ವಿಜ್ಞಾನ-ತಂತ್ರಜ್ಞಾನ ಆಸಕ್ತಿ ಬೆಳೆಸಿಕೊಳ್ಳಿ: ನಳಿನಿ
ಸೇನೆ ಸಂಪರ್ಕ ವ್ಯವಸ್ಥೆ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವ ಅನುಭವ ಹಂಚಿಕೊಂಡರು.
Team Udayavani, Sep 16, 2021, 6:07 PM IST
ಕಲಬುರಗಿ: ಇದು ತಂತ್ರಜ್ಞಾನದ ಯುಗ ವಾಗಿದ್ದರಿಂದ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಹೆಚ್ಚುವರಿ ಆಯುಕ್ತ ನಳಿನಿ ಅತುಲ್ ತಿಳಿಸಿದರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಸರ್| ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ನಿಮಿತ್ತ ಇಂಜಿನಿಯರ್ ಗಳ ದಿನ ಮತ್ತು ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಮುಂಭಾಗದಲ್ಲಿ “ಕಿರಣ ಯು-809′ ಯುದ್ಧ ತರಬೇತಿ ವಿಮಾನವನ್ನು ಜನರ ವೀಕ್ಷಣೆಗೆ ಅರ್ಪಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಹೊಸತನದ ಕಲಿಕೆ ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರು ದೇಶಾಭಿಮಾನದೊಂದಿಗೆ ಅವಿರತ ಶ್ರಮ ವಹಿಸಿದರೆ, ದೇಶ ಅಮೂಲಾಗ್ರ ಬದಲಾವಣೆ ಕಾಣಲಿದೆ ಎಂದರು. ಮಹಾನಗರ ಪಾಲಿಕೆ ಆಯುಕ್ತ
ಲೋಖಂಡೆ ಸ್ನೇಹಲ್ ಸುಧಾಕರ್ ಮಾತನಾಡಿ, ವಿಶ್ವೇಶ್ವರಯ್ಯ ತತ್ವಾದರ್ಶಗಳನ್ನು ಪಾಲಿಸಬೇಕು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲಿ ಎಂದು ಹೇಳಿದರು.
ವಾಯು ಸೇನೆ ನಿವೃತ್ತ ಅಧಿಕಾರಿ ಹನುಮಂತರಾಯ ಗೋಗಾಂವ ಮಾತನಾಡಿ, ಏರ್‌ಪೋರ್ಸ್‌ನಲ್ಲಿ ಇರುವಾಗ ಈಗ ಹೊರಗಡೆ ತಂದಿರಿಸಿದ ಯುದ್ಧ ವಿಮಾನದಲ್ಲಿ ಮತ್ತು ಸೇನೆ ಸಂಪರ್ಕ ವ್ಯವಸ್ಥೆ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವ ಅನುಭವ ಹಂಚಿಕೊಂಡರು. ಇದೇ ವೇಳೆ ಬೆಂಗಳೂರಿನ ಸರ್| ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ನಿರ್ದೇಶಕಿ ಸಾಧನಾ ಅತ್ತಾವರ್ ಆನ್‌ಲೈನ್ ಮೂಲಕ ಉಪನ್ಯಾಸ ನೀಡಿದರು.
ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರರಾವ್, ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ಎಸ್.ಕೆ.ತಿವಾರಿ, ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ, ಶಿಕ್ಷಣ ಸಹಾಯಕ ಎನ್.ಪೊನ್ನರಸನ್ ಹಾಗೂ ಮತ್ತಿತರರು ಇದ್ದರು.
ವಿಜ್ಞಾನ ಕೇಂದ್ರದ ಆಕರ್ಷಣೆ “ವಿಮಾನ’
ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ಮುಂಭಾಗದಲ್ಲಿ ಇದೀಗ “ಕಿರಣ ಯು-809′ ಯುದ್ಧ ತರಬೇತಿ ವಿಮಾನಯು ಆಕರ್ಷಣೆ ಕೇಂದ್ರ ಬಿಂದು ಆಗಿದೆ. ಸಿಕಿಂದರಾಬಾದ್‌ನಿಂದ ಈ ವಿಮಾನವನ್ನು ತಂದು ಇಲ್ಲಿ ಸ್ಥಾಪನೆ ಮಾಡಲಾಗಿದೆ. ಇದು ಎರಡು ಸೀಟು ಹೊಂದಿರುವ ಯುದ್ಧ ತರಬೇತಿ ವಿಮಾನವಾಗಿದೆ. ಇದರ ಒಟ್ಟು ತೂಕ 3600 ಕೆ.ಜಿ., ಇಂಧನ ಸಾಮರ್ಥ್ಯ 250 ಇಂಪಿರಿಯಲ್ ಗ್ಯಾಲನ್ ಆಗಿದೆ. ಯುದ್ಧ ವಿಮಾನಗಳ ಬಗ್ಗೆ ಜ್ಞಾನ ಬಳಸಿಕೊಳ್ಳಲು ಸಾರ್ವಜನಿಕರಿಗೆ
ಅನುಕೂಲವಾಗಲಿದೆ ಎಂದು ವಿಜ್ಞಾನ ಕೇಂದ್ರದ ಅಧಿಕಾರಿ ಲಕ್ಷ್ಮೀನಾರಾಯಣ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.