ಕೇಂದ್ರ-ರಾಜ್ಯ ಸರ್ಕಾರ ವಿರುದ್ಧ ಮೊಳಗಿದ ರೈತ ಕಹಳೆ

ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವರೆಗೆ ಹೋರಾಟ ನಿಲ್ಲುವುದಿಲ್ಲ

Team Udayavani, Jan 27, 2021, 3:52 PM IST

Udayavani Kannada Newspaper

ಕಲಬುರಗಿ: ಕಳೆದ ಒಂದು ವರ್ಷದ ಅವಧಿಯೊಳಗೆ ಕೇಂದ್ರ ಸರ್ಕಾರದ ವಿರುದ್ಧ ಮತ್ತೂಂದು ಬೃಹತ್‌ ಹೋರಾಟಕ್ಕೆ ತೊಗರಿ ಕಣಜ ಖ್ಯಾತಿಯ ಕಲಬುರಗಿ
ಮಂಗಳವಾರ ಸಾಕ್ಷಿಯಾಗಿತು. 2019ರ ಡಿಸೆಂಬರ್‌ ಮತ್ತು 2020ರ ಜನವರಿಯಲ್ಲಿ ಸಿಎಎ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ಕೊರೊನಾ ಕಾರಣ ಈ ಹೋರಾಟಕ್ಕೆ ತಡೆ ಬಿದ್ದಿತ್ತು. ಈಗ ಮೂರು ಕೃಷಿ ಸಂಬಂಧಿತ ಕಾಯ್ದೆಗಳ ವಿರೋಧ ದೇಶಾದ್ಯಂತ ಹೋರಾಟ ನಡೆಯುತ್ತಿದ್ದು, ಇದರ ಭಾಗವಾಗಿಯೇ ರೈತ ಕಹಳೆ ಮೊಳಗಿಸಲಾಯಿತು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ವಸ್ತುಗಳ ತಿದ್ದಪಡಿ ಕಾಯ್ದೆಗಳನ್ನು ವಿರೋ ಧಿಸಿ ದೆಹಲಿಯಲ್ಲಿ ಹೋರಾಟನಿರತ ರೈತರು ಗಣರಾಜ್ಯೋತ್ಸವ ದಿನದಂದೇ ಕರೆಕೊಟ್ಟಿದ್ದ ಟ್ರಾÂಕ್ಟರ್‌ ರ್ಯಾಲಿ ಬೆಂಬಲಿಸಿ ಹಮ್ಮಿಕೊಂಡಿದ್ದ ಜನತಾ ಪರೇಡ್‌ ಯಶಸ್ವಿಯಾಗಿ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಆರು ಕಿಲೋ ಮೀಟರ್‌ ದೂರ 300ಕ್ಕೂ ಅಧಿಕ ಟ್ರಾÂಕ್ಟರ್‌ಗಳ ಬೃಹತ್‌ ಮೆರವಣಿಗೆ ನಡೆಸುವ ಮೂಲಕ
ಸುಮಾರು ಎರಡು ಸಾವಿರ ರೈತರ ಧ್ವನಿ ಮಾರ್ದನಿಸಿತು.

ಗಣರಾಜ್ಯೋತ್ವವದ ಧ್ವಜಾರೋಹಣ ಬಳಿಕ ಸಂಯುಕ್ತ ಕಿಸಾನ್‌ ಮೋರ್ಚಾ ವೇದಿಕೆ ನೇತೃತ್ವದಲ್ಲಿ ಮಧ್ಯಾಹ್ನ 12ಗಂಟೆಗೆ ಜನತಾ ಪರೇಡ್‌ ಆರಂಭವಾಯಿತು. ಇಲ್ಲಿನ ಹುಮನಾಬಾದ್‌ ರಿಂಗ್‌ ರೋಡ್‌ನ‌ಲ್ಲಿ ಜನತಾ ಪರೇಡ್‌ ಗೆ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ| ಟಿ.ಎನ್‌.ಕಮ್ಮರಡಿ ಚಾಲನೆ ನೀಡಿದರು. ಅಲ್ಲಿಂದ ಮಾಜಿ ಉಪಸಭಾಪತಿ ಬಿ.ಆರ್‌.ಪಾಟೀಲ್‌, ಹೋರಾಟಗಾರರಾದ ಶರಣಬಸಪ್ಪ ಮಮಶೆಟ್ಟಿ, ಕೆ.ನೀಲಾ, ಭೀಮಾಶಂಕರ ಮಡಿಯಾಳ, ಎಸ್‌.ಎಂ.ಶರ್ಮಾ, ಶೌಕತ್‌ಅಲಿ ಆಲೂರ, ಎಸ್‌.ಆರ್‌.ಕೊಲ್ಲೂರ, ಉಮಾಪತಿ ಪಾಟೀಲ್‌, ಗಣೇಶ ಪಾಟೀಲ್‌, ಸುನಿಲ್‌ ಮಾನ್ಪಡೆ ಮುಂತಾದವರ
ಮುಂದಾಳತ್ವದಲ್ಲಿ ಪರೇಡ್‌ ಸಾಗಿತು. ಕಾಂಗ್ರೆಸ್‌ ಶಾಸಕರಾದ ಡಾ| ಅಜಯ್‌ ಸಿಂಗ್‌, ಕನೀಜ್‌ ಫಾತೀಮಾ, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಸೇರಿ ಹಲವರ ಮುಖಂಡರು ಹಸಿರು ಪೇಟಗಳನ್ನು ತೊಟ್ಟು ಪರೇಡ್‌ನ‌ಲ್ಲಿ ಕೊನೆಯವರೆಗೆ ಸಾಗಿಸಿದರು.

ಯಾವುದೇ ಪಕ್ಷ, ಸಂಘಟನೆಗಳ ಧ್ವಜಗಳನ್ನು ಬಳಸದೆ ಕೇವಲ ತಿರಂಗ ಧ್ವಜಗಳನ್ನು ಹಿಡಿದು ಶಿಸ್ತುಬದ್ಧವಾಗಿಯೇ ಪರೇಡ್‌ ನಡೆಯಿತು. ಸಂವಿಧಾನ ಪೀಠಿಕೆ ಪ್ರತಿಕೃತಿ ಕಟ್ಟಿದ ಟ್ರಾಕ್ಟರ್‌ ಮುಂದೆ ಸಾಗಿದರೆ, ಅದರ ಹಿಂದೆ ಉಳಿದ  ಟ್ರಾÂಕ್ಟರ್‌ಗಳು, ರೈತರು ಸಾಗಿದರು. ಟ್ರಾÂಕ್ಟರ್‌ಗಳಿಗೆ ಅಲಂಕಾರ ಮಾಡಿಕೊಂಡು ಬಂದಿದ್ದ ರೈತರು, ಎಡ ಮತ್ತು ಬಲಕ್ಕೆ ತಿರಂಗ ಧ್ವಜಗಳನ್ನೂ ಕಟ್ಟಿದ್ದರು. ಹಲವು ರೈತರು ಮತ್ತು ಮಹಿಳೆಯರು ಟ್ರಾಕ್ಟರ್‌ಗಳ ಪಾಟ್‌ ಮತ್ತು ಎಂಜಿನ್‌ ಏರಿ ಕಳಿತು ಕಾಯ್ದೆಗಳ ವಿರುದ್ಧ ಘೋಷಣೆ ಮೊಳಗಿಸಿದರು.

ಅಲ್ಲದೇ, ಮಾರ್ಗದುದ್ದಕ್ಕೂ ರೈತಗೀತೆ, ಕ್ರಾಂತಿಗೀತೆಗಳೂ ಮೊಳಗಿದವು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪನವರ ವಿರುದ್ಧ ರ್ಯಾಲಿ ಉದ್ದಕ್ಕೂ ಧಿಕ್ಕಾರ ಕೂಗಿದರು. ಹುಮನಾಬಾದ್‌ ರಿಂಗ್‌ ರೋಡ್‌ ಮೂಲಕ
ಕೆಎಂಎಫ್‌ ಕಚೇರಿ, ನೆಹರು ಗಂಜ್‌, ಕಿರಾಣಾ ಬಜಾರ್‌, ಸೂಪರ್‌ ಮಾರ್ಕೆಟ್‌, ಜಗತ್‌ ವೃತ್ತದ ಮಾರ್ಗವಾಗಿ ಸಾಗಿದ ಪರೇಡ್‌ ಜಿಲ್ಲಾಧಿಕಾರಿ ಕಚೇರಿಯವರೆಗೆ
ಸಂಜೆ 4ಗಂಟೆ ಸುಮಾರಿಗೆ ಬಂದು ತಲುಪಿತು.

ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಹಲವು ಮುಖಂಡರು, ಇಂದು ಆರಂಭವಾಗಿದ್ದು, ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವರೆಗೆ
ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಬಂಡವಾಳಶಾಹಿಗಳ ಪರವಾಗಿದ್ದು, ದೇಶದ ಜನರಿಗೆ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಹೊರಟಿದೆ. ಈಗ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತ ವಿರೋ ಧಿಯಾಗಿದ್ದು, ಇವುಗಳ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಇದು ಐತಿಹಾಸಿಕವಾದ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ.

ಡಾ| ಅಜಯ್‌ ಸಿಂಗ್‌, ಕಾಂಗ್ರೆಸ್‌ ಶಾಸಕ

ಈ ಬಾರಿಯ ಗಣರಾಜ್ಯೋತ್ಸವ ನಿಜವಾದ ಗಣರಾಜ್ಯವನ್ನು ತೋರಿಸಿದೆ. ಜನ ವಿರೋಧಿ ಸರ್ಕಾರ ಮತ್ತು ಕಾಯ್ದೆಗಳ ವಿರುದ್ಧ ರೈತರು ದೆಹಲಿಗೆ ಲಗ್ಗೆ ಇಟ್ಟು ತಮ್ಮ ಸಿಟ್ಟು ಹೊರಹಾಕಿದ್ದಾರೆ. ನೀಚ ಸರ್ಕಾರ ಅನ್ನದಾತರ ಮೇಲೆ ಆಶ್ರುವಾಯು ಪ್ರಯೋಗ ಮಾಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದೆ. ಆದರೆ, ಈಗಿನ ಸಿಟ್ಟು ಸಂಸತ್ತು ಮತ್ತು ವಿಧಾನಸೌಧಕ್ಕೂ ಬರಲಿದೆ. ಇದಕ್ಕೂ ಮುನ್ನವೇ ಸರ್ಕಾರ ಮೂರು ಕಾಯ್ದೆಗಳನ್ನು ವಾಪಸ್‌ ಪಡೆಯುವ ಕೆಲಸ ಮಾಡಲಿ.
ಡಾ| ಟಿ.ಎನ್‌. ಕಮ್ಮರಡಿ, ಮಾಜಿ ಅಧ್ಯಕ್ಷ, ರಾಜ್ಯ ಕೃಷಿ ಬೆಲೆ ಆಯೋಗ

ಚುನಾವಣೆಯಲ್ಲಿ ಅಪರಾಪತರಾ ಮಾಡಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ದೇಶದ ಜನರಿಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದೆ. ತಮ್ಮ ಸರ್ಕಾರ ದೇಶದ ಜನರು ಮತ್ತು ರೈತರ ಪರನಾ ಅಥವಾ ಕಳ್ಳ ಕಾಪೋರೇರ್ಟ್‌ಗಳ ಪರನಾ ಎಂದು ಮೊದಲ ಸ್ಪಷ್ಟಪಡಿಸಲಿ ಮತ್ತು ರೈತರಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಲಿ. ಅಲ್ಲಿಯವರೆಗೆ ದೇಶದ ಜನರು ತಮ್ಮ ಮನೆಗಳಿಗೆ ತೆರಳದೆ ಹೋರಾಟ ಮುಂದುವರೆಸಲಿದ್ದಾರೆ.
ಕೆ.ನೀಲಾ, ಹೋರಾಟಗಾರ್ತಿ

ಟಾಪ್ ನ್ಯೂಸ್

Kharge (2)

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge (2)

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kharge (2)

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.