ಆಶಾಕಿರಣ ಸಂಸ್ಥೆಯ ಸೇವಾ ಕಾರ್ಯಕ್ಕೆ ಶ್ಲಾಘನೀಯ
Team Udayavani, Nov 9, 2021, 1:18 PM IST
ಅಫಜಲಪುರ: ಸೇವೆ ಎನ್ನುವದೇ ದೊಡ್ಡ ಸಾಧನೆ. ಅದನ್ನು ಮನಸ್ಫೂರ್ತಿಯಾಗಿ ಮಾಡಿದಾಗ ಪರಮಾತ್ಮನಿಗೆ ಪ್ರೀಯವಾಗುತ್ತದೆ. ಇಂತದ್ದೇ ಕೆಲಸವನ್ನು ಆಶಾಕಿರಣ ಸೇವಾ ಸಂಸ್ಥೆ ಮಾಡುತ್ತಿದೆ. ಈ ಕಾರ್ಯ ಶ್ಲಾಘನೀಯ ಎಂದು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಮಳೇಂದ್ರ ಮಠದಲ್ಲಿ ಆಶಾಕಿರಣ ಸೇವಾ ಸಂಸ್ಥೆಯಿಂದ ನಡೆದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ, ನೇತ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಆಶಾಕಿರಣ ಸಂಸ್ಥೆ ಸಕ್ರಿಯವಾಗಿ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರೇ ಈ ಸಂಸ್ಥೆ ಮುನ್ನಡೆಸುತ್ತಿರುವುದು ಖುಷಿಯ ವಿಚಾರ ಎಂದರು.
ಡಾ| ಶ್ರೀಶೈಲ ಪಾಟೀಲ ಮಾತನಾಡಿ, ಯುವಕರು ಈ ಕಾರ್ಯಕ್ರಮದಲ್ಲಿ ನೇತ್ರದಾನ ವಾಗ್ಧಾನ ಮಾಡಿದ್ದು ಮೆಚ್ಚುವಂತ ವಿಷಯ ಎಂದು ಹೇಳಿದರು. ಆಶಾಕಿರಣ ಸೇವಾ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಚಿತ ನೇತ್ರ ತಪಾಸಣೆ, ಬಡ ರೋಗಿಗಳಿಗೆ ಕನ್ನಡಕ ವಿತರಣೆ, ನೇತ್ರದಾನಿಗಳಿಗೆ ಕೃತಜ್ಞತಾ ಪತ್ರ ವಿತರಣೆ, ಪತ್ರಕರ್ತರು ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು. ಈ ವೇಳೆ ಸದಾಶಿವ ಮೇತ್ರೆ, ಶಂಕರರಾವ್ ಹುಲ್ಲೂರ, ಸುಪ್ರೀತ್ ಶಿವಾನಂದ ಹಸರಗುಂಡಗಿ ಹಾಗೂ 50ಕ್ಕೂ ಹೆಚ್ಚು ಜನ ನೇತ್ರದಾನ ಮಾಡಿ, ಕೃತಜ್ಞತಾ ಪ್ರಮಾಣ ಪತ್ರ ಪಡೆದರು. ಪ್ರಭುಗೌಡ ಪಾಟೀಲ, ಸಂತೋಷ ದಾಮಾ, ಚಿದಾನಂದ ಮಠ, ಸೀಮಾ ಬಬಲಾದ, ರಾಣಿ ಬುಕ್ಕೆಗಾರ, ಗಂಗಾ ಮಠ, ವಿದ್ಯಾವತಿ ಕಲಶೆಟ್ಟಿ ಬಡದಾಳ, ಪ್ರತಿಭಾ ಮಹೀಂದ್ರಕರ, ಸೌಮ್ಯಯ ಪಾಟ್ನೆ, ರಾಘವೇಂದ್ರ ಕಲಶೆಟ್ಟಿ ಬಡದಾಳ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.