ಇಂದು ವಿಮಾನ ಹಾರಾಟ ತರಬೇತಿಗೆ ಚಾಲನೆ
Team Udayavani, Aug 15, 2021, 1:26 PM IST
ಕಲಬುರಗಿ: ಸ್ವಾತಂತ್ರ್ಯೋತ್ಸವ ದಿನವಾದ ಆ.15ರಂದುಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆವಿಮಾನ ಹಾರಾಟ ತರಬೇತಿಗೆ ಚಾಲನೆ ನೀಡಲಾಗುತ್ತಿದೆ.
ರವಿವಾರದಿಂದಲೇ ಎರಡು ಅಕಾಡೆಮಿಗಳುಕಾರ್ಯಾರಂಭ ಮಾಡಲಿವೆ.ರಾಜ್ಯದ ಕಲಬುರಗಿ ಹಾಗೂ ಬೆಳಗಾವಿ ವಿಮಾನನಿಲ್ದಾಣದಲ್ಲಿ ತಲಾ ಎರಡು ವಿಮಾನ ಹಾರಾಟ ತರಬೇತಿಸಂಸ್ಥೆಗಳ ಆರಂಭಕ್ಕೆ ಮೇ 31ರಂದು ಕೇಂದ್ರ ಸರ್ಕಾರಅನುಮತಿ ನೀಡಿತ್ತು. ಕಲಬುರಗಿ ವಿಮಾನ ನಿಲ್ದಾಣದಲ್ಲಿಹೈದರಾಬಾದ್‌ನ ಏಷ್ಯಾ ಪೆಸ್ಟಿಕ್ ಫ್ಲೆ çಟ್ ಟ್ರೈನಿಂಗ್‌ಅಕಾಡೆಮಿ, ದೆಹಲಿಯ ರೆಡ್‌ಬರ್ಡ್ ಏವಿಯೇಷನ್ ಅಕಾಡೆಮಿ ತಮ್ಮ ಕೇಂದ್ರಗಳನ್ನು ಆರಂಭಿಸಲಿವೆ.
ತರಬೇತಿ ಆರಂಭಿಸುವ ಮುನ್ನ ಅಕಾಡೆಮಿಗಳುತಮಗೆ ಬೇಕಾದ ಕಚೇರಿ, ತರಗತಿಗಳ ಕೊಠಡಿ ಸೇರಿದಂತೆಮಾಡಿಕೊಳ್ಳಲು ಒಂದು ವರ್ಷದ ಕಾಲಾವಕಾಶ ಇದೆ.ಆದರೆ, ವಿಮಾನ ನಿಲ್ದಾಣದಲ್ಲಿ ಈಗಾಗಲೇ ಲಭ್ಯವಿರುವಸೌಲಭ್ಯಗಳನ್ನು ಬಳಸಿಕೊಂಡು ರವಿವಾರದಿಂದಲೇಎರಡೂ ಅಕಾಡೆಮಿಗಳನ್ನು ಕಾರ್ಯಾರಂಭಿಸಲು ಉದ್ದೇಶಿಸಲಾಗಿದೆ. ರವಿವಾರ ಮಧ್ಯಾಹ್ನ 3:30ಕ್ಕೆ ಕೇಂದ್ರವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಖರೋಲಾ ಉಭಯ ಅಕಾಡೆಮಿಗಳ ವಿಮಾನಹಾರಾಟ ತರಬೇತಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಕಲಬುರಗಿಯಲ್ಲಿ ವಿಮಾನ ಹಾರಾಟ ತರಬೇತಿಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡುಅಕಾಡೆಮಿಗಳಲ್ಲಿ ಬೇರೆ-ಬೇರೆ ಕಡೆ ವಿದ್ಯಾರ್ಥಿಗಳುತರಬೇತಿ ಪಡೆಯುತ್ತಿದ್ದಾರೆ. ಹೈದರಾಬಾದ್ ಹಾಗೂಮಹಾರಾಷ್ಟÅದಲ್ಲಿ ಈಗಾಗಲೇ ತರಬೇತಿ ನಿರತವಿದ್ಯಾರ್ಥಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.ಈ ವಿದ್ಯಾರ್ಥಿಗಳ ಮುಂದಿನ ತರಬೇತಿ ಕಲಬುರಗಿಯಲ್ಲಿನಡೆಯಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕಜ್ಞಾನೇಶ್ವರರಾವ್ ತಿಳಿಸಿದ್ದಾರೆ.
ಈ ಹಿಂದೆ ಉತ್ತರ ಭಾರತದಲ್ಲಿ ಹವಾಮಾನ ವೈಪರೀತ್ಯಕಾರಣದಿಂದ ಅಲ್ಲಿ ನಡೆಯಬೇಕಿದ್ದ ತರಬೇತಿಯನ್ನುಕಲಬುರಗಿಗೆ ಸ್ಥಳಾಂತರ ಮಾಡಲಾಗಿತ್ತು. ವಿಮಾನಹಾರಾಟ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯಉರಾನ್ ಅಕಾಡೆಮಿ ವಿದ್ಯಾರ್ಥಿಗಳು ಇಲ್ಲಿ ಎರಡುತಿಂಗಳ ಕಾಲ ತರಬೇತಿ ಪಡೆದಿದ್ದರು.
ಈ ಅವಧಿಯಲ್ಲಿಬರೋಬ್ಬರಿ 750 ಗಂಟೆಗಳ ಕಾಲ ಯಶಸ್ವಿಯಾಗಿತರಬೇತಿಯನ್ನು ವಿದ್ಯಾರ್ಥಿಗಳು ಪಡೆದಿದ್ದರು. ಇದುವಿಮಾನ ಹಾರಾಟ ತರಬೇತಿಗೆ ಮುನ್ನಡಿ ಹಾಕಿತ್ತುಎಂದೇ ಹೇಳಬಹುದು.ಈಗ ವಿಮಾನ ಹಾರಾಟ ತರಬೇತಿಗೆ ಆಯ್ಕೆಯಾಗಿರುವ ಏಷ್ಯಾ ಪೆಸಿμಕ್ ಫ್ಲೆ çಟ್ ಟ್ರೈನಿಂಗ್‌ಅಕಾಡೆಮಿ ಹಾಗೂ ರೆಡ್‌ಬರ್ಡ್ ಏವಿಯೇಷನ್‌ಅಕಾಡೆಮಿಗೆ ಈಗಾಗಲೇ ತಲಾ ಐದು ಸಾವಿರ ಚದರಮೀಟರ್ ಜಾಗ ಹಸ್ತಾಂತರ ಮಾಡಲಾಗಿದೆ.
ಕಟ್ಟಡದವಿನ್ಯಾಸ, ನಿರ್ಮಾಣ, ತರಗತಿ ಕೊಠಡಿಗಳು, ಪಾರ್ಕಿಂಗ್‌ಬೇಸ್ ಮತ್ತು ಅಗತ್ಯವಾದ ಸೌಕರ್ಯಗಳನ್ನು ಸಂಸ್ಥೆಯವರೇನೋಡಿಕೊಳ್ಳಬೇಕಿದೆ. ಪ್ರತಿ ಸಂಸ್ಥೆಯು ಒಂದು ವರ್ಷಕ್ಕೆಮೂರು ಸಾವಿರ ಗಂಟೆ ಹಾರಾಟ ತರಬೇತಿ ನೀಡಲಿವೆ.ಈ ಎರಡೂ ಅಕಾಡೆಮಿಗಳು 30 ವರ್ಷ ಕಾಲ ಕಾರ್ಯನಿರ್ವಹಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.