ರಾಷ್ಟ್ರ ಕೂಟ ಉತ್ಸವ-ಸರ್ಕಾರದೊಂದಿಗೆ ಚರ್ಚೆ
Team Udayavani, Dec 10, 2021, 10:19 AM IST
ಸೇಡಂ: ಬರುವ ದಿನಗಳಲ್ಲಿ ಮಳಖೇಡದಲ್ಲಿ ಸರ್ಕಾರದ ವತಿಯಿಂದಲೇ ರಾಷ್ಟ್ರಕೂಟರ ಉತ್ಸವ ಆಚರಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ತಾಲೂಕಿನ ಮಳಖೇಡದಲ್ಲಿ ಸನ್ಮಾನ ಸ್ವೀಕರಿಸಿ, ರಾಷ್ಟ್ರಕೂಟರ ಕೋಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಕವಿರಾಜ ಮಾರ್ಗದ ಮಾನ್ಯಖೇಟ ನೆಲವನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸಲಾಗುವುದು. ತಾಲೂಕು, ಜಿಲ್ಲಾ ಮತ್ತು ಅಖೀಲ ಭಾರತ ಸಮ್ಮೇಳನಗಳಲ್ಲಿ ರಾಷ್ಟ್ರಕೂಟರ ನೆಲದ ಬಗ್ಗೆ ಗೋಷ್ಠಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇನ್ನೆರಡು ದಿನಗಳಲ್ಲಿ ಪದಗ್ರಹಣ ಸಮಾರಂಭ ಇದ್ದು, ಅದಕ್ಕೂ ಮೊದಲು ರಾಷ್ಟ್ರಕೂಟರ ನೆಲಕ್ಕೆ ಬಂದಿದ್ದೇನೆ. ಚುನಾವಣೆಯ ಪ್ರಚಾರವನ್ನು ಇದೇ ನೆಲದಿಂದ ಪ್ರಾರಂಭಿಸಿದ್ದೆ ಎಂದು ಹೇಳಿದರು.
ಕಾರ್ತಿಕೇಶ್ವರ ಮಠದ ವೀರಗಂಗಾಧರ ಸ್ವಾಮೀಜಿ ಮಾತನಾಡಿ, ವಿಜಯಕುಮಾರ ತೇಗಲತಿಪ್ಪಿ ಛಲದಂಕ ಮಲ್ಲರಿದ್ದಂತೆ. ಹಿಡಿದ ಕೆಲಸ ಮಾಡದೇ ಬಿಡುವುದಿಲ್ಲ. ಮುಂದೆಯೂ ಕನ್ನಡದ ಕೆಲಸ ಮಾಡುತ್ತಾರೆ ಎಂದರು. ಸಾಹಿತಿ ಹಾಗೂ ಸಂಶೋಧಕ ಮುಡಬಿ ಗುಂಡೇರಾವ್, ಕಾಂಗ್ರೆಸ್ ಮುಖಂಡ ರಾಜಶೇಖರ ಪುರಾಣಿಕ ಮಾತನಾಡಿದರು.
ಕಸಾಪ ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಶಿವರಾಜ ಅಂಗಡಿ, ವೀರಣ್ಣ ಸಜ್ಜನಶೆಟ್ಟಿ, ಗುರಣ್ಣ ತಳಕಿನ, ಅಶೋಕ ಬಂಡಿ, ರವಿ ಮರಗೋಳ, ರಮೇಶ ರಾಠೊಡ, ವಂದೇಮಾತರಂ ಕಟ್ಟಿಮನಿ, ಮಲ್ಲಿಕಾರ್ಜುನ ಲಂಗೋಟಿ, ಶಿವಾನಂದ ಮಠಪತಿ, ಬಿ.ವಿ. ಸಜ್ಜನ, ರಾಜಶೇಖರ ಮಠಪತಿ, ದೇವರಾಜ ಪುರಾಣಿಕ, ಸುಭಾಷ ರಾವೂರ, ಅರವಿಂದ ಮರಗೋಳ, ಭೀಮಾಶಂಕರ ಕೊರವಿ, ವಿಜಯಕುಮಾರರೆಡ್ಡಿ ಮಳಖೇಡ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.