Chincholi: ಎಲ್ಲೆಡೆ ಭಾರೀ ಮಳೆ; ತುಂಬಿ ಹರಿಯುತ್ತಿರುವ ಜಲಪಾತಗಳು
ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಮನವಿ
Team Udayavani, Jul 21, 2023, 12:16 PM IST
ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ಕುಂಚಾವರಂ ಎತ್ತಪೋತಜಲಧಾರೆ ಧುಮ್ಮಿಕ್ಕಿ ಮೈದುಂಬಿ ಹರಿಯುತ್ತಿದೆ.
ಕುಂಚಾವರಂ ಗಡಿಪ್ರದೇಶ ವನ್ಯಜೀವಿ ಅರಣ್ಯ ಪ್ರದೇಶದ ವೆಂಕಟಾಪುರ, ಸಂಗಾಪುರ, ಕುಸರಂಪಳ್ಳಿ, ಚುನ್ನಾಭಟ್ಟಿ ತಾಂಡಾ, ಕೊಹಿರ, ಮೊಗಡಮಪಳ್ಳಿ, ಗೊಟ್ಟಂಗೊಟ್ಟ ಗ್ರಾಮಗಳಲ್ಲಿ ಜಿಟಿಜಿಟಿಯಾಗಿ ಬಿರುಸಿನ ಮಳೆ ಆಗಿದೆ.
ಸೋಮವಾರ 80 ಮಿಮಿ ಮತ್ತು ಮಂಗಳವಾರ 70 ಮಿಮಿ ಮಳೆಯಾಗಿದೆ. ಕುಂಚಾವರಂ ವನ್ಯಜೀವಿ ಧಾಮ ಹಚ್ಚ ಹಸುರಿನ ಗಿಡಮರಗಳ ಮಧ್ಯೆ ಹರಿಯುವ ಎತ್ತಪೋತ ಜಲಪಾತ ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತಿದೆ.
ಬುಧವಾರ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದೆ. ಜಲಾಶಯದಲ್ಲಿ ಒಳ ಹರಿವು ಉಂಟಾಗುತ್ತಿರುವ ಕಾರಣ ಬುಧವಾರ ರಾತ್ರಿಯಲ್ಲಿ ಮುಲ್ಲಾಮಾರಿ ನದಿಗೆ ನೀರು ಹರಿಬಿಡಲಾಗುತ್ತಿದೆ ಎಂದು ಎ.ಇ.ಇ. ಅರುಣಕುಮಾರ ತಿಳಿಸಿದ್ದಾರೆ.
ನದಿಯ ಪಾತ್ರದಲ್ಲಿ ಇರುವ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಪೊಲಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಕರ್ಚಖೇಡ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ನದಿಗೆ ಜಾನುವಾರು ಬಿಡಬಾರದು ಮತ್ತು ಬಟ್ಟೆಗಳನ್ನು ತೊಳೆಯುವುದಕ್ಕಾಗಿ ಹೋಗಬಾರದು ಎಂದು ಗ್ರಾಮಸ್ಥರಿಗೆ ಡಂಗೂರ ಮೂಲಕ ಸೂಚನೆ ನೀಡಲಾಯಿತು. ಈ ಕುರಿತು ಕೆಳದಂಡೆ ಮುಲ್ಲಾಮಾರಿ ಯೋಜನೆ ಎಇಇ ಅರುಣ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.