ಕೊರೊನಾ ತೊಲಗಲು ರಾಸಣಗಿಗೆ ಪಾದಯಾತ್ರೆ
Team Udayavani, Jan 3, 2022, 10:23 AM IST
ಜೇವರ್ಗಿ: ಕೊರೊನಾ ಸಂಪೂರ್ಣ ತೊಲಗಲಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ವಿಶ್ವಮಧ್ವ ಮಹಾಪರಿಷತ್ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ರಾಸಣಗಿ ಬಲಭೀಮದೇವರ ಸನ್ನಿಧಾನಕ್ಕೆ ಪಾದಯಾತ್ರೆ ನಡೆಸಲಾಯಿತು.
ತಾಲೂಕಿನ ಕೂಡಿ ಕ್ರಾಸ್‌ದಿಂದ 10 ಕಿ.ಮೀ ದೂರದ ಸುಕ್ಷೇತ್ರ ರಾಸಣಗಿಯ ಬಲಭೀಮದೇವರ ದೇವಸ್ಥಾನದ ವರೆಗೆ ನಡೆದ ಪಾದಯಾತ್ರೆಯಲ್ಲಿ 350ಕ್ಕೂ ಹೆಚ್ಚು ಪಾದಯಾತ್ರಿಗಳು ಭಾಗವಹಿಸಿದ್ದರು. ದಾರಿಯುದ್ದಕ್ಕೂ ಭಜನೆ ಮಾಡುತ್ತಾ, ಬಲಭೀಮ ದೇವರಿಗೆ ಜಯಘೋಷ ಹಾಕುತ್ತಾ ಪಾದಯಾತ್ರೆ ಮುಂದುವರಿಸಿದರು.
ಹಿರಿಯ ವಿದ್ವಾಂಸ ಪಂ.ರಾಮಾಚಾರ್ಯ ಅವಧಾನಿ ಪಾದಯಾತ್ರೆ ಮಹತ್ವ ಹೇಳಿ ಭಗವಂತನಲ್ಲಿ ಭಕ್ತಿ ಮಾಡುವುದರಲ್ಲಿ ಪಾದಯಾತ್ರೆಯೂ ಒಂದಾಗಿದೆ. ಪಾದಯಾತ್ರೆ ಆರೋಗ್ಯಕ್ಕೂ ಒಳ್ಳೆಯದು. ಕಳೆದ ಎರಡು ವರ್ಷಗಳಿಂದ ಇಡೀ ದೇಶವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತೊಲಗಲಿ, ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಘವೇಂದ್ರಾಚಾರ್ಯ ಆಶ್ರೀತ ಪರಿವಾರದವರಿಂದ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದ ಅರ್ಚಕ ವೆಂಕಟೇಶ ಕುಲಕರ್ಣಿ ಅವರಿಂದ ಬಲಭೀಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಉತ್ತರಾದಿ ಮಠದ ಮಠಾ ಧಿಕಾರಿ ರಾಮಾಚಾರ್ಯ ಘಂಟಿ, ಪಂಡಿತರಾದ ಗೋಪಾಲಚಾರ್ಯ ಅಕಮಂಚಿ, ವಿಷ್ಣುದಾಸಾಚಾರ್ಯ ಖಜೂರಿ, ಭೀಮಸೇನಾಚಾರ್ಯ ಜೋಶಿ, ಪ್ರಸನ್ನಾಚಾರ್ಯ ಜೋಶಿ, ಲಕ್ಷ್ಮೀನಾರಾಯಣ ಆಚಾರ್ಯ ಕಂಬಲದಿನ್ನಿ, ಗಿರೀಶಾಚಾರ್ಯ ಕೊಪ್ಪರ, ಶ್ರೀನಿವಾಸಾಚಾರ್ಯ ಪದಕಿ, ಆನಂದ ತೀರ್ಥಾಚಾರ್ಯ, ವಿಶ್ವಮಧ್ವ ಮಹಾಪರಿಷತ್‌ನ ಅದ್ಯಕ್ಷ ರಾಮಾಚಾರ್ಯ ಮೋಘರೆ, ಕಾರ್ಯದರ್ಶಿ ರವಿ ಲಾತೂರಕರ್, ರಾಘವೇಂದ್ರಾಚಾರ್ಯ ಆಶ್ರೀತ, ಅನಂತ ಕಾಮೇಗಾಂವ, ಪುರುಷೋತ್ತಮ ಜೋಶಿ, ಶೇಷಗಿರಿ ಜೋಶಿ, ವಿಪ್ರ ಸಮಾಜದ ತಾಲೂಕು ಅದ್ಯಕ್ಷ ರಮೇಶಬಾಬು ವಕೀಲ, ಸಿ.ಎಂ.ಜೋಶಿ, ಪಾಂಡುರಂಗ ದೇಶಮುಖ, ವ್ಯಾಸರಾಜ ಸಂತೆಕೆಲ್ಲೂರ, ಅನೀಲ ಕಕ್ಕೇರಿ, ಸುನೀಲ ಕುಲಕರ್ಣಿ, ಅನೀಲ ಕುಲಕರ್ಣಿ, ರಘೋತ್ತಮ ಘಂಟಿ, ಲಕ್ಷ¾ಣಾಚಾರ್ಯ ಗಂಗಾವತಿ, ಭೀಮಸೇನರಾವ್ ಹರವಾಳ, ಪವನ ಆಶ್ರೀತ, ಸುರೇಶ ಕುಲಕರ್ಣಿ, ನರಸಿಂಗರಾವ, ರಾಘವೇಂದ್ರ ದೇಶಮುಖ, ಅಶೋಕ ಗೌರ್, ಶ್ಯಾಮಸುಂದರ ಕುಲಕರ್ಣಿ, ಶೋಬಾ ದೇಸಾಯಿ, ಜ್ಯೋತಿ ಲಾತೂರಕರ್, ಛಾಯಾ ಮುಳ್ಳೂರ, ಲಕ್ಷ್ಮೀ ಹರವಾಳ, ರಘುನಂದನ ಹರವಾಳಕರ್, ರಮೇಶ ಕುಲಕರ್ಣಿ ಹರವಾಳ, ನಾರಾಯಣರಾವ ಹರವಾಳಕರ್, ಅನೀಲಕುಮಾರ ಇನಾಮದಾರ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.