ಐದು ಹಳ್ಳಿಗಳಲ್ಲಿ ಕೃಷಿ ಸಂಚಯಿ ಅನುಷ್ಠಾನ
Team Udayavani, Apr 10, 2022, 1:17 PM IST
ಆಳಂದ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವೊಲಿಸಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಮೂರು ಗಡಿ ಭಾಗದ ಐದು ಹಳ್ಳಿಗಳ ಜನರಿಗೆ ಜಲಾನಯನ ಸೇರಿದಂತೆ ಆರ್ಥಿಕ ಉತ್ತೇಜನಕಾರಿಗೆ ಪ್ರಧಾನಮಂತ್ರಿ ಕೃಷಿ ಸಂಚಯಿ ಯೋಜನೆ ಮಂಜೂರಾತಿಗೊಳಿಸಿ ಅನುಷ್ಠಾನಕ್ಕೆ ಮುಂದಾಗಿದ್ದು, ಅಧಿಕಾರಿಗಳು ಮತ್ತು ಸಾರ್ವಜನಿಕರು ಸೇರಿ ರೈತರಿಗೆ ಯೋಜನೆ ಲಾಭ ತಲುಪಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ತಾಲೂಕಿನ ಗಡಿ ಗ್ರಾಮವಾದ ತಡೋಳಾ ಗ್ರಾಮದಲ್ಲಿ ಶನಿವಾರ ತಡೋಳಾ ಗ್ರಾಪಂನ ಶೇ. 100ರಷ್ಟು ಖಜೂರಿ ಶೇ. 10 ಮತ್ತು ನಿರಗುಡಿ ಗ್ರಾಪಂಗಳಿಗೆ ಸಂಬಂಧಿಸಿದಂತೆ ಶೇ. 25ರಷ್ಟು ಜಲಾನಯನ ಕಾಮಗಾರಿಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಯಿ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನೆಗೆ ಪ್ರಧಾನಮಂತ್ರಿಗಳು ಮತ್ತು ಮುಖ್ಯ ಮಂತ್ರಿಗಳು ಸೇರಿ ಸುಮಾರು 11 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಮೂರುವರ್ಷದ ಯೋಜನೆಯನ್ನು ಎರಡು ವರ್ಷದಲ್ಲಿ ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು ಎಂದರು.
ಹೊಲದ ಮಣ್ಣು ಮಳೆ ನೀರಿಗೆ ಹರಿದು ಹೋಗದಂತೆ ಮತ್ತು ಮಳೆ ಬಂದು ನೀರು ಹರಿಯದೇ ಇಂಗಿಸುವ ಉದ್ದೇಶದ ಜೊತೆಗೆ ರೈತ ಮಹಿಳಾ ಸಂಘದ ಕಾರ್ಯಚಟುವಟಿಕೆಗೆ ಪ್ರೋತ್ಸಾಹಧನ, ಹೊಲಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬದು ನಿರ್ಮಾಣ ಚೆಕ್ ಡ್ಯಾಂಗಳಂತ ಕಾಮಗಾರಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸಂಘವನ್ನು ರಚಿಸಿ ಗ್ರಾಪಂ ಅಧ್ಯಕ್ಷರೇ ಇದರ ಅಧ್ಯಕ್ಷರಾಗಿರುತ್ತಾರೆ. ಎಲ್ಲರೂ ಕೂಡಿಕೊಂಡು ಯೋಜನೆ ಮಾದರಿಗೊಳಿಸಬೇಕು ಎಂದು ಹೇಳಿದರು.
ಗ್ರಾಪಂ ಖಜೂರಿ, ತಡೋಳಾ ಮತ್ತು ನಿರಗುಡಿ ಪಂಚಾಯಿತಿ ಆಯ್ಕೆ ಮಾಡಿದ್ದು, ತಡೋಳಾದ ಎಲ್ಲ ರೈತರಿಗೆ ಅನುಕೂಲವಾದರೆ ಖಜೂರಿ ಮತ್ತು ನಿರಗುಡಿ ವ್ಯಾಪ್ತಿಯ ಮಟಕಿ ಗ್ರಾಮದ ಭಾಗಶಃ ಹೊಲಗಳಿಗೆ ನೆರವಾಗಲಿದೆ. ಈ ಕಾಮಗಾರಿ ಅಚ್ಚುಕಟ್ಟಾಗಿ ನಡೆದರೆ ಈ ಭಾಗದಲ್ಲೇ ಮಾದರಿ ಜಲಾನಯನ ಕಾಮಗಾರಿಯಾಗಲಿದೆ ಎಂದರು.
ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗರು ಮಾತನಾಡಿ, ಜಿಲ್ಲೆಯ ಆಳಂದ ಮತ್ತು ಜೇವರ್ಗಿ ತಾಲೂಕಿಗೆ ಮಾತ್ರ ಕೃಷಿ ಸಂಚಯಿ ಯೋಜನೆ ಮಂಜೂರಾಗಿದೆ. ಆಳಂದಕ್ಕೆ ಯೋಜನೆ ತರುವಲ್ಲಿ ಶಾಸಕರು ಅನೇಕ ಬಾರಿ ಸರ್ಕಾರದ ಮಟ್ಟದಲ್ಲಿ ಸಚಿವರ ಗಮನಕ್ಕೆ ತಂದು ಮಂಜೂರಾತಿಗೆ ಶ್ರಮಿಸಿದ್ದಾರೆ. ಇದು ಒಳ್ಳೆಯ ಕೆಲಸವಾಗಿದ್ದು, ಶೇ. 60ರಷ್ಟು ಜಲಾನಯನ ಕೆಲಸ ಮಾಡಿದರೆ ಇನ್ನೂ ಶೇ. 40ರಷ್ಟು ಆದಾಯ ಹೆಚ್ಚುತ್ತದೆ ಎಂದರು.
ಆಯ್ಕೆಯಾದ ಮೂರು ಗ್ರಾಪಂನ ಐದು ಹಳ್ಳಿಗೆ 5.50 ಸಾವಿರ ಹೆಕ್ಟೇರ್ ಗಾಗಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆಗಾಗಿ ವೈಜ್ಞಾನಿಕವಾಗಿ ಕಾಮಗಾರಿ ಆಗಲಿದೆ. ಇದರಲ್ಲಿ ಕಾಲವೆ, ಗೋಕಟ್ಟೆ, ಚೆಕ್ ಡ್ಯಾಂ ಮತ್ತು ಕೃಷಿ ಹೊಂಡ ನಿರ್ಮಾಣ ನಡೆಯಲಿದೆ. ಮೂರು ವರ್ಷದ ಯೋಜನೆಯಾಗಿದೆ ಎಂದರು.
ಜಿಲ್ಲೆಯ 92 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ನೀರಾವರಿ ಇದೆ. ಉಳಿದ 9.50 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಬೇಸಾಯ, ಮಳೆ ಬಂದರೆ ಮಾತ್ರ ಬೇಸಾಯವಿದೆ. ಇಂಥ ಪರಿಸ್ಥಿತಿ ಜಿಲ್ಲೆಯಲಿದೆ. ಬೇರೆ ಜಿಲ್ಲೆಗಳು ಗಮನಿಸಿದರೆ ಶೇ. 50ರಷ್ಟು ನೀರಾವರಿ ಇದೆ. ಬೆಳಗಾವಿಗೆ ಹೋದರೆ ಖರೀಪ್ ರಬ್ಬಿ ಬೇಸಿಗೆಯಲ್ಲೂ ಬೆಳೆ ತೆಗೆಯುತ್ತಾರೆ. ಅಲ್ಲಿ ಕಾಲುವೆಗಳಿರುವುದರಿಂದ ಇದು ಸಾಧ್ಯವಾಗುತ್ತಿದೆ. ಇಲ್ಲಿಯೂ ಆ ಮಾದರಿ ಅನುಸರಿಸಲು ನೆಲ, ಜಲದ ಕಾಮಗಾರಿ ಅರಣ್ಯವೃದ್ಧಿ, ಹೈನುಗಾರಿಕೆ, ರೈತ ಮಹಿಳಾ ಸಂಘಗಳ ಆರ್ಥಿಕ ವೃದ್ಧಿಯಂತ ಕಾರ್ಯಗಳು ಯೋಜನೆಯಲ್ಲಿ ಒಳಗೊಂಡಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.