ಚಿಂಚೋಳಿಯಲ್ಲಿ ಉತ್ತಮ ಮಳೆ
Team Udayavani, Jun 19, 2020, 10:38 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಬಿರುಗಾಳಿ ಸಮೇತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ.
ತೊಗರಿ, ಉದ್ದು, ಹೆಸರು, ಹೈಬ್ರಿಡ್ ಜೋಳ, ಸಜ್ಜೆ ಬಿತ್ತನೆ ಕಾರ್ಯ ನಡೆಯುತ್ತಿದ್ದು, ರೈತರಿಗೆ ಬಿಡುವು ಇಲ್ಲದಂತಾಗಿದೆ. ರೈತರ ನಿರೀಕ್ಷೆಯಂತೆ ಮುಂಗಾರು ಮಳೆಯೂ ಜೂನ್ ಮೊದಲ ವಾರದಲ್ಲಿ ಬರುತ್ತಿರುವುದರಿಂದ ಕೋಡ್ಲಿ ವಲಯದಲ್ಲಿ ಒಂದೇ ದಿನ 41.2 ಮಿಮೀ ಮಳೆ ಸುರಿದಿದ್ದು, ಎರಡು ದಿನಗಳಲ್ಲಿ 68.6 ಮಿಮೀ ಮಳೆ ಆಗಿದೆ. ಐನಾಪುರದಲ್ಲಿ ಮಳೆ ಆಗುತ್ತಿರುವುದರಿಂದ ಹಿಂದುಳಿದ ಪ್ರದೇಶ ತಾಂಡಾ ಮತ್ತು ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ ಎಂದು ತಾಪಂ ಸದಸ್ಯ ಪ್ರೇಮಸಿಂಗ ಜಾಧವ್ ಮತ್ತು ರೈತ ಮುಖಂಡ ರಮೇಶ ಪಡಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಗುರುವಾರ ಸಂಜೆ ವ್ಯಾಪಕವಾಗಿ ಮಳೆ ಆಗಿರುವುದರಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿಯುಂಟಾಗಿ ಬಿತ್ತನೆ ಕಾರ್ಯವನ್ನು ರೈತರು ಅರ್ಧಕ್ಕೆ ನಿಲ್ಲಿಸಿದರು. ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಗುರುವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ವೇಳೆಯಲ್ಲಿ ವೆಂಕಟಾಪುರ, ಧರ್ಮಸಾಗರ, ಪೆದ್ದಾತಾಂಡಾ, ಶಾದೀಪುರ, ಸಂಗಾಪುರ, ಸೇರಿಭಿಕನಳ್ಳಿ, ಮೋಟಿಮೋಕ ತಾಂಡಾಗಳಲ್ಲಿ ವ್ಯಾಪಕ ಮಳೆ ಆಗಿದೆ. ಜೂನ್ ಮೊದಲ ವಾರದಿಂದಲೇ ಅಲ್ಪ ಸ್ವಲ್ಪ ಮಳೆ ಆಗುತ್ತಿರುವುದರಿಂದ ಕುಂಚಾವರಂ ವನ್ಯಧಾಮ ಇದೀಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ವನ್ಯಜೀವಿಧಾಮ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ತಿಳಿಸಿದ್ದಾರೆ.
ಮಳೆ ವಿವರ: ಚಿಂಚೋಳಿ 37.2 ಮಿಮೀ, ಕೋಡ್ಲಿ 68.6 ಮಿಮೀ, ಐನಾಪುರ 33.5 ಮಿಮೀ, ಕುಂಚಾವರಂ 26.4 ಮಿಮೀ, ಸುಲೇಪೇಟ 39.8 ಮಿಮೀ, ನಿಡಗುಂದಾ 61.5 ಮಿಮೀ, ಚಿಮ್ಮನಚೋಡ 22.2 ಮಿಮೀ ಮಳೆ ಆಗಿದೆ. ಶುಕ್ರವಾರವು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯ ಶ್ರೀಮಂತ ಕನಕಪುರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.