ಧಾರ್ಮಿಕ ಆಚರಣೆಯಿಂದ ನೆಮ್ಮದಿ: ಹಾರಕೂಡ ಶ್ರೀ
Team Udayavani, Aug 31, 2022, 12:25 PM IST
ಆಳಂದ: ಕಲುಷಿತ ಸಮಾಜ ತಿಳಿಗೊಳ್ಳಲು ಕನ್ನಡನಾಡು ಆದರ್ಶಪ್ರಾಯವಾಗಿ ಬೆಳಗಲು ಪ್ರತಿಯೊಬ್ಬರಲ್ಲಿಯೂ ಒಳ್ಳೆಯ ಸಂಸ್ಕಾರ, ಧರ್ಮಾಚರಣೆ ಕೈಗೊಂಡು ಶಾಂತಿ, ನೆಮ್ಮದಿ ಜೀವನಕ್ಕೆ ಮುಂದಾಗಬೇಕು ಎಂದು ಹಾರಕೂಡ ಸಂಸ್ಥಾನ ಮಠದ ಶ್ರೀಡಾ| ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಗಡಿಗ್ರಾಮವಾದ ಕೋತನ ಹಿಪ್ಪರಗಾದಲ್ಲಿ ಬುಧವಾರ ಶ್ರೀಮಹಾದೇವಲಿಂಗ ದೇವಸ್ಥಾನದ 25ನೇ ವರ್ಷದ ರಜತ ಮಹೋತ್ಸವ ಹಾಗೂ ಶ್ರಾವಣ ಮಾಸದ ಭಜನಾ ಮಹಾಮಂಗಲ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸೌಹಾರ್ದಯುತ ಮತ್ತು ಭಕ್ತಿ ಭಾವಗಳ ಸಂಗಮದಂತೆ ಕೂಡಿರುವ ಕೋತನಹಿಪ್ಪರಗಾ ಜನರ ಭಕ್ತಿ ಭಾವ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಗ್ರಾಮದಲ್ಲಿ 18ಕೋಟಿ ರೂ.ಗಳ ಕೆರೆ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಹತ್ತರಗಾ ಸೇರಿದಂತೆ ಇತರ ಕಡೆ ರಸ್ತೆ ಸಂಪರ್ಕ ಮತ್ತು 25 ಲಕ್ಷ ರೂ.ಗಳ ಹನುಮಾನ ಸಮುದಾಯ ಭವನ, ಮಹಾದೇವಲಿಂಗ ದೇವಸ್ಥಾನ ಕಟ್ಟಡಕ್ಕೆ ಅನುದಾನ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಲಬುರಗಿ- ಯಾದಗಿರಿ ಕೆ.ಎಂ.ಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಮಾತನಾಡಿ, ಧಾರ್ಮಿಕ ಮತ್ತು ಸಮಾಜ ಕಾರ್ಯಕ್ಕೆ ಎಲ್ಲರೂ ಒಂದಾಗಿ ಸಾಗೋಣ ಎಂದರು.
ಗ್ರಾಪಂ ಸದಸ್ಯೆ ರೇಖಾ ದಿಗಂಬರ ಇಸ್ರಾಜಿ, ಪ್ರಕಾಶ ಶ್ರೀರಂಗರಾವ್ ಪಾಟೀಲ, ಮಂದಿರಾಬಾಯಿ ಬಿ. ಜಮಾದಾರ, ಮಿಲಿಂದ ಕಾಂಬಳೆ, ಹಿರಿಯ ಬಸಯ್ನಾ ಸ್ವಾಮಿ, ಅಮೃತ ಕಪ್ಟೆ, ವೆಂಕಟ ಮೈಂದೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶರಣಬಸಪ್ಪ ವಾಗೆ, ಮುಖಂಡ ಸಂಜು ಖೋಬ್ರೆ, ಸುಭಾಷ ಮುರುಡ್, ಹಣಮಂತರಾವ್ ಮಲಾಜಿ, ಎಎಸ್‌ಐ ರಾಜಶೇಖರ ಎಸ್. ಕರ್ಲೆ, ಶಿವಬಸಪ್ಪ ಇಸ್ರಾಜಿ, ಅಶೋಕ ಜಮಾದಾರ, ಕಲ್ಯಾಣಿ ದೇವಂತಗಿ, ಮಹೇಶ ಪಾಟೀಲ, ದೇವಣ್ಣಾ ಪೂಜಾರಿ, ಶಾಲೆಯ ಮುಖ್ಯ ಶಿಕ್ಷಕ ಸರ್ಜರಾವ್ ದಿವುಟಿ, ಸುಭಾಷ ಎಚ್. ತಂಗಾ ಹಾಗೂ ಡೊಳ್ಳು ಭಜನಾ ತಂಡದವರು ಇದ್ದರು. ರಾಘವೇಂದ್ರ ಸಾಲೇಗಾಂವ ನಿರೂಪಿಸಿದರು, ಚಿದಾನಂದ ಕಪ್ಟೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.