ಕಳಪೆ ಕಾಮಗಾರಿ ವಿರುದ್ದ ದೂರು: ಪಾಟೀಲ


Team Udayavani, Nov 10, 2021, 11:20 AM IST

9poor

ಆಳಂದ: ರೈತರು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪಿಎಂಜಿಎಸ್‌ವೈ ಅಧಿಕಾರಿಗಳು ಸುಳ್ಳು ಹೇಳಿ ಗ್ರಾಮಸ್ಥರ ನಡುವೆ ಕಲಹ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್‌.ಪಾಟೀಲ ಆರೋಪಿಸಿದರು.

ತಾಲೂಕಿನ ನಿಂಬರಗಾ ಬಟ್ಟರಗಾ, ಧಂಗಾಪುರ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿರುವ ರಸ್ತೆ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ಸೇತುವೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಯಾವ ರೈತರೂ ವಿರೋಧಿಸಿಲ್ಲ. ಕಳಪೆ ಕಾಮಗಾರಿಯಾಗಿದೆ ಎಂದು ಗ್ರಾಮಸ್ಥರೇ ವಿರೋಧಿಸಿ ರಸ್ತೆ ತಡೆ, ಪ್ರತಿಭಟನೆ ಮಾಡಿದ್ದಾರೆ. ಕಳಪೆ ಕಾಮಗಾರಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಗ್ರಾಮಸ್ಥರ ನಡುವೆ ಪರಸ್ಪರ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಿಂಬರ್ಗಾ-ಧಂಗಾಪುರ ನಡುವೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 5.01 ಕಿ.ಮೀ ರಸ್ತೆ ನಿರ್ಮಾಣಕ್ಕೆ 6.57 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 28 ಸೇತುವೆಗಳಲ್ಲಿ 13 ದೊಡ್ಡ ಸೇತುವೆ, 15 ಸಣ್ಣ ಸೇತುವೆ ನಿರ್ಮಾಣ ಮಾಡಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ 2 ದೊಡ್ಡ ಸೇತುವೆ, 7 ಚಿಕ್ಕ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಅಂದಾಜು ಮೊತ್ತ ಹಾಗೂ ಕಾಮಗಾರಿಯ ಯೋಜನೆ ತಯಾರಿಕೆ ಮಾಡಿದ ಅಧಿಕಾರಿಯೇ ಸುಳ್ಳು ಹೇಳುತ್ತಿರುವುದರಿಂದ ಜನರಿಗೆ ಅನುಮಾನ ಉಂಟಾಗಿದೆ. ಅಲ್ಲದೇ ರಸ್ತೆಯ ಎರಡು ಬದಿಯಲ್ಲಿ ಮೂರು ಅಡಿ ಮುರುಮ್‌ ಕೂಡಾ ಹಾಕಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಕೆಎಂಎಫ್‌ ನಿರ್ದೇಶಕ ಈರಣ್ಣಾ ಝಳಕಿ, ಚಂದ್ರಶೇಖರ ಶೆಗಜಿ, ಗ್ರಾಪಂ ಅಧ್ಯಕ್ಷೆ ಶಾರದಬಾಯಿ ದೇವೆಂದ್ರ ಮೇಲಕೇರಿ, ಶ್ರೀಮಂತ ವಾಗªರಗಿ, ಗುರು ಪಾಟೀಲ, ಗುರಣ್ಣಾ ಕಾಮಣಗೋಳ, ಈರಣ್ಣಾ ನಾಗಶೆಟ್ಟಿ, ಯಲ್ಲಾಲಿಂಗ ಚಿತ್ತಿಲಿ, ಸಿದ್ಧು ಕಲ್ಯಾಣ, ಆಲೂಗೌಡ ಪಾಟೀಲ, ಸೂರ್ಯಕಾಂತ ಚಿಂಚೂರೆ, ಭೀಮಣ್ಣಾ ಬನ್ನಪಟ್ಟಿ ಇತರರಿದ್ದರು.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

siddaramaiahಸಿದ್ಧರಾಮಯ್ಯ ಲೂಟಿಕೋರ ಅಲ್ಲ, ಜುಗ್ಗಯ್ಯ…: ಕಾಗಿನೆಲೆ ಶ್ರೀಗಳು

Kalaburagi; ಸಿದ್ಧರಾಮಯ್ಯ ಲೂಟಿಕೋರ ಅಲ್ಲ, ಜುಗ್ಗಯ್ಯ…: ಕಾಗಿನೆಲೆ ಶ್ರೀಗಳು

Siddaramaiah

Kalaburagi: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ-ಕೈಗಾರಿಕಾ ನೀತಿ ಜಾರಿಗೆ ಬದ್ದ: ಸಿಎಂ

ಹಗರಣದಲ್ಲೇ ಮುಳುಗಿದೆ ಕಾಂಗ್ರೆಸ್‌ ಸರ್ಕಾರ: ಪಿ. ರಾಜೀವ್‌

ಹಗರಣದಲ್ಲೇ ಮುಳುಗಿದೆ ಕಾಂಗ್ರೆಸ್‌ ಸರ್ಕಾರ: ಪಿ. ರಾಜೀವ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.