ಕುಸರಂಪಳ್ಳಿ-ಕೊಳ್ಳುರ ರಸ್ತೆ ಅಭಿವೃದ್ಧಿಪಡಿಸಲು ಆಗ್ರಹ
Team Udayavani, Apr 5, 2022, 12:37 PM IST
ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಿಂದ ಹಾದು ಹೋಗುವ ಕೊಳ್ಳುರ- ಕುಸರಂಪಳ್ಳಿ ಗ್ರಾಮಗಳ ಮಧ್ಯ ರಸ್ತೆ ತುಂಬಾ ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ದಿನನಿತ್ಯ ಸಂಚರಿಸುವ ಸರಕು ತುಂಬಿದ ಲಾರಿಗಳು ಅಪಘಾತ ವಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಬಿಜೆಪಿ ಗೋಪಾಲರೆಡ್ಡಿ ಕೊಳ್ಳುರ ದೂರಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೊಳ್ಳುರ ಮತ್ತು ಕುಸರಂಪಳ್ಳಿ ಗ್ರಾಮಗಳ ಮಧ್ಯೆ ಅರಣ್ಯಪ್ರದೇಶದಿಂದ ಕೂಡಿದೆ. ರಸ್ತೆ ಸುಧಾರಣೆ ಮತ್ತು ಡಾಂಬರೀಕರಣಕ್ಕಾಗಿ ಸರಕಾರ ಕೆಕೆಆರ್ ಡಿಬಿ ವತಿಯಿಂದ ಲೋಕೋಪಯೋಗಿ ಇಲಾಖೆಗೆ 5 ಕೋಟಿ ರೂ.ಅನುದಾನ ನೀಡಿದೆ. ಆದರೆ ರಸ್ತೆ ಕಾಮಗಾರಿಗೆ ತಾಲೂಕು ವಲಯ ಅರಣ್ಯ ಇಲಾಖೆ ಅನುಮತಿ ನೀಡದೇ ಇರುವುದರಿಂದ ರಸ್ತೆ ಸುಧಾರಣೆ ಕಾಮಗಾರಿ ಕಳೆದ 4 ವರ್ಷಗಳಿಂದ ನಿಂತು ಹೋಗಿದೆ.
ಇದೇ ರಸ್ತೆ ಮಾರ್ಗದಿಂದ ಬೀದರ, ಜಹಿರಾಬಾದ, ಸಂಗಾರೆಡ್ಡಿ, ಹೈದ್ರಾಬಾದ್ ನಗರ ಪ್ರದೇಶಗಳಿಗೆ ಸರಕು ತುಂಬಿದ ಲಾರಿಗಳು ಸಂಚರಿಸುತ್ತಿವೆ. ಆದರೆ ರಸ್ತೆ ತುಂಬಾ ಹದಗೆಟ್ಟಿರುವುದರಿಂದ ಸರಕು ತುಂಬಿದ ಲಾರಿಗಳು, ಸಣ್ಣಪುಟ್ಟ ವಾಹನಗಳು ಅಪಘಾತ ಸಂಭವಿಸುತ್ತಿವೆ. ಅನೇಕ ಚಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ನನೆಗುದಿಗೆ ಬಿದ್ದಿರುವ ರಸ್ತೆಯ ಬಗ್ಗೆ ಶಾಸಕರು ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಅರಣ್ಯಪ್ರದೇಶ ತಿರುವಿನಲ್ಲಿ ರಸ್ತೆ ಹದಗೆಟ್ಟಿರುವುದನ್ನು ದುರಸ್ತಿಗೊಳಿಸಬೇಕು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಬಿಜೆಪಿ ಮುಖಂಡ ಗೋಪಾಲರೆಡ್ಡಿ ಕೊಳ್ಳುರ ಶಾಸಕರಿಗೆ ಅಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.