ಶಹಾಬಾದದಲ್ಲಿ ಸ್ಮಶಾನ ಸ್ವಚ್ಛತೆ
Team Udayavani, Jan 18, 2022, 12:58 PM IST
ಶಹಾಬಾದ: ಸ್ಮಶಾನದಲ್ಲಿ ತುಂಬಿಕೊಂಡಿರುವ ಹೊಲಸು, ಎಲ್ಲೆಂದರಲ್ಲಿ ಬೆಳೆದಿರುವ ಗಿಡ-ಗಂಟಿ ಸ್ವಚ್ಛಗೊಳಿಸುವ ಮೂಲಕ ಇಲ್ಲಿನ ಸ್ಥಳೀಯ ಮುಖಂಡರು ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮಳೆ ಹೆಚ್ಚಾದ ಪರಿಣಾಮ ಸ್ಮಶಾನದಲ್ಲಿ ಗಿಡ-ಗಂಟಿಗಳು ಬೆಳೆದು ಶವಸಂಸ್ಕಾರ ಮಾಡಲು ತೊಂದರೆಯಾಗುತ್ತಿತ್ತು. ಅಲ್ಲದೇ ಸ್ಮಶಾನದಲ್ಲಿ ಸ್ವತ್ಛತೆಯಿಲ್ಲದ ಕಾರಣ ಬಹಳ ಕೆಟ್ಟ ವಾತಾವರಣ ಮೂಡಿತ್ತು. ಅದನ್ನು ಮನಗಂಡು ಸ್ಥಳೀಯ ಎಲ್ಲ ಸಮಾಜದ ಮುಖಂಡರು ಒಟ್ಟಾಗಿ ಶ್ರಮದಾನ ಮಾಡುವ ಮೂಲಕ ನಗರದ ಸಾರ್ವಜನಿಕ ಸ್ಮಶಾನ ಸ್ವಚ್ಛಗೊಳಿಸಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ನಗರದ ಸಾರ್ವಜನಿಕ ಸ್ಮಶಾನ ಭೂಮಿ ಹಳ್ಳಕ್ಕೆ ಹತ್ತಿಕೊಂಡಿರುವುದರಿಂದ ಮಳೆ ಬಂದಾಗಲೊಮ್ಮೆ ನೀರು ಸ್ಮಶಾನದೊಳಗೆ ಹರಿದು ನೀರಿನಲ್ಲಿರುವ ಎಲ್ಲ ಕಸ-ಕಡ್ಡಿ, ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯಗಳು ಹರಡುತ್ತದೆ. ಅಲ್ಲದೇ ಗಿಡಗಂಟಿಗಳು ಎಲ್ಲೆಂದರಲ್ಲಿ ಬೆಳೆದು ಸ್ಮಶಾನದೊಳಗೆ ಪ್ರವೇಶಿಸಲು ಭಯ ಪಡಬೇಕಾದ ಪರಿಸ್ಥಿತಿ ಇಲ್ಲಿ ಕಾಣುತ್ತಿತ್ತು. ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿತ್ತು. ಆದ್ದರಿಂದ ಇದನ್ನು ಸ್ವಚ್ಛಗೊಳಿಸಲು ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನದ ಕಾರಣ ನಾವೇ ಖುದ್ದಾಗಿ ಮಾಡಿದರೇ ಹೇಗೆ ಎಂಬ ಪರಿಕಲ್ಪನೆ ನಮ್ಮಲ್ಲಿ ಮೂಡಿ, ಎಲ್ಲ ಸ್ಥಳೀಯ ಸಮಾನ ಮನಸ್ಕರು ಸೇರಿಕೊಂಡು ಸ್ಮಶಾನ ಸ್ವತ್ಛಗೊಳಿಸಲು ಮುಂದಾದೆವು ಎಂದು ಸಾರ್ವಜನಿಕ ರುದ್ರಭೂಮಿ ಅಧ್ಯಕ್ಷ ಕಾಶಿನಾಥ ಜೋಗಿ ತಿಳಿಸಿದರು.
ಸಭೆ ನಡೆಸಿ, ಎಲ್ಲರೂ ಸೇರಿ ಬೆಳಿಗ್ಗೆ ವ್ಯಾಯಾಮ, ವಾಯು ವಿಹಾರ ಬದಲು ಶ್ರಮದಾನ ಮಾಡುವ ಮೂಲಕ ಇಡೀ ಸಾರ್ವಜನಿಕ ಸ್ಮಶಾನವನ್ನು ಸ್ವಚ್ಛಗೊಳಿಸಿ, ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಇನ್ನುಮುಂದೆ ಇದೇ ರೀತಿ ಶ್ರಮದಾನ ಮಾಡುವ ಮೂಲಕ ಸ್ಮಶಾನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವರ ಉದ್ದೇಶವಾಗಿದೆ. ಗಿಡ-ಮರಗಳನ್ನು ಬೆಳೆಸುವ ಉದ್ದೇಶವೂ ಹೊಂದಿದ್ದು, ಅದಕ್ಕಾಗಿಯೂ ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸುನೀಲ ಭಗತ್, ಶಿವಾಜಿ ಪವಾರ, ಶಿವಾಜಿ ಪವಾರ, ಅನಿಲ ಹಿಬಾರೆ, ನನ್ನಾವರೆ ನರಸಿಂಗ, ಮಹಾವೀರ ಸುಗಂ, ನರಸಿಂಗ ಕೊಂಗಳೆ, ದತ್ತಾ ಫಂಡ್, ಶಶಿಕಾಂತ ಸಿಂಧೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.