ಸನ್ನತಿಯಲ್ಲಿ ನಾಡಿದ್ದು ಧಮ್ಮ ಉತ್ಸವ
Team Udayavani, Nov 12, 2021, 10:36 AM IST
ಕಲಬುರಗಿ: ಚಿತ್ತಾಪುರ ತಾಲೂಕಿನ ಸನ್ನತಿಯ (ಕನಗನಹಳ್ಳಿ) ಶಾಕ್ಯ ಮಹಾಚೈತ್ರ ಬುದ್ಧ ವಿಹಾರದಲ್ಲಿ ನ.14ರಂದು ಬೆಳಗ್ಗೆ 11.30ಕ್ಕೆ ಧಮ್ಮ ಉತ್ಸವ ಮತ್ತು ಬುದ್ಧರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬುದ್ಧ ಧಮ್ಮ ಸಂಘದ ಅಧ್ಯಕ್ಷ ವಿಠ್ಠಲ ದೊಡ್ಡಮನಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಿವಿನ ನಡಿಗೆ ಬೌದ್ಧ ಧಮ್ಮದ ಕಡೆಗೆ ಎಂಬ ಘೋಷವ್ಯಾಖ್ಯ ದೊಂದಿಗೆ ನಾಗಪುರದ ಧೀಕ್ಷಾ ಭೂಮಿ ಅಧ್ಯಕ್ಷ ಭಂತೆ ನಾಗರ್ಜುನ ಸುರಾಯಿ ಸಸಾಯಿ, ಬಸವಕಲ್ಯಾಣದ ಭಂತೆ ಧಮ್ಮನಾಗ, ವಿಜಯಪುರದ ಭಂತೆ ಭೋಧಿಪ್ರಜ್ಞೆ ಹಾಗೂ ಭಂತೆ ಧಮ್ಮಾನಂದ, ಭಂತೆ ವರಜ್ಯೋತಿ, ಭಂತೆ ಜ್ಞಾನಸಾಗರ, ಭಂತೆ ರೇವಂತ, ಭಂತೆ ಧರ್ಮಪಾಲ, ಭಂತೆ ಸಂಘಪಾಲ, ಭಂತೆ ಸಾರಿಪುತ್ರ, ಭಂತೆ ಕೊರಮೇಶ್ವರ, ಭಂತೆ ಧಮ್ಮದೀಪ, ಭಂತೆ ಸಂಘಾನಂದ ಸಾನಿಧ್ಯದಲ್ಲಿ ಈ ಉತ್ಸವ ನಡೆಯಲಿದೆ ಎಂದರು.
ಶಾಸಕ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಡಾ| ಎಚ್.ಸಿ. ಮಹಾದೇವಪ್ಪ, ಕೆಬಿಜೆಎನ್‌ಎಲ್ ತಾಂತ್ರಿಕ ನಿದೇರ್ಶಕ ಕೆ.ಜಿ. ಮಹೇಶ, ಧಮ್ಮ ಸಂಘದ ಗೌರವಾಧ್ಯಕ್ಷ ಟೋಪಣ್ಣ ಕೋಮಟೆ, ಸಣ್ಣ ನೀರಾವರಿ ಇಲಾಖೆಯ ಅಕಾರಿಳಾದ ಸುರೇಶ ಶರ್ಮಾ, ಅಶೋಕ ಅಂಬಲಗಿ, ಡಿ.ಎಲ್.ಗಾಜರೆ, ನರೇಂದ್ರ ಮತ್ತು ಚಿತ್ತಾಪುರ ತಾಪಂ ಇಒನೀಲಾಂಬಿಕಾ ಬಬಲಾದ ಭಾಗವಹಿಸುವರು ಎಂದರು.
ಹಿರಿಯ ವೈದ್ಯ ಡಾ|ಎಸ್.ಎಚ್.ಕಟ್ಟಿ ಮತ್ತು ನಿವೃತ್ತ ಅಧಿಕಾರಿ ರವಿಕಿರಣ ಒಂಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಲವಾರು ಜನರು ಬೌದ್ಧ ಧಮ್ಮ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಿದರು.
ಐತಿಹಾಸಿಕ ಕ್ಷೇತಗಳಾದ ಸನ್ನತಿ ಮತ್ತು ಬಸವಕಲ್ಯಾಣ ಸಮಗ್ರ ಅಭಿವೃದ್ಧಿಗೆ ಏಕಕಾಲಕ್ಕೆ ಪ್ರಾಧಿಕಾರಗಳನ್ನು ರಚನೆ ಮಾಡಲಾಗಿತ್ತು. ಬಸವಕಲ್ಯಾಣದ ಅಭಿವೃದ್ಧಿ ಪ್ರಾಧಿಕಾರ ಸಕ್ರಿಯವಾಗಿ ಕಾರ್ಯಚುವಟಿಕೆಗಳಲ್ಲಿ ತೊಡಗಿದೆ. ಆದರೆ, ಸನ್ನತಿ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ ಎಂದು ಮುಖಂಡ ಲಕ್ಷ್ಮೀಕಾಂತ ಹುಬ್ಬಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ಸನ್ನತಿಯಲ್ಲಿ ಪ್ರಾಧಿಕಾರದ ಕಟ್ಟಡ ನಿರ್ಮಾಣವಾಗಿದ್ದು, ಅದು ಕಳಪೆ ಕಾಮಗಾರಿಯಿಂದ ಕೂಡಿದೆ. ಅಲ್ಲದೇ, ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರವೂ ಮಾಡದ ಕಾರಣ ಕಟ್ಟಡ ಹಾಳಾಗಿ ಹೋಗುತ್ತಿದೆ. ಆದ್ದರಿಂದ ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಸುರೇಶ ಮೆಂಗನ್, ಬಾಬು ಬಗದಳ್ಳಿಡಾ| ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬಿಜೆಪಿಯವರು ಅಸ್ಪೃಶ್ಯತೆಯಿಂದ ಕಾಣುತ್ತಾರೆ. ಹೀಗಾಗಿ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಯಾರೇ ಆಗಲಿ ಸಂವಿಧಾನದ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. -ವಿಠ್ಠಲ್ ದೊಡ್ಡಮನಿ, ಹಿರಿಯ ದಲಿತ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.