ಬಿರುಗಾಳಿಗೆ ಉರುಳಿದ ವಿದ್ಯುತ್ ಕಂಬ-ಮರಗಳು
Team Udayavani, May 17, 2022, 12:57 PM IST
ಚಿಂಚೋಳಿ: ತಾಲೂಕಿನಲ್ಲಿ ರವಿವಾರ ಸಂಜೆ ಗುಡುಗು ಮಿಂಚು, ಸಿಡಿಲಿನ ಸಮೇತ ಬಿರುಗಾಳಿ ಬೀಸಿ ಸುರಿದ ಅಕಾಲಿಕ ಮಳೆಯಿಂದ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ರಸ್ತೆ ಬದಿಯಲ್ಲಿರುವ ಗಿಡಮರಗಳು ಉರುಳಿದ್ದರಿಂದ ವಾಹನ ಸಂಚಾರಕ್ಕೆ ಜನರು ಪರದಾಡುವಂತೆ ಆಗಿತ್ತು.
ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಪೋಲಕಪಳ್ಳಿ, ಅಣವಾರ, ಕನಕಪುರ, ಸೇರಿ ಬಡಾ ತಾಂಡಾ, ಭಿಕ್ಕುನಾಯಕ ತಾಂಡಾ, ಏತಬಾರಪುರ ತಾಂಡಾ, ಭಿಕ್ಕುನಾಯಕ ತಾಂಡಾ ಇನ್ನಿತರ ಗ್ರಾಮಗಳಲ್ಲಿ ಬಿರುಗಾಳಿ ಬೀಸಿದ ಪರಿಣಾಮವಾಗಿ ಗಿಡ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮವಾಗಿ ತಾಲೂಕಿನಲ್ಲಿ ಒಟ್ಟು 40 ವಿದ್ಯುತ್ ಕಂಬಗಳು ಮುರಿದು ನೆಲಕ್ಕುರುಳಿವೆ. ಒಂದು ಟಿಸಿಯೂ ನೆಲಕ್ಕೆ ಬಿದ್ದಿದೆ. ಒಟ್ಟು 4ಲಕ್ಷ ರೂ.ಗಳಷ್ಟು ಅಕಾಲಿಕ ಮಳೆಯಿಂದ ಹಾನಿ ಸಂಭವಿಸಿದೆ ಎಂದು ಜೆಸ್ಕಾಂ ಉಪ-ವಿಭಾಗದ ಎಇಇ ಉಮೇಶ ಗೋಳಾ ತಿಳಿಸಿದ್ದಾರೆ.
ರವಿವಾರ ಸಂಜೆ ಬೀಸಿದ ಭಾರಿ ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳು ಕಡಿದು ಬಿದ್ದು ಹಾನಿಯಾಗಿರುವುದರಿಂದ ಲೈನ್ ಮನ್‌ಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಶೀಘ್ರವೇ ವಿದ್ಯುತ್ ಪೂರೈಕೆ ಆಗಲಿದೆ ಎಂದು ಜೆಸ್ಕಾಂ ಎಇಇ ತಿಳಿಸಿದ್ದಾರೆ. ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಶಾಂತಕುಮಾರ ರೇವಣಸಿದ್ಧಪ್ಪ ಅವರಿಗೆ ಸೇರಿದ ತೊಗರಿ ಬೇಳೆ ಕಾರ್ಖಾನೆಯ (ದಾಲಮಿಲ್) ತಗಡುಗಳು ಗಾಳಿಗೆ ಹಾರಿ ಹೋಗಿವೆ. ಗೋಡೆ ಕುಸಿದು ಬಿದ್ದಿದೆ. ದಾಲ್‌ಮಿಲ್‌ದಲ್ಲಿದ್ದ ತೊಗರಿ ಬ್ಯಾಳಿ ಐದು ಕ್ವಿಂಟಲ್ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಒಟ್ಟು 6.35ಲಕ್ಷ ರೂ. ಹಾನಿಯಾಗಿದೆ ಎಂದು ಶಾಂತಕುಮಾರ ಹಸರಗುಂಡಗಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಐನಾಪುರ ಕಂದಾಯ ನಿರೀಕ್ಷಕ ಆರೀಫ ಮತ್ತು ಗ್ರಾಮಲೆಕ್ಕಿಗ ಕಾರ್ತಿಕ ಭೇಟಿ ನೀಡಿ ಪರಿಶೀಲಿಸಿ ಹಾನಿ ಬಗ್ಗೆ ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ. ಪೋಲಕಪಳ್ಳಿ, ಅಣವಾರ, ದೇಗಲಮಡಿ, ಐನೋಳಿ, ಪಟಪಳ್ಳಿ, ಕನಕಪುರ, ಚಿಮ್ಮನಚೋಡ, ಪರದಾರ ಮೋತಕಪಳ್ಳಿ, ಗಂಗನಪಳ್ಳಿ, ಗರಗಪಳ್ಳಿ, ಕರ್ಚಖೇಡ ಗ್ರಾಮಗಳಲ್ಲಿ ಬಾಳೆಗಿಡಗಳು ಹಾನಿಯಾಗಿವೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಕುಮಾರ ತಿಳಿಸಿದ್ದಾರೆ.
ಚಂದಾಪುರ, ಚಿಂಚೋಳಿ, ಕಲಭಾವಿ ತಾಂಡಾ, ಚಿಕ್ಕನಿಂಗದಳ್ಳಿ ತಾಂಡಾ, ಸೋಮಲಿಂಗದಳ್ಳಿ, ಮಿರಿಯಾಣ, ಕಲ್ಲೂರ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.