ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ
Team Udayavani, Jan 29, 2022, 12:48 PM IST
ಜೇವರ್ಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ್ಮದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಸಾಹು ಗೋಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಬಡ, ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಶುಕ್ರವಾರ ಚಾಲನೆ ನೀಡಿದರು.
ತಾಲೂಕಿನ ಹರವಾಳ ಕ್ರಾಸ್ ಹತ್ತಿರದ ಶ್ರೀ ಮೂಕಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಿಟ್ ವಿತರಿಸುವ ಸಮಾರಂಭದಲ್ಲಿ ಬಡವರಿಗೆ, ನಿರ್ಗತಿಕ ಕುಟುಂಬಗಳಿಗೆ ಜೋಳ, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ವಿವಿಧ ಪದಾರ್ಥಗಳ ಆಹಾರ ಧಾನ್ಯದ ಕಿಟ್‌ಗಳನ್ನು ಮಾಲೀಕಯ್ಯ ಗುತ್ತೇದಾರ ವಿತರಿಸಿ, ಅಶೋಕ ಗೋಗಿ ಕಾರ್ಯವನ್ನು ಶ್ಲಾಘಿಸಿದರು.
ನಂತರ ತಾಲೂಕಿನ ರದ್ದೇವಾಡಗಿ, ಕೋಳಕೂರ, ಕೂಡಿ, ರಾಸಣಗಿ, ಬಣಮಿ, ಕೋಬಾಳ, ಹಂದನೂರ ಸೇರಿದಂತೆ 20 ಹಳ್ಳಿಗಳಿಗೆ ತೆರಳಿ ನೂರಾರು ಬಡವರಿಗೆ ಕಿಟ್ ವಿತರಿಸಲಾಯಿತು.
ಸಮಾಜ ಸೇವಕ ಅಶೋಕ ಸಾಹು ಗೋಗಿ, ಶಿವಾನಂದ ಸಾಹು ಮಾಕಾ, ರೇವಣಸಿದ್ಧ ಅಕ್ಕಿ, ಶರಣು ಮುತ್ತಕೋಡ ಕಲ್ಲಹಂಗರಗಾ, ದೇವಿಂದ್ರ ಜನಿವಾರ, ಶಂಕರಲಿಂಗ ಕರಕಿಹಳ್ಳಿ, ಹಣಮಂತ್ರಾವ ಹೂಗಾರ, ಅಶೋಕ ಸಾಹು ಗಣಜಲಖೇಡ, ಪ್ರಭಾಕರ ರಬಶೆಟ್ಟಿ, ವಿಶ್ವನಾಥ ಪಾಟೀಲ ಗವನಳ್ಳಿ, ಬಸವರಾಜ ಮಾಲಿಪಾಟೀಲ ಗವನಳ್ಳಿ, ನಾಗರಾಜ ಕಲ್ಲಹಂಗರಗಾ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.