ಗೋವುಗಳ ಸಮೇತ ಗ್ರಾಪಂಗೆ ರೈತರ ಮುತ್ತಿಗೆ
Team Udayavani, Dec 3, 2021, 3:01 PM IST
ಕಾಳಗಿ: ತಾಲೂಕಿನ ರಟಕಲ್ ಗ್ರಾಮದ ರೇವಣಸಿದ್ದೇಶ್ವರ ಗೋಶಾಲೆಯಲ್ಲಿ ಗೋವುಗಳಿಗೆ ಕುಡಿಯಲು ನೀರಿನ ಸೌಲಭ್ಯ ಕಲ್ಪಿಸುವಂತೆ ಅಗ್ರಹಿಸಿ ಗೋವುಗಳೊಂದಿಗೆ ರೇವಣಸಿದ್ದೇಶ್ವರ ಗೋವು ಸಂರಕ್ಷಣಾ ಸೇವಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಗೌರಿಗುಡ್ಡದ ರೇವಣಸಿದ್ಧ ಶರಣರು, ರಟಕಲ್ ಗ್ರಾಮದ ಹೊರವಲಯದ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗದ ಗೋಶಾಲೆಯಲ್ಲಿ ಸುಮಾರು ಎಂಬತ್ತಕ್ಕೂ ಹೆಚ್ಚಿನ ದನಕರುಗಳಿಗಳಿವೆ. ಇವುಗಳಿಗೆ ಕುಡಿಯಲು ಯಾವುದೇ ನೀರಿನ ಸೌಲಭ್ಯವಿಲ್ಲ. ಪ್ರತಿದಿನ ಸುಮಾರು ಒಂದು ಕಿ.ಮೀ ದೂರದಿಂದ ನೀರು ಹೊತ್ತು ತಂದು ದನಕರುಗಳಿಗೆ ಕುಡಿಸುತ್ತಿದ್ದೇವೆ. ಇದರಿಂದ ತುಂಬಾ ತೊಂದರೆ ಉಂಟಾಗುತ್ತಿದೆ. ಗೋಶಾಲೆಯಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೋರ್‌ವೆಲ್ ಕೊರೆಸುವ ಮೂಲಕ ಗೋವುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ರಟಕಲ್ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಗೌರಿಶಂಕರ ಉಪ್ಪಿನ್, ಮಲ್ಲು ಚಿಕ್ಕಗಸಿ, ಬಸವರಾಜ ಹುಳಗೇರಿ, ಓಂಕಾರ ಹಾವಳಗಿ, ಸಂತೋಷ, ಸುಭಾಶ್ಚಂದ್ರ ಪಾಟೀಲ, ರೇವಣಸಿದ್ದ ಮುಚ್ಚಟ್ಟಿ, ರಸೂಲ್ ಕೊರಬಾ, ರಾಜು ಸೊಂತ, ರಾಜು ಹಂದ್ರೋಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.