ಕೋನಹಿಪ್ಪರಗಾ ಗ್ರಾಮವಾಸ್ತವ್ಯ-ಹೈನುಗಾರಿಕೆ ಅಭಿವೃದ್ಧಿಗೆ ಬದ್ಧ: ಶಾಸಕ ಡಾ| ಅಜಯಸಿಂಗ್
ಈ ಊರುಗಳಲ್ಲಿನ ಜನರು ಸಿಸಿ ರಸ್ತೆ, ಚರಂಡಿ, ನೀರಿನ ಸಮಸ್ಯೆ ಕುರಿತು ಶಾಸಕರೆದುರು ಗಮನಕ್ಕೆ ತಂದರು.
Team Udayavani, Apr 2, 2021, 5:45 PM IST
ಕಲಬುರಗಿ: ನೀರಾವರಿಯಲ್ಲಿ ದಾಪುಗಾಲು ಹಾಕುತ್ತಿರುವ ಜೇವರ್ಗಿ ಮತಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಹೈನುಗಾರಿಕೆ ಹೆಚ್ಚಿಸಲು ಬದ್ಧತೆ ಹೊಂದಲಾಗಿದೆ ಎಂದು ಶಾಸಕ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್ ತಿಳಿಸಿದರು.
ಜೇವರ್ಗಿ ತಾಲೂಕಿನ ಕೋನಹಿಪ್ಪರಗಾದಲ್ಲಿನ ತಮ್ಮ ಮೂರನೇ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಹೆಣ್ಣುಮಕ್ಕಳ ಸಮೂಹದೊಂದಿಗೆ ಸಂವಾದ ನಡೆಸಿದ ಅವರು, ಪಶುಭಾಗ್ಯ ಯೋಜನೆ ಅಡಿ ಹಾಗೂ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ವತಿಯಿಂದ ಆರ್ಥಿಕ ಸಹಾಯ ಕಲ್ಪಿಸಿ ಹೈನುಗಾರಿಕೆಗೆ ಶ್ರಮಿಸಲಾಗುವುದು ಎಂದು ಪ್ರಕಟಿಸಿದರು.
ಕೃಷಿಯಲ್ಲಿ ಅನೇಕ ಬಾರಿ ಬೆಲೆ ಇಲ್ಲದೇ, ಬೆಳೆ ಬಾರದೆ ಹಾನಿ ಸಂಭವಿಸುತ್ತದೆ, ಆದರೆ ಹೈನುಗಾರಿಕೆ ಉಪ ಕಸುಬಾಗಿದ್ದು ಹಸು, ಎಮ್ಮೆ ಜೊತೆಗಿದ್ದಲ್ಲಿ ಹಾನಿಯ ಬಿಸಿ ಸ್ವಲ್ಪ ಮಟ್ಟಿಗೆ ಶಮನ ಮಾಡಬಹುದು ಎಂದು ಹೆಣ್ಣುಮಕ್ಕಳಿಗೆ ಹೈನುಗಾರಿಕೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಭೀಮಾನದಿ ದಡದ ಗ್ರಾಮಗಳಲ್ಲಿ
ಹೈನುಗಾರಿಕೆಗೆ ಒತ್ತು ನೀಡಬೇಕು. ಜೇವರ್ಗಿ ಪಾಕೃತಿಕವಾಗಿ ಸಮೃದ್ಧಿಯ ತಾಲೂಕು ಆಗಿದೆ. ಜೇವರ್ಗಿ ತಾಲೂಕು, ಯಡ್ರಾಮಿ ತಾಲೂಕುಗಳಲ್ಲಿ ನೀರಾವರಿ ಸೌಲಭ್ಯವಿದೆ.
ಇದರಿಂದ ಹೈನುಗಾರಿಕೆಗೆ ಹೆಚ್ಚಿನ ಅನುಕೂಲವಿದೆ ಎಂದರು. ಗ್ರಾಮ ವಾಸ್ತವ್ಯದಲ್ಲಿ ಶಾಸಕರ ಜತೆ ಅತಿಥಿಯಾಗಿದ್ದ ಕಲಬುರಗಿ ಹಾಲು ಒಕ್ಕೂಟದ ನಿರ್ದೇಶಕ ಈರಣ್ಣ ಝಳಕಿ, ಹೆಣ್ಣುಮಕ್ಕಳು ಹೈನುಗಾರಿಕೆಗೆ ಬಂದಲ್ಲಿ ಒಕ್ಕೂಟದಲ್ಲಿ ಅನೇಕ ಯೋಜನೆಗಳಿದ್ದು ಅವುಗಳಿಂದ ನೆರವು ನೀಡಬಹುದಾಗಿದೆ. ಮೊದಲು ಹಾಲು ಉತ್ಪಾದಕರ ಸ್ವಸಹಾಯ ಸಂಘ ಸ್ಥಾಪಿಸಿ ಹೈನುಗಾರಿಕೆಯಲ್ಲಿ ಎಲ್ಲರೂ ತೊಡಗಿಸಿಕೊಂಡಲ್ಲಿ ಅದೇ ಆದಾಯದ ಮೂಲವಾಗುತ್ತದೆ ಎಂದರು. ಆಳಂದದಲ್ಲಿ 110 ಸಂಘ ಗಳಿವೆ. ಜೇವರ್ಗಿಯಲ್ಲಿ ಕೇವಲ 10 ಸಂಘಗಳಿದ್ದವು. ಅವೂ ಈಗ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಬರುವ ದಿನಗಳಲ್ಲಿ ಹಾಲು ಒಕ್ಕೂಟ ಹೊಸ ಸಂಘ ಸ್ಥಾಪನೆಗೆ ಮುಂದಾಗಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ರೈತರಾದ ಆನಂದ, ಚಂದಪ್ಪ ಪೂಜಾರಿ, ಶರಣಬಸಪ್ಪ ಪೂಜಾರಿ, ಬಾಬೂರಾವ್ ಪೂಜಾರಿ, ಅಪ್ಪಾಸಾಹೇಬ್ ಪೂಜಾರಿ ಮತ್ತವರ ಕುಟುಂಬದವರು, ಕೋನ ಹಿಪ್ಪರಗಾ ಊರಿನ ಮಹಿಳೆಯರು ಹಾಜರಿದ್ದು ಹೈನುಗಾರಿಕೆ ಮಾಹಿತಿ ಪಡೆದರು. ಮಂದರವಾಡ, ಕೋಬಾಳ, ಹಂದನೂರ್, ಬಣಮಿ, ರಾಸಣಗಿ, ಕೂಡಿ ಎಲ್ಲೆಡೆ ಸುತ್ತಾಡಿದ ಶಾಸಕರು ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ಊರುಗಳಲ್ಲಿನ ಜನರು ಸಿಸಿ ರಸ್ತೆ, ಚರಂಡಿ, ನೀರಿನ ಸಮಸ್ಯೆ ಕುರಿತು ಶಾಸಕರೆದುರು ಗಮನಕ್ಕೆ ತಂದರು.
ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ
ಕೋನಹಿಪ್ಪರಗಾ ದ್ಯಾಮವ್ವಾಮಾಯಿ ಮಂದಿರದಲ್ಲಿ ವಾಸ್ತವ್ಯದ ದಿನ ಬುಧವಾರ ರಾತ್ರಿ ನಡೆದ ಸಂವಾದದಲ್ಲಿ ಊರವರು ಸ್ಮಶಾನ ಭೂಮಿ, ಮಹಿಳೆಯರ ಶೌಚಾಲಯ, ಭೀಮಾ ನದಿಗೆ ಹೋಗಲು ರಸ್ತೆ, ಮಕ್ಕಳಿಗೆ ಶಾಲೆಗೆ ಹೋಗಲು ಬಸ್ಸಿಲ್ಲವೆಂದು ಹೇಳಿದರು. ತಕ್ಷಣವೇ ಸ್ಪಂದಿಸಿದ ಡಾ| ಅಜಯಸಿಂಗ್ ಜಾಗ ಇದ್ದರೆ ಸ್ಮಶಾನ ಭೂಮಿಗೆ ವ್ಯವಸ್ಥೆ ಮಾಡೋದಾಗಿ ಹೇಳಿದರು. ಸ್ಥಳದಲ್ಲೇ ಶೌಚಾಲಯಕ್ಕೂ ಜಾಗ ಕೊಟ್ಟರೆ ತಮ್ಮ ಬಜೆಟ್‌ನಲ್ಲಿ 42 ಶೌಚಾಲಯ ನಿರ್ಮಿಸುವುದಾಗಿ ಪ್ರಕಟಿಸಿದರು.
ಹಾಲು ಕರೆದು ಕುಡಿದ ಶಾಸಕರು
ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿ ಜನರು, ರೈತರೊಂದಿಗೆ ಬೆರೆತು ಅಲ್ಲಿನ ಅವರ ಕಷ್ಟ- ನಷ್ಟ ಆಲಿಸುತ್ತಿರುವ ಜೇವರ್ಗಿ ಶಾಸಕ ಡಾ| ಅಜಯ ಸಿಂಗ್ ಕೋನಹಿಪ್ಪರಗಾದಲ್ಲಿನ ತಮ್ಮ ಮೂರನೇ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಬೆಳಗಿನ ಜಾವ ಕರು ಬಿಟ್ಟುಕೊಂಡು ತಾವೇ ಹಾಲು ಕರೆದರಲ್ಲದೇ ಎತ್ತಿನ ಬಂಡಿ ಓಡಿಸಿದರು. ಬೆಳಗ್ಗೆ ಎದ್ದವರೇ ರೈತರೊಂದಿಗೆ ಬೆರೆತು ಅವರ ಮನೆಯಲ್ಲಿನ ಹಸುವಿಗೆ ಪೂಜಿಸಿದರು. ನಂತರ ಅದೇ ಹಸುವಿಗೆ ಕರು ಬಿಟ್ಟುಕೊಂಡು ಚರಿಗೆ ಹಿಡಿದು ಹಾಲು ಕರೆದರು. ತಾವು ಕರೆದ ಹಾಲನ್ನು ತಾವೇ ಕುಡಿಯುವ ಮೂಲಕ ಹಸುವಿನ ನೊರೆ ಹಾಲನ್ನು ಸವಿದರು. ನಂತರ ಹೂವಿನ ಹಾರ ಹಾಕಿ, ಕುಂಕುಮ- ಅರಿಷಿಣದಿಂದ ಹಸುವನ್ನು ಅಲಂಕರಿಸಿ ಕಾಯಿ- ಕರ್ಪೂರ ಅರ್ಪಿಸಿ ಪೂಜಿಸಿ ಗೋಮಾತೆಯನ್ನು ನಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.