ಸದೃಢ ಆರೋಗ್ಯಕ್ಕೆ ಮುಂಜಾಗ್ರತೆ ಅವಶ್ಯ: ಶ್ರೀ
Team Udayavani, Jan 28, 2022, 11:42 AM IST
ಆಳಂದ: ಸದೃಢ ಆರೋಗ್ಯಕ್ಕೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ಮುಗಳಖೋಡ, ಜಿಡಗಾ ನವಕಲ್ಯಾಣ ಮಠದ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಜಾಗೃತಿ ಮತ್ತು ನಿಯಮಾವಳಿ ಪಾಲನೆ, ಭಕ್ತರ ಆರೋಗ್ಯ ಸಂರಕ್ಷಣೆಗಾಗಿ ಉಚಿತ ಯೋಗಾಸನ ತರಬೇತಿ, ಆಯುರ್ವೇದ ಉಪಚಾರ ಶಿಬಿರದ ಸಿದ್ಧತಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕೊರೊನಾ ವೈರಸ್ ಸೇರಿದಂತೆ ಹವಾಮಾನದಲ್ಲಿ ಬದಲಾವಣೆಯಿಂದಾಗಿ ಸಾಮಾನ್ಯ ಕಾಯಿಲೆಯಿಂದಲೂ ಜನ ಬಳಲುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಆಹಾರ ಸೇವನೆ, ಮುಂಜಾಗ್ರತೆ, ಆರೋಗ್ಯ ದೃಷ್ಟಿಯಿಂದ ವೈದ್ಯರ ಸಲಹೆ ಪಡೆದು ಹೆಜ್ಜೆ ಇಡಬೇಕಿದೆ ಎಂದರು.
ಜಿಡಗಾ ಮಠದಲ್ಲಿ ಫೆ. 3ರಿಂದ 10ರ ವರೆಗೆ ಪ್ರತಿದಿನ ಬೆಳಗ್ಗೆ 6ರಿಂದ 8 ಗಂಟೆ ವರೆಗೆ ಪರಿಣಿತ ಯೋಗಪಟುಗಳಿಂದ ಉಚಿತ ಯೋಗದ ತರಬೇತಿ ಮತ್ತು ನುರಿತ ತಜ್ಞ ವೈದ್ಯರಿಂದ ಉಪಚಾರ, ಆಯುರ್ವೇದ ಔಷಧೋಪಚಾರ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಾವಯವ ಬೆಳೆ, ಹಣ್ಣು, ತರಕಾರಿ, ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಆಹಾರ ಧಾನ್ಯ ಉತ್ಪಾದನೆಗೆ ತಜ್ಞರು ಮಾಹಿತಿ ನೀಡುವರು. ಕೃಷಿ, ಹೈನುಗಾರಿಕೆ, ಉಪಕಸಬು ಉದ್ಯೋಗ, ಉದ್ಯಮೆಯಲ್ಲಿನ ಸಾಧಕರು ಆಗಮಿಸಿ ಅನುಭವ ಹಂಚಿಕೊಳ್ಳುವರು ಎಂದು ವಿವರಿಸಿದರು. ಶ್ರೀ ಮಠದ ಕಾರ್ಯದರ್ಶಿ ಬಸವರಾಜ ಚೋಪಾಟೆ, ಯಲ್ಲಾಲಿಂಗ ಸಲಗರೆ ಹಾಗೂ ಭಕ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.