ಮುಂಗಾರು ಬಿತ್ತನೆಗೆ ಸಜ್ಜಾದ ಅನ್ನದಾತ
ಗುರುಗುಂಟಾ ಹೋಬಳಿಯಲ್ಲಿ 17,620 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ
Team Udayavani, Jun 11, 2020, 5:15 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹಟ್ಟಿ ಚಿನ್ನದ ಗಣಿ: ಕಳೆದ ಸಲ ತೀವ್ರ ಬರದಿಂದ ತತ್ತರಿಸಿದ ಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಈ ವರ್ಷ ಬಿದ್ದ ರೋಹಿಣಿ ಮಳೆಯಿಂದಾಗಿ ಭೂಮಿ ಹದಗೊಳಿಸಿ ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಎರಡು-ಮೂರು ಉತ್ತಮ ಮಳೆಯಾಗಿ ನೆಲ ಹಸಿಯಾಗಬೇಕು. ಅಂದಾಗ ಮಾತ್ರ ಭೂಮಿ ಬಿತ್ತನೆಗೆ ಪೂರಕವಾಗುತ್ತದೆ. ಕಾರಹುಣ್ಣಿಮೆ ಮುಗಿದಿದ್ದರಿಂದ ರೈತರು ಈಗ ಹೊಲಗಳತ್ತ ಮುಖ ಮಾಡಿದ್ದಾರೆ. ಕೃಷ್ಣಾ ತೀರದ ಗ್ರಾಮಗಳ ರೈತರು ಎತ್ತು ಮತ್ತು ಟ್ರ್ಯಾಕ್ಟರ್ ಮೂಲಕ ಭೂಮಿ ಹದ ಮಾಡಿಕೊಳ್ಳುತ್ತಿದ್ದು ಮಳೆ ನಿರೀಕ್ಷೆಯಲ್ಲಿ ಬಿತ್ತನೆಗೆ ಸಜ್ಜಾಗುತಿದ್ದಾರೆ.2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ 4,550 ಹೆಕ್ಟೇರ್ ನೀರಾವರಿ ಹಾಗೂ 13,070 ಖುಷ್ಕಿ ಸೇರಿ ಒಟ್ಟು 17,620 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ.
ನೀರಾವರಿ ಭೂಮಿ: ಭತ್ತ 1800 ಹೆಕ್ಟೇರ್, ಜೋಳ 10 ಹೆಕ್ಟೇರ್, ಮೆಕ್ಕೆಜೋಳ 30 ಹೆಕ್ಟೇರ್, ಹೈಬ್ರೀಡ್ ಸಜ್ಜೆ 1800 ಹೆಕ್ಟೇರ್, ತೊಗರಿ 100 ಹೆಕ್ಟೇರ್, ಶೇಂಗಾ 10 ಹೆಕ್ಟೇರ್, ಸೂರ್ಯಕಾಂತಿ 400 ಹೆಕ್ಟೇರ್, ಹತ್ತಿ 400 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಖುಷ್ಕಿ: ಸಜ್ಜೆ 550 ಹೆಕ್ಟೇರ್, ನವಣೆ 15, ತೊಗರಿ 3500, ಹೆಸರು 200, ಅಲಸಂದಿ 50, ಸೂರ್ಯಕಾಂತಿ 2500, ಎಳ್ಳು 400, ಔಡಲ 10, ಗುರೆಳ್ಳು 5, ಹತ್ತಿ 890 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಕಳೆದ ವರ್ಷ ತೀವ್ರ ಬರಕ್ಕೆ ನಲುಗಿದ ಈ ಭಾಗದಲ್ಲಿ ಮೇ ಕೊನೆ ವಾರದಲ್ಲಿ ಮಳೆ ಬಿದ್ದಿರುವುದು ಸಂತಸ ತಂದಿದೆ. ಇದೇ ರೀತಿ ಮಳೆಯಾದರೆ ಮುಂಗಾರಿಗೆ ಉತ್ತಮ ಬೆಳೆ ಬರುವ ನಿರೀಕ್ಷೆ ಹೊಂದಬಹುದು.
ಬಸಪ್ಪ,
ಗುರುಗುಂಟಾ ಗ್ರಾಮದ ರೈತ
ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ 17,620 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಸಕಾಲಕ್ಕೆ ಮಳೆ ಆದಲ್ಲಿ ಈ ವರ್ಷ ನಿರೀಕ್ಷಿತ ಬಿತ್ತನೆ ಗುರಿ ತಲುಪಬಹುದು.
ಶಿವಕುಮಾರ,
ಕೃಷಿ ಅಧಿಕಾರಿ, ಗುರುಗುಂಟಾ
ಶರಣಬಸವ ಗಂಟೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.