ಕೈ ಬಿಡಬಾರದು ಎಂದು ಒತ್ತಾಯಿಸಿ ಮಕ್ಕಳ ಕೂಟದ ವತಿಯಿಂದ ಮಕ್ಕಳು ಮೊಟ್ಟೆ, ಬಾಳೆಹಣ್ಣು ಕೈಯಲ್ಲಿ ಹಿಡಿದು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಬಡತನ, ನಿರುದ್ಯೋಗ, ಅಪೌಷ್ಟಿಕತೆ ತಾಂಡವವಾಡುತ್ತಿದೆ. ಕಲಬುರಗಿ ಜಿಲ್ಲೆಯ ಮಕ್ಕಳಲ್ಲಿ ಶೇ.74ಕ್ಕಿಂತಲೂ ಹೆಚ್ಚು ಅಪೌಷ್ಟಿಕತೆ ಇದೆ. ಇದು ಅತ್ಯಂತ ತಲ್ಲಣದ ವಿಷಯ ಎಂಬುದು ಕೆಲವರಿಗೆ ಅರ್ಥವಾಗುತ್ತಿಲ್ಲ. ಮಠಾಧೀಶರಿಗೆ ಈ ವಿಷಯ ಗಂಭೀರವಾಗಿ ಕಾಣುತ್ತಿಲ್ಲ. ಕೆಲ ಮಠಾಧಿಧೀಶರು ಸಮಾಜದಲ್ಲಿ ಅವೈಜ್ಞಾನಿಕ ಚಿಂತನೆ ಹರಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತ, ಹಿಂದುಳಿದ, ಬಡತನದಲ್ಲಿ ಹೆಚ್ಚಿರುವ ಮಕ್ಕಳೇ ಸರ್ಕಾರಿ ಶಾಲೆಗೆ ಹೆಚ್ಚಾಗಿ ಹೋಗುತ್ತಾರೆ. ಈ ಮಕ್ಕಳಿಂದ ಪೌಷ್ಟಿಕ ಆಹಾರ ಕಿತ್ತುಕೊಳ್ಳುವುದು ಎಂದರೆ ಎಲ್ಲ ಮಕ್ಕಳಿಗೂ ಪೌಷ್ಟಿಕ ಆಹಾರ ದೊರೆಯದಂತೆ ಮಾಡುವುದಾಗಿದೆ. ಆದ್ದರಿಂದ ಯಾರ ಮಾತಿಗೂ ಕಿವಿಗೊಡದೇ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಡುವ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ವಿನಯಕುಮಾರ ಪಾಟೀಲ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಸುಭಾಷ ಹೊಸಮನಿ, ಪರಶುರಾಮ ಬಡಿಗೇರ, ತಾಯಪ್ಪ ಹೊಸಮನಿ, ಜೈಭೀಮ ಕಟ್ಟಿಮನಿ, ಅನುಸೂಯಾ ಟಣಕೇದಾರ, ರೇವುನಾಯಕ ರೇವನೂರ, ಮಲ್ಕಪ್ಪ ಹರನೂರ, ಮಲ್ಲಪ್ಪ ಹರನೂರ, ಶಂಕರಲಿಂಗ ಹನ್ನೂರ ರೇವನೂರ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.