Chincholi: ಜನತಾ ದರ್ಶನ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ
Team Udayavani, Sep 23, 2023, 3:16 PM IST
ಚಿಂಚೋಳಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೆ.25ರ ಸೋಮವಾರದಿಂದ ತಾಲೂಕಿನಲ್ಲಿ ಜನತಾ ದರ್ಶನ ನಡೆಸಲಿರುವುದರಿಂದ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ಚಿಂಚೋಳಿ ತಾಲೂಕು ಕ್ರೀಡಾಂಗಣಕ್ಕೆ ಜಿಲ್ಲಾ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನತಾ ದರ್ಶನ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸೆ.25 ರಂದು ನಡೆಯುವ ಜನತಾ ದರ್ಶನದಲ್ಲಿ ಮಳಿಗೆಗಳು ಮತ್ತು ಜನರ ಮನವಿಯನ್ನು ಸಚಿವರಿಗೆ ಕೊಡಲು ಬಂದಾಗ ಅವರಿಗೆ ಆಸನಗಳ ವ್ಯವಸ್ಥೆ ಮತ್ತು ಊಟದ ಬಗ್ಗೆ ವಿಚಾರಿಸಿದರು.
ತಾಲೂಕ ಕ್ರೀಡಾಂಗಣದಲ್ಲಿ ವಾಹನಗಳ ವ್ಯವಸ್ಥೆ, ಮಹಿಳೆಯರಿಗೆ ಪ್ರತ್ಯೇಕವಾಗಿ ಮಳಿಗೆಗಳು ಪ್ರಾರಂಭಿಸಿಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಯಾವುದೇ ರೀತಿಯ ತೊಂದರೆ ಆಗದಂತೆ ಜನರಿಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.