ಜನಮನ ರಂಜಿಸಿದ ಜಾನಪದ ಉತ್ಸವ
Team Udayavani, Apr 6, 2022, 1:20 PM IST
ಆಳಂದ: ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿರುವ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವದು ಅಗತ್ಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ ಹೇಳಿದರು.
ತಾಲೂಕಿನ ತಡೋಳಾ ಗ್ರಾಮದಲ್ಲಿ ಮಾದನಹಿಪ್ಪರಗಿಯ ಮಹಾತ್ಮ ಜ್ಯೋತಿಬಾ ಫುಲೆ ನಾಟಕ ಬೈಲಾಟ ಹಾಗೂ ಜಾನಪದ ಕಲಾ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾಗೂ ಕಾರ್ಯಕ್ರಮಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಉಪಾಧ್ಯಕ್ಷೆ ಪೂಜಾ ಪ್ರವೀಣ ಕಾಂಬಳೆ, ಪಿಡಿಒ ಶರಣಬಸಪ್ಪ ಕಡಗಂಚಿ, ಮಾದನಹಿಪ್ಪರಗಿಯ ಮಹಾತ್ಮ ಜ್ಯೋತಿಬಾ ಫುಲೆ ನಾಟಕ ಬೈಲಾಟ ಹಾಗೂ ಜಾನಪದ ಕಲಾ ಸಂಘದ ಅಧ್ಯಕ್ಷ ಸಾತಲಿಂಗಪ್ಪ ಸಲಗರ ಮಾತನಾಡಿದರು.
ಕಲ್ಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಇಂದ್ರಜೀತ್ ಜಗತಾಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಮಹಾವೀರ ಕಾಂಬಳೆ, ಕೇತಕಿ ಅವಟೆ, ಮಹಾದೇವ ಶಿಂಧೆ, ಸುಮನ ಪಾಟೀಲ, ಆನಂದರಾಯ ಪಾಟೀಲ, ಸಿದ್ಧರಾಮ ಬೆಲ್ಲೆ, ಸೂರ್ಯಕಲಾ ಜಮಾದಾರ, ವಿಜಯಾಬಾಯಿ ನಾಗ ಮೋಡೆ, ಬಾಬುರಾವ ಮುಲಗೆ, ಸುನೀತಾ ಬಂದಿಛೋಡೆ, ಕಾಂತು ರಾಠೊಡ, ನಿರ್ಮಲಾ ಸೂರ್ಯವಂಶಿ ಇತರರು ಇದ್ದರು.
ಕಲಾವಿದರಾದ ಶಿವಶರಣಯ್ಯ ಸ್ವಾಮಿ ಸುಗಮ ಸಂಗೀತ, ಶ್ರೀಶೈಲ್ ಕೊಂಡೇದ ಜಾನಪದ ಗೀತೆ, ಉದಯಕುಮಾರ ಶಾಸ್ತ್ರೀ ಹಾಗೂ ಸಂಗಡಿಗರಿಂದ ಕಥಾ ಕೀರ್ತನೆ, ನಾಗೀಂದ್ರಪ್ಪ ಸಪ್ಪನಗೋಳ ದಾಸವಾಣಿ), ಶ್ರೀಶೈಲ ಪಾಟೀಲ ತತ್ವಪದ, ರಾಜಕುಮಾರ ಮಾಡ್ಯಾಳ ವಚನ ಸಂಗೀತ, ಸಂಗಣ್ಣಾ ಕೋಳಶಟ್ಟಿ, ಶಿವಲಿಂಗಪ್ಪ ಕೋಳಶಟ್ಟಿ, ಸಿದ್ಧಾರೂಢ ಕೋಣೆದ ಭಜನಾ ಪದ, ಗುರುನಾಥ ಸುತಾರ, ಮಲ್ಲು ಮರಬೆ ಅವರ ವೀರಗಾಸೆ ಪುರವಂತಿಕೆ ಕುಣಿತ ಗಮನ ಸೆಳೆದವು. ನಾಗಲಿಂಗಯ್ಯ ಸ್ಥಾವರಮಠ, ಅಭಿಲಾಷ ಮಠಪತಿ, ಬಸವರಾಜ ಬಟ್ಟರಕಿ, ಮಹಿಬೂಬ್ ಪಣಿಬಂದ, ಬಸವರಾಜ ಪ್ಯಾಟಿ, ರಾಮಚಂದ್ರ ಚಿಂಚೋಳಿ, ರಾಚಯ್ಯ ಸ್ವಾಮಿ, ಶಿವಕುಮಾರ ಬೆಟ್ಟಜೇವರ್ಗಿ, ಶಿವಶರಣಪ್ಪ ಪೂಜಾರಿ ಭಾಗವಹಿಸಿ ತಮ್ಮ ಕಲೆಯನ್ನು ಸಾದರಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.