ರುದ್ರಗೌಡ ಆರೋಪ ಮುಕ್ತರಾಗಲಿ
Team Udayavani, Apr 24, 2022, 11:01 AM IST
ಅಫಜಲಪುರ: ಸಮಾಜ ಸೇವಕ ರುದ್ರಗೌಡ ಪಾಟೀಲ ವಿರುದ್ಧದ ಆರೋಪಗಳೆಲ್ಲ ಸುಳ್ಳಾಗಿ ಪುನಃ ಜನಸೇವೆ ಮಾಡಲಿದ್ದಾರೆ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಸಮಾಜ ಸೇವಕ ಆರ್.ಡಿ ಪಾಟೀಲ ಏರ್ಪಡಿಸಿದ್ದ 57 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿ ರುದ್ರಗೌಡ ಪಾಟೀಲರೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಅವರು ಜನಸೇವೆಯನ್ನು ಜನಾರ್ಧನ ಸೇವೆ ಎನ್ನುವ ರೀತಿ ಮಾಡಿಕೊಂಡು ಬಂದಿದ್ದಾರೆ. ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಬಡವರ ಮಕ್ಕಳಿಗೆ ಭರವಸೆಯಾಗಿ ನಿಂತಿದ್ದಾರೆ. ಈ ಕಾರ್ಯಕ್ಕೆ ಎಲ್ಲ ಸಮುದಾಯದವರು ಸಹಕಾರ ನೀಡಿದ್ದಾರೆ. ಆದಷ್ಟು ಬೇಗನೆ ಅವರು ಆರೋಪ ಮುಕ್ತರಾಗಿ ಬರಲಿ ಎಂದು ಹಾರೈಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ಸಕಲ ಧರ್ಮದವರೂ ಒಂದೇ ವೇದಿಕೆಯಲ್ಲಿ ಇರುವುದರಿಂದ ಸಮಾನತೆ ಹೆಚ್ಚಲು ಕಾರಣವಾಗಿದೆ. ಅಲ್ಲದೇ ಬುದ್ದ, ಬಸವಣ್ಣನವರ ಆದರ್ಶಗಳು, ತತ್ವಗಳು ಕೇವಲ ಬಾಯಿ ಮಾತಾಗದೇ ಆ ಮಹಾತ್ಮರ ತತ್ವ-ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಆರ್.ಡಿ. ಪಾಟೀಲ ಸಹೋದರ ಶಿವಕುಮಾರ ಪಾಟೀಲ ಮಾತನಾಡಿ, ನಮಗೀಗ ಗ್ರಹಣ ಕಾಲ ಎದುರಾಗಿದೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ಹೀಗಾಗಿ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದು ಬರುತ್ತೇವೆ. ಯಾವುದೇ ಸಂಕಷ್ಟ ಎದುರಾದರೂ ತಮ್ಮ ಕುಟುಂಬದ ವತಿಯಿಂದ ಸಮಾಜಸೇವೆ ಮುಂದುವರಿಸುತ್ತೇವೆ ಎಂದರು.
ತಮ್ಮ ಸಹೋದರ ಆರ್.ಡಿ. ಪಾಟೀಲ ಬಡವರು ಸಾಲ ಮಾಡಿ ಮಕ್ಕಳ ಮದುವೆ ಮಾಡಿಸುತ್ತಾರೆ. ಅವರ ಆರ್ಥಿಕ ಹೊರೆ ಕಡಿಮೆ ಮಾಡಲು ಸಾಮೂಹಿಕ ವಿವಾಹ ಏರ್ಪಸುವಂತೆ ತಿಳಿಸಿದ್ದರು. ಅವರ ಕನಸಿನಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಮುಖಂಡರಾದ ಶಂಕು ಮ್ಯಾಕೇರಿ, ಲಚ್ಚಪ್ಪ ಜಮಾದಾರ ಮಾತನಾಡಿ, ಕೋವಿಡ್‌ನಿಂದ ಕಂಗೆಟ್ಟಿದ್ದ ಜನರಿಗೆ ಇಂತಹ ಕಾರ್ಯಕ್ರಮಗಳು ವರದಾನವಾಗಿವೆ. ಆರ್.ಡಿ. ಪಾಟೀಲ ಕಾರ್ಯ ಶ್ಲಾಘನೀಯ ಎಂದರು.
ಮಾಶಾಳದ ಶ್ರೀ ಕೇದಾರ ಶಿವಾಚಾರ್ಯರು ಮಾತನಾಡಿ, ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡ ಆರ್.ಡಿ ಪಾಟೀಲ ಪುಣ್ಯದ ಕೆಲಸ ಮಾಡಿದ್ದಾರೆ. ಅವರಿಗೆ ಎದುರಾಗಿರುವ ಕಷ್ಟಗಳು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾದವರ ತಾಳಿಯ ಶಕ್ತಿಯಿಂದ ದೂರವಾಗಲಿದೆ ಎಂದು ಶುಭ ಹಾರೈಸಿದರು.
ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾ ಚಾರ್ಯರು ಮಾತನಾಡಿ, ಅನೇಕ ಜನ ಶ್ರೀಮಂತರಿದ್ದಾರೆ. ಆದರೆ ಇಂತಹ ಕಾರ್ಯ ಕ್ರಮ ಮಾಡಿಲ್ಲ. ನಿಜಕ್ಕೂ ರುದ್ರಗೌಡ ಪಾಟೀಲ ಕಾರ್ಯ ಶ್ಲಾಘನೀಯ ಎಂದರು.
ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಮದುವೆ ರೀತಿಯಲ್ಲೇ ರುದ್ರಗೌಡ ಪಾಟೀಲರು ಸಾಮೂಹಿಕ ವಿವಾಹ ಏರ್ಪಡಿಸಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಆದರೆ ಈಗ ಅವರ ಮೇಲೆ ಕಷ್ಟದ ದಿನಗಳು ಎದುರಾಗಿವೆ. ಶೀಘ್ರವೇ ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ ಬರಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಬಡದಾಳದ ಶ್ರೀ ಡಾ| ಅಭಿನವ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ಸಮಾಜದಿಂದ ನಾವು ಪಡೆದುಕೊಂಡಿದ್ದನ್ನು ಮರಳಿ ಸಮಾಜಕ್ಕೆ ನೀಡಬೇಕು. ಈ ಕೆಲಸವನ್ನು ಆರ್.ಡಿ ಪಾಟೀಲ ಮಾಡಿದ್ದಾರೆ ಎಂದರು.
ಆತನೂರ, ಹಿಂಚಗೇರಾ, ಚಿನ್ಮಯಗಿರಿ, ಅಳ್ಳಗಿ, ಮಲ್ಲಾಬಾದ, ಉಡಚಣ, ಚಿಂಚೋಳಿ, ಗೋಲಸಾರ ಮಠಗಳ ಶ್ರೀಗಳು, ಆರ್.ಡಿ. ಪಾಟೀಲ ತಾಯಿ ಭಾರತೀಬಾಯಿ ದೇವಿಂದ್ರಪ್ಪ ಪಾಟೀಲ, ಪತ್ನಿ ಶೋಭಾ ಪಾಟೀಲ, ಮುಖಂಡರಾದ ಚಿದಾನಂದ ಮಠ, ಮಕ್ನೂಲ್ ಪಟೇಲ್, ಪಪ್ಪು ಪಟೇಲ್, ಜೆ.ಎಂ ಕೊರಬು, ಶರಣಪ್ಪ ಕಣ್ಮೆàಶ್ವರ, ದಯಾನಂದ ದೊಡ್ಮನಿ, ಮತೀನ್ ಪಟೇಲ್, ಸಿದ್ಧಾರ್ಥ ಬಸರಿಗಿಡ, ಚಂದು ಕರ್ಜಗಿ, ಚಂದು ದೇಸಾಯಿ, ಶ್ರೀಶೈಲ ಮ್ಯಾಳೇಶಿ, ರಮೇಶ ಬಾಕೆ, ತುಕಾರಾಮಗೌಡ ಪಾಟೀಲ, ಶರಣು ಕುಂಬಾರ, ಬಸವರಾಜ ಪಾಟೀಲ, ಮಹಾರಾಯ ಅಗಸಿ, ಮಹಾಂತೇಶ ಬಡಿಗೇರ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.