ಕೈತಪ್ಪಿದ ಯೋಜನೆಗಳು: ಬೆಂಗಳೂರು-ದೆಹಲಿಗೆ ನಿಯೋಗ
ಕಚೇರಿಗಳು ಬೇರೆಡೆಗೆ ಸ್ಥಳಾಂತರವಾಗುತ್ತಿರುವುದು ಅಸಮಾಧಾನಕರ ವಿಷಯವಾಗಿದೆ.
Team Udayavani, Feb 13, 2021, 3:52 PM IST
ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗಕ್ಕೆ ದೊರೆಯಬೇಕಾದ ಮಹತ್ವದ ಯೋಜನೆಗಳು ಕೈ ತಪ್ಪಿಹೋಗುತ್ತಿರುವುದಿಂದ ಮತ್ತು ಈ ಭಾಗದ ರಚನಾತ್ಮಕ ಪ್ರಗತಿ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಬೆಂಗಳೂರು ಮತ್ತು ದೆಹಲಿಗೆ ಸರ್ವ ಪಕ್ಷಗಳ ನಿಯೋಗ ತೆರಳಲು ಶುಕ್ರವಾರ ನಿರ್ಣಯಿಸಲಾಯಿತು.
ನಗರದ ಹಿಂದಿ ಪ್ರಚಾರ ಸಭಾದಲ್ಲಿ ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಆಯೋಜಿಸಿದ್ದ ಸರ್ವ ಪಕ್ಷಗಳ ಪ್ರಮುಖರ ಸಭೆಯಲ್ಲಿ ಈ ಭಾಗದ ಪ್ರಗತಿಗಾಗಿ ಪಕ್ಷಾತೀತವಾಗಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಮತ್ತು ಕೇಂದ್ರ ಸರ್ಕಾರದ ಸಂಬಂಧಪಟ್ಟದ ಇಲಾಖೆಗಳ ಸಚಿವರನ್ನು ಭೇಟಿಯಾಗಲು ನಿರ್ಧರಿಸಲಾಯಿತು. ನಿಯೋಗದ ನೇತೃತ್ವವನ್ನು ಜಿಲ್ಲಾ ಬಿಜೆಪಿ ವಹಿಸಿಕೊಳ್ಳಲಿದ್ದು, ನಿಯೋಗ ತೆರಳಲು ಸಿದ್ಧತೆಗಳನ್ನು ಕಾಲಮಿತಿಯಲ್ಲಿ ಕೈಗೊಳ್ಳಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ಈ ಭಾಗದ ರಚನಾತ್ಮಕ ಪ್ರಗತಿಯ ಬಗ್ಗೆ ಎಲ್ಲ ಪಕ್ಷಗಳು ಬದ್ಧತೆ ಪ್ರದರ್ಶಿಸಬೇಕು. ಸಂಪೂರ್ಣ ಅಭಿವೃದ್ಧಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾ ಬಿಜೆಪಿಯವರು ಶೀಘ್ರ ದಿನಾಂಕ ನಿಗದಿ ಮಾಡಿ ನಿಯೋಗ ಕರೆದುಕೊಂಡು ಹೋಗಬೇಕೆಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸೋಮಶೇಖರ ಹಿರೇಮಠ ಮಾತನಾಡಿ, ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಷಯಗಳಿಗೆ ಸದಾ ಬದ್ಧವಾಗಿದ್ದು, ಇದಕ್ಕೆ ಯಾವುದೇ ಹೋರಾಟ ಹಮ್ಮಿಕೊಂಡರೂ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದರು.
ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ನಮ್ಮ ಭಾಗಕ್ಕೆ ಅನ್ಯಾಯವಾಗುತ್ತಿದೆ. ಐವರು ಸಂಸದರು ಮತ್ತು ಬಹುತೇಕ ಶಾಸಕರು ಬಿಜೆಪಿದವರಿದ್ದರೂ ನಮ್ಮ ಭಾಗದ ಬಹಳಷ್ಟು ಕಚೇರಿಗಳು ಬೇರೆಡೆಗೆ ಸ್ಥಳಾಂತರವಾಗುತ್ತಿರುವುದು ಅಸಮಾಧಾನಕರ ವಿಷಯವಾಗಿದೆ. ಒಗ್ಗಟ್ಟಾಗಿ ರಾಜಕಿಯ ಇಚ್ಛಾಶಕ್ತಿ ಪ್ರದರ್ಶಿಸುವ ಸಮಯ ಬಂದಿದೆ ಎಂದರು.
ಸಿಪಿಐ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಮಾತನಾಡಿ, ಪಕ್ಷಗಳ ಸೈದ್ಧಾಂತಿಕ ವಿಚಾರಗಳು ಏನೇ ಇದ್ದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ಪಕ್ಷವು ಎಲ್ಲ ರೀತಿಯಿಂದಲೂ ಸಹಕಾರ ನೀಡಲಿದೆ ಎಂದರು.
ಬಿಜೆಪಿ ಮುಖಂಡ ಲಿಂಗರಾಜ ಬಿರಾದಾರ ಮಾತನಾಡಿ, ಸಭೆಯಲ್ಲಿ ಎಲ್ಲ ಪಕ್ಷಗಳು ನೀಡಿರುವ ಸಲಹೆ-ಸೂಚನೆಗಳಂತೆ ರಾಜ್ಯ ಮತ್ತು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲು ಶೀಘ್ರ ದಿನಾಂಕ ನಿಗದಿ ಮಾಡಲು ಮುಖಂಡರೊಂದಿಗೆ ಚರ್ಚಿಸಲಾಗುವುದು. ಕಾಲಮಿತಿಯೊಳಗೆ ದಿನಾಂಕ ತಿಳಿಸಲಾಗುವುದು
ಎಂದು ಹೇಳಿದರು.
ಮುಖಂಡರಾದ ಡಾ| ಮಹೇಶ ರಾಠೊಡ, ಎಐಎಂಐಎಂ ಪಕ್ಷದ ಮುಖಂಡ ರಹೀಂ ಮಿರ್ಚಿ, ಇಂಡಿಯನ್ ಯೂನಿಯನ್ ಪಕ್ಷದ ಮುಖಂಡ ಮೌಲಾನಾ ನುಹೂ ಮಾತನಾಡಿ, ಸಭೆಯ ನಿರ್ಣಯಕ್ಕೆ ಸಮ್ಮತಿ ಸೂಚಿಸಿದರು. ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಭದ್ರಶೆಟ್ಟಿ, ಅಸ್ಲಂ ಚೌಂಗೆ, ಎಚ್.ಎಂ. ಹಾಜಿ, ಜ್ಞಾನಮಿತ್ರ ಸ್ಯಾಮ್ಯುವೆಲ್, ಶಾಂತಪ್ಪ ಕಾರಭಾಸಗಿ, ಮಲ್ಲಿನಾಥ ಸಂಗಶೆಟ್ಟಿ, ಬಸವರಾಜ ರಾವೂರ, ಲಿಂಗಣ್ಣ ಉದನೂರ, ಬಾಬುರಾವ ಗಂವಾರ
ಮತ್ತಿತರರು ಭಾಗವಹಿಸಿದ್ದರು.
ಸರ್ವಪಕ್ಷ ಸಭೆಯ ಬೇಡಿಕೆಗಳು
ಕಲಬುರಗಿಯಲ್ಲೇ ಏಮ್ಸ್ ಸ್ಥಾಪಿಸುವುದು
ಕಲಬುರಗಿ ರೈಲ್ವೆ ವಿಭಾಗ ಆರಂಭ ಮಾಡಬೇಕು
ಸಿಯುಕೆ ಸೆಂಟರ್ ಆಪ್ ಎಕ್ಸ್‌ಲೆನ್ಸ್ ಸ್ಥಳಾಂತರ ಬೇಡ
ಕಲಬುರಗಿಯ 2ನೇ ರಿಂಗ್ ರಸ್ತೆಗೆ ಬಜೆಟ್ ಮಂಜೂರಾತಿ
ಕೆಕೆಆರ್‌ಡಿಬಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
ನಿಮ್j ಸ್ಥಾಪನೆಗೆ ರಾಜ್ಯದಿಂದ ಅ ಧಿಕೃತ ಪ್ರಸ್ತಾವನೆ ಸಲ್ಲಿಸಬೇಕು
ಕಾಲಮಿತಿಯಲ್ಲಿ ಸಮರ್ಪಕ ಅನುದಾನ ನೀಡಬೇಕು
ಸರ್ಕಾರಿ ಕಚೇರಿಗಳು ಬೇರೆಡೆ ಸ್ಥಳಾಂತರ ಮಾಡಬಾರದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.