ಚಿಂಚೋಳಿ: ಚಂದ್ರಪಳ್ಳಿ-ಚಿಕ್ಕನಿಂಗದಳ್ಳಿಕೆರೆ ಸುತ್ತ ಕೆರೆ ಸುತ್ತ ಹಕ್ಕಿಗಳ ಕಲರವ
ಪಕ್ಷಿಗಳು ನೆರಳಿನಾಸರೆ ಪಡೆದು ಸಂಜೆ ತಂಪು ವಾತಾವರಣದಲ್ಲಿ ಬಾನಲ್ಲಿ ಹಾರಾಡುತ್ತವೆ.
Team Udayavani, May 29, 2023, 6:00 PM IST
ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಕೆರೆ ಅಕ್ಕಪಕ್ಕ ವಲಸೆ ಹಕ್ಕಿಗಳು ಆಗಮಿಸಿದ್ದು, ಪಕ್ಷಿ ಪ್ರೇಮಿಗಳ ಮನಸೂರೆಗೊಂಡಿವೆ. ವಿವಿಧ ಭಾಗಗಳಿಂದ ಆಗಮಿಸುವ ಈ ಅತಿಥಿಗಳು ಕೆರೆ ಅಕ್ಕಪಕ್ಕದ ಗಿಡ-ಮರಗಳ ಆಶ್ರಯ ಪಡೆದಿವೆ.
ಸಂತಾನೋತ್ಪತ್ತಿಗೆಂದು ದೂರ ದೂರದ ಪ್ರದೇಶಗಳಿಂದ ಲಗ್ಗೆ ಇಡುವ ಈ ಬಾನಾಡಿಗಳು ಗಿಡ-ಮರಗಳ ಪೊಟರುಗಳಲ್ಲಿ ಗೂಡು ಕಟ್ಟಿಕೊಂಡು ಮಳೆಗಾಲ ಮುಗಿಯುವವರೆಗೆ ಇಲ್ಲಿಯೇ ವಾಸವಾಗಿರುತ್ತವೆ.
ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಈ ಎರಡೂ ಕೆರೆಗಳು ಹಕ್ಕಿಗಳ ನಿವಾಸ ಸ್ಥಾನವಾಗಿದ್ದು, ಹಕ್ಕಿಗಳ ಚಿಲಿಪಿಲಿ ನಿನಾದ ಕರ್ಣಗಳಿಗೆ ಹಿತವನ್ನುಂಟು ಮಾಡುತ್ತವೆ. ಬಣ್ಣಬಣ್ಣದ ಈ ಹಕ್ಕಿಗಳು ಕಣ್ಣಿಗೆ ಮುದ ನೀಡುತ್ತಿವೆ. ಗೊಟ್ಟಂಗೊಟ್ಟ, ಸೇರಿಭಿಕನಳ್ಳಿ, ಮಂಡಿ ಬಸವಣ್ಣ, ಲಾಲ್‌ತಲಾಬ್ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ಕೆಂಪು ರಾಟವಾಳ, ಚುಕ್ಕೆ ರಾಟವಾಳ, ನವಿಲು, ಬಾರ್ ಹೆಡ್ಡೆಡ್, ಗೂಸ, ಬ್ರಾಹ್ಮಣಿ ಮೈನಾ, ಹಳದಿ ಕಣ್ಣಿನ ಹರಟೆಮಲ್ಲ, ಬಣ್ಣದ ಕೊಕ್ಕರೆಗಳು(ಅತಿಥಿಗಳು) ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಈಗ ಎಲ್ಲರ ಕಣ್ಮನ ಸೆಳೆಯುತ್ತಿವೆ.
ಕುಂಚಾವರಂ ವನ್ಯಜೀವಿಧಾಮ ಅರಣ್ಯ ಪ್ರದೇಶದೊಳಗೆ ಇರುವ ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಸಣ್ಣ ನೀರಾವರಿ ಕೆರೆಗೆ
ವಲಸೆ ಹಕ್ಕಿಗಳು ಬಂದು ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಇಲ್ಲಿ ತಂಪು ವಾತಾವರಣ ಇರುವುದರಿಂದ ಇವುಗಳಿಗೆ ತುಂಬಾ ಅನುಕೂಲವಾಗಿದೆ.
*ಸಂಜೀವಕುಮಾರ ಚವ್ಹಾಣ,
ಅರಣ್ಯಾಧಿಕಾರಿ, ವನ್ಯಜೀವಿಧಾಮ
ಚಂದ್ರಂಪಳ್ಳಿ, ಚಿಕ್ಕನಿಂಗದಳ್ಳಿ ಸೇರಿದಂತೆ ಕುಂಚಾವರಂ ಮೀಸಲು ಅರಣ್ಯದಲ್ಲಿ ಸಣ್ಣ-ಸಣ್ಣ ಪಕ್ಷಿಗಳು ಬಿಸಿಲಿನ ತಾಪದಿಂದ
ತಪ್ಪಿಸಿಕೊಳ್ಳಲು ಗಿಡಮರಗಳ ಪೊಟರುಗಳಲ್ಲಿ ಆಸರೆ ಪಡೆದುಕೊಳ್ಳುತ್ತಿವೆ. ವಿವಿಧ ಜಾತಿಯ ಹಕ್ಕಿಗಳು, ಗಿಳಿ, ಕೊಕ್ಕರೆ, ಗುಬ್ಬಿ, ವಿವಿಧ ಜಾತಿಯ ಪಕ್ಷಿಗಳು ನೆರಳಿನಾಸರೆ ಪಡೆದು ಸಂಜೆ ತಂಪು ವಾತಾವರಣದಲ್ಲಿ ಬಾನಲ್ಲಿ ಹಾರಾಡುತ್ತವೆ.
ಸಿದ್ಧಾರೂಢ ಹೊಕ್ಕುಂಡಿ
ಉಪ ವಲಯ ಅರಣ್ಯಾಧಿಕಾರಿ, ಚಿಂಚೋಳಿ
*ಶಾಮರಾವ ಚಿಂಚೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.