ವಿದ್ಯುತ್ ತಗುಲಿದವನಿಗೆ ಪರಿಹಾರ
Team Udayavani, Feb 5, 2022, 1:07 PM IST
ಆಳಂದ: ಪಟ್ಟಣದ ಸಂಗಾ ಕಾಲೋನಿಯ ಶ್ರೀನಿವಾಸ ದೇಸಾಯಿ ಪ್ರೌಢಶಾಲೆ ವಿದ್ಯಾರ್ಥಿ ಅಭಿಷೇಕ್ ವಸಂತ ಸಲಗರೆ ಎಂಬಾತನಿಗೆ ಕಳೆದ ವರ್ಷ ವಿದ್ಯುತ್ ತಂತಿ ತಗುಲಿ ಗಾಯಗೊಂಡಿರುವುದರಿಂದ ಜೆಸ್ಕಾಂ ಇಲಾಖೆಯಿಂದ ಮಂಜೂರಾದ ಒಂದು ಲಕ್ಷ ರೂ. ಚೆಕ್ನ್ನು ಶಾಸಕ ಸುಭಾಷ ಗುತ್ತೇದಾರ ಸಂತ್ರಸ್ತ ಕುಟುಂಬಕ್ಕೆ ವಿತರಿಸಿದರು.
ಇದೇ ವೇಳೆ ಮಾತನಾಡಿದ ಶಾಸಕರು ಪರಿಹಾರದ ಹಣವನ್ನು ವಿದ್ಯಾರ್ಥಿ ಶಿಕ್ಷಣಕ್ಕೆ ಹಣ ಮೀಸಲಾಗಿಡಿ ಎಂದು ಕುಟುಂಬದವರಿಗೆ ಸಲಹೆ ನೀಡಿದರು. ರೇವಣಸಿದ್ಧೇಶ್ವರ ಕಾಲೋನಿಯಲ್ಲಿ ವಿದ್ಯುತ್ ಪರಿವರ್ತಕದ ವಿದ್ಯುತ್ ತಗುಲಿ ರೈತ ರೇವಣಸಿದ್ಧಪ್ಪ ಈಶ್ವರಪ್ಪ ಮಾಳಿ ಅವರ ಎಮ್ಮೆ ಮೃತಪಟ್ಟಿರುವುದರಿಂದ ಅವರಿಗೂ ಸಹ 40 ಸಾವಿರ ರೂ. ಪರಿಹಾರದ ಚೆಕ್ನ್ನು ಶಾಸಕರು ವಿತರಿಸಿದರು.
ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ಮುಖಂಡ ಮಲ್ಲಣ್ಣಾ ನಾಗೂರೆ, ವಿಜಯಕುಮಾರ ಕೋಥಳಿಕರ, ಪ್ರಭಾಕರ ದೇಸಾಯಿ, ಶರಣಪ್ಪ ಸಂಜವಾಡ, ಗುತ್ತಿಗೆದಾರ ಮಹ್ಮದ್ ರಫೀಕ್, ಮುಖ್ಯಶಿಕ್ಷಕ ಮಲ್ಲಿನಾಥ ಮುನ್ನೊಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.