![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 25, 2021, 6:00 PM IST
ಸೇಡಂ: ರಾಜ್ಯ ಹೆದ್ದಾರಿಗೆ ಹೊಸ ಲುಕ್ ಮತ್ತು ರಸ್ತೆ ಅಗಲ ಮಾಡುವ ದೃಷ್ಟಿಯಿಂದ ಕಮಲಾವತಿ ನದಿ ವರೆಗೆ ಕೈಗೊಂಡ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಹಳ್ಳ ಹಿಡಿದಿದೆ. ಪಟ್ಟಣದ ಚಿಂಚೋಳಿ ಕ್ರಾಸ್‌ನಿಂದ ಕಮಲಾವತಿ ನದಿ ವರೆಗೆ ಕೈಗೊಂಡ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಹದಗೆಟ್ಟಿದೆ.
ಬಹುತೇಕ ಕಡೆಗಳಲ್ಲಿ ದೊಡ್ಡ ತಗ್ಗು, ದಿನ್ನೆಗಳು ನಿರ್ಮಾಣವಾಗಿದ್ದು, ಪಾದದೆತ್ತರ ಆಳ ಹೊಂದಿವೆ. ಇದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತೆ ಆಗಿದೆ. ದ್ವಿಪಥ ರಸ್ತೆ ಇದಾಗಿದ್ದು, ಸುಸಜ್ಜಿತ ಚರಂಡಿ ಹಾಗೂ ವಿದ್ಯುತ್ ದೀಪಾಲಂಕಾರದ ಸವಲತ್ತು ಹೊಂದಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯವೋ? ಅಥವಾ ಲೊಕೋಪಯೋಗಿ ಇಲಾಖೆ ಅಧಿಕಾರಿಗಳ ನಿಷ್ಕಾಳಜಿಯೋ ಗೊತ್ತಿಲ್ಲ. ನಿರ್ಮಾಣ ಹಂತದಲ್ಲೇ ರಸ್ತೆ ನಿರ್ನಾಮವಾಗಿದೆ. ಚಿಂಚೋಳಿ ಕ್ರಾಸ್‌ನಿಂದ ಹಿಡಿದು, ಅಗ್ಗಿ ಬಸವೇಶ್ವರ ಕಾಲೋನಿ ವರೆಗಿನ ರಸ್ತೆಯಲ್ಲಿ ಈಗಾಗಲೇ ದೊಡ್ಡ ತಗ್ಗುಗಳು ನಿರ್ಮಾಣವಾಗಿವೆ.
ಮಳೆಗಾಲವಾಗಿದ್ದರಿಂದ ತಗ್ಗುಗಳಲ್ಲಿ ನೀರು ಶೇಖರಣೆಯಾಗಿ ಪ್ರಯಾಣಿಕರ ಪ್ರಾಣಕ್ಕೆ ಕಂಟಕವಾಗಿದೆ. ಇದನ್ನು ಕಂಡು ಸಾರ್ವಜನಿಕರು ಅಧಿಕಾರಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಘಾತ ನಿಶ್ಚಿತ ಎನ್ನುವಂತಾಗಿದೆ. ಇನ್ನೊಂದೆಡೆ ಕಾರು ಚಾಲಕರು ತಗ್ಗುಗಳಲ್ಲಿ ಸಿಲುಕಿ ಪಡಬಾರದ ಕಷ್ಟಪಡುತ್ತಿದ್ದಾರೆ. ಮತ್ತೂಂದೆಡೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ದಿನ ದೂಡುತ್ತಿದ್ದಾರೆ.
ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಎಸ್ಡಿಬಿಸಿ (ಮೇಲ್ಪದರದ ರಸ್ತೆ ಕಾಮಗಾರಿ) ಪೂರ್ಣವಾದ ಮೇಲೆ ರಸ್ತೆ ಸುಸಜ್ಜಿತವಾಗಿ ಸಾರ್ವಜನಿಕರಿಗೆ ಮುಕ್ತವಾಗಲಿದೆ. ತಗ್ಗು ದಿನ್ನೆಗಳ ಕುರಿತು ಪರಿಶೀಲಿಸುವೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವೆ. ಜನರಿಗೆ ತೊಂದರೆಯಾಗದಂತೆ ನಿಗಾ ವಹಿಸಲಾಗುವುದು.
ಚಂದ್ರಶೇಖರ ಮೋತಕಪಲ್ಲಿ, ಎಇಇ, ಲೊಕೋಪಯೋಗಿ ಇಲಾಖೆ
ರಸ್ತೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂದು ಈ ಹಿಂದೆ ಸೇಡಂನ ಹಲವಾರು ಜನರು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಆದರೂ ಗುಣಮಟ್ಟ ಸರಿಪಡಿಸುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಈಗ ಬಿದ್ದಿರುವ ತಗ್ಗುಗಳಿಂದ ಏನಾದರೂ ಅನಾಹುತವಾದರೆ ಯಾರು ಹೊಣೆ? ಜನರ ಜೀವದ ಜೊತೆ ಚಲ್ಲಾಟವಾಡುವ ಹಕ್ಕು ಯಾರಿಗೂ ಇಲ್ಲ.
ಸಂತೋಷ ತಳವಾರ, ಪುರಸಭೆ ಸದಸ್ಯ
ಶಿವಕುಮಾರ ಬಿ. ನಿಡಗುಂದಾ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.