![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jul 25, 2023, 3:05 PM IST
ಚಿಂಚೋಳಿ: ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನದಿಂದ ರಾತ್ರಿಯಿಡೀ ಸುರಿದ ಧಾರಾಕಾರವಾಗಿ ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿ ನದಿ ನೀರಿನ ಪ್ರವಾಹ ಉಂಟಾಗಿ ಅನೇಕ ಮನೆಗೆ ನೀರು ನುಗ್ಗಿ ಹಾನಿಯನ್ನುಂಟ ಮಾಡಿದೆ.
ತಾಲೂಕಿನ ದೇಗಲಮಡಿ, ಗರಗಪಳ್ಳಿ, ಚಿಂಚೋಳಿ ಪಟ್ಟಣದ ಹರಿಜನವಾಡ, ಛೋಟಿದರ್ಗಾ, ಬಡಿದರ್ಗಾ ಬಡಾವಣೆಯ ಅನೇಕ ಮನೆಗಳಲ್ಲಿ ಮುಲ್ಲಾಮಾರಿ ನದಿಯ ಪ್ರವಾಹ ನೀರು ನುಗ್ಗಿದೆ.
ಚಿಂಚೋಳಿ ಪಟ್ಟಣದಲ್ಲಿ ಹರಿಜನವಾಡ, ಚೋಟಿದರ್ಗಾ, ಬಡಿದರ್ಗಾ ಬಡಾವಣೆಯಲ್ಲಿ ಸೋಮವಾರ ಮಧ್ಯರಾತ್ರಿ ಮನೆಗೆ ನೀರು ನುಗ್ಗಿದ್ದರಿಂದ ಭಯಭೀತರಾದ ಜನರು ಚಿಕ್ಕ ಮಕ್ಕಳನ್ನು ಬಗಲಿನಲ್ಲಿ ಎತ್ತಿಕೊಂಡು ಹೊರಗಡೆ ಓಡಿ ಬಂದಿದ್ದಾರೆ ಎಂದು ನಿವಾಸಿ ಕೆ.ಎಂ.ಬಾರಿ ತಿಳಿಸಿದ್ದಾರೆ.
ದೇಗಲಮಡಿ ಗ್ರಾಮದಲ್ಲಿಯೂ ನದಿಯ ನೀರು ಊರಿನೊಳಗೆ ಹೊಕ್ಕಿದ್ದರಿಂದ ಜನರು ಮನೆಯ ಸಾಮಾಗ್ರಿಳ ಸಮೇತ ಹೊರಗೆ ಬಂದಿದ್ದಾರೆ ಎಂದು ದೇಗಲಮಡಿ ಗ್ರಾಮದ ಅವಿನಾಶ್ ಗೋಸುಲ ತಿಳಿಸಿದ್ದಾರೆ.
ದೇಗಲಮಡಿ ಗ್ರಾಮದ ಸಿದ್ದೇಶ್ವರ ಕಾಲೋನಿಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ಬಟ್ಟೆಗಳು ದಿನಸಿ ಸಾಮಗ್ರಿಗಳು ಹಾನಿಯಾಗಿದೆ ಎಂದು ಮಸ್ತಾನ ಕೋಡ್ಲಿ ತಿಳಿಸಿದ್ದಾರೆ.
ತಾಲೂಕಿನ ಕೆರೋಳಿ, ಬೆನಕನಹಳ್ಳಿ, ಶಿರೋಳಿ, ಕೊರಡಂಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಅಣವಾರ, ಪೊಲಕಪಳ್ಳಿ ಗ್ರಾಮಗಳಲ್ಲಿ ನದಿಯ ನೀರು ನುಗ್ಗಿದ್ದರಿಂದ ಜನರು ಭಯಭೀತರಾಗಿದ್ದಾರೆ.
ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುವ ಮಳೆಗೆ ಕೆಳದಂಡೆ ಮುಲ್ಲಾಮಾರಿ ಜಲಾಶಯ ಒಳಹರಿವು ಹೆಚ್ಚಿದ್ದು, ನದಿಗೆ ನಾಲ್ಕು ಗೇಟ್ ಮೂಲಕ ಆರು ಸಾವಿರ ಕ್ಯೂಸೆಕ್ ನೀರು ಬಿಡಲಾಯಿತು.
ನದಿ ದಂಡೆಯ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಗರಗಪಳ್ಳಿ, ಇರಗಪಳ್ಳಿ, ಚಂದಾಪುರ ಬ್ಯಾರೇಜ್ ಜಲಾವೃತವಾಗಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಯಿತು.
ಕುಂಚಾವರಂ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಜೋರಾಗಿ ಮಳೆಯಾಗಿರುವ ಕಾರಣ ಚಂದ್ರಂಪಳ್ಳಿ ಜಲಾಶಯದಲ್ಲಿ ಒಳಹರಿವು ಉಂಟಾಗಿದ್ದರಿಂದ 4900 ಕ್ಯೂಸೆಕ್ ನೀರು ಹೊರಗೆ ಬಿಡಲಾಯಿತು ಎಂದು ಎಇಇ ಚೇತನ ಕಳಸ್ಕರ ಹೇಳಿದ್ದಾರೆ.
ಪಟ್ಟಣದಲ್ಲಿ ವ್ಯಾಪಕವಾಗಿ ಮಳೆಗೆ ಮುತ್ತುಲ ನಾಲಾ ಸಂಪೂರ್ಣವಾಗಿ ತುಂಬಿ ಹರಿಯುತ್ತಿದೆ. ಚಂದ್ರಂಪಳ್ಳಿ,ಕೆಳದಂಡೆ ಮುಲ್ಲಾಮಾರಿ ಜಲಾಶಯಗಳಿಂದ ಹರಿದು ಬಿಟ್ಟಿರುವ ನೀರಿನಿಂದ ಪ್ರವಾಹ ಉಂಟಾಗಿ ನದಿಪಾತ್ರದ ಗ್ರಾಮಸ್ಥರು ತೊಂದರೆ ಪಡಬೇಕಾಗಿದೆ.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.