ಉಗ್ರಾಣಕ್ಕೆ ರಂಧ್ರ: ಕೇಸ್ ದಾಖಲು
Team Udayavani, Dec 8, 2021, 12:45 PM IST
ಚಿಂಚೋಳಿ: ತಾಲೂಕಿನ ಗಡಿಪ್ರದೇಶ ಕುಂಚಾವರಂ ಗ್ರಾಪಂ ಕಾರ್ಯಾಲಯಕ್ಕೆ ಹೊಂದಿಕೊಂಡಿರುವ ಉಗ್ರಾಣ ಕೋಣೆಗೆ ಯಂತ್ರದಿಂದ ದೊಡ್ಡ ರಂಧ್ರ ಕೊರೆದು ಹಾನಿ ಮಾಡಿದ ಆರೋಪದ ಮೇಲೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅ ಧಿಕಾರಿ, ಪಿಡಿಒ ಹಾಗೂ ವ್ಯಾಪಾರಿಯೊಬ್ಬರ ವಿರುದ್ಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಇಂದಿರಾ ಪಾಟೀಲ ತಿಳಿಸಿದ್ದಾರೆ.
ಕುಂಚಾವರಂನ ಸಂದೀಪ ಬಕ್ಕಪ್ಪ ಎನ್ನುವಾತ ತನ್ನ ಸಿಹಿತಿಂಡಿಯ ವ್ಯಾಪಾರ, ವಹಿವಾಟು ನಡೆಸಲು ಗ್ರಾಪಂ ಮಳಿಗೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದರು. ಆದರೆ ಬಾಡಿಗೆ ನೀಡಿದ ಅಂಗಡಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನೆಲಸಮವಾಗಿತ್ತು. ನಂತರ ಸಿಹಿತಿಂಡಿ ವ್ಯಾಪಾರಿ ಗ್ರಾಪಂ ಕಟ್ಟಡದಲ್ಲಿಯೇ ಮಳಿಗೆ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಗ್ರಾಪಂ ಸದಸ್ಯರು ಸಭೆ ನಡೆಸಿ, ಸಿಹಿತಿಂಡಿ ವ್ಯಾಪಾರಿಗೆ ಮಳಿಗೆ ನೀಡಬಾರದೆಂದು ವಿರೋಧ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿದ್ದರು. ಆದರೂ ಅಂಗಡಿ ಆರಂಭಿಸುವ ಸಲುವಾಗಿ ಉಗ್ರಾಣ ಕೋಣೆಗೆ ಯಂತ್ರದ ಸಹಾಯದಿಂದ ರಂಧ್ರ ಕೊರೆಯಲಾಗಿತ್ತು. ಇದನ್ನು ಪ್ರಶ್ನಿಸಿದವರಿಗೆ ಜೀವ ಭಯ ಹಾಕಿದ್ದಾರೆ ಎಂದು ಪೋಚಾವರಂ ಗ್ರಾಮದ ಅಶೋಕ ಮಸಾನಿ ಕುಂಚಾವರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಕುಂಚಾವರಂ ಪಿಎಸ್‌ಐ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.