ರೈತರ ಹಿತ ಕಾಯಲು ಸರ್ಕಾರ ಬದ್ಧ
ಬಿತ್ತನೆ ಬೀಜ-ರಸಗೊಬ್ಬರ ತಲುಪಿಸಲು ಸಿದ್ಧತೆ ಹಾಪ್‌ಕಾಮ್ಸ್ ನಲ್ಲಿ ಹಣ್ಣು-ತರಕಾರಿ ಮಾರಾಟ
Team Udayavani, Apr 7, 2020, 12:05 PM IST
ಇಂಡಿ: ಕೊರೊನಾ ನಿಯಂತ್ರಣ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಮಾತನಾಡಿದರು.
ಇಂಡಿ: ಕೊರೊನಾ ಪರಿಣಾಮ ಲಾಕ್‌ಡೌನ್ ಹಿನ್ನೆಲೆ ರೈತರು ಹಾಗೂ ಸಾರ್ವಜನಿಕರು ಭಯಪಡಬೇಕಿಲ್ಲ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಔಷ ಧಿಗಳನ್ನು ಸಕಾಲಕ್ಕೆ ತಲುಪಿಸುವ ವ್ಯವಸ್ಥೆ ಸರಕಾರ ಈಗಾಗಲೇ ಮಾಡಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಭರವಸೆ ನೀಡಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕಲ್ಲಂಗಡಿ, ಟೋಮೆಟೋ, ಕರಬೂಜ ಸೇರಿದಂತೆ ವಿವಿಧ ಹಣ್ಣುಗಳ ಮಾರಾಟವಿಲ್ಲದೇ ರೈತರು ತೊಂದರೆ ಅನುಭವಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಹಾಪ್‌ಕಾಂ ಮಳಿಗೆಗಳನ್ನು ತೆರೆದು ರೈತರು ಬೆಳೆದ ಹಣ್ಣು, ತರಕಾರಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 200 ಲಾರಿಗಳನ್ನು ಪಡೆಯಲಾಗಿದೆ. ಈ ಲಾರಿಗಳು ರೈತರ ಬಳಿಗೆ ಬಂದು ಬೆಳೆಗಳನ್ನು ರೈತರಿಂದ ಪಡೆದು ಸಾಗಾಟ ಮಾಡುತ್ತವೆ. ಸರಕಾರ ಮಾಡಿರುವ ಇಂಥ ವ್ಯವಸ್ಥೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಆರೋಗ್ಯಾ ಧಿಕಾರಿ ಡಾ| ಅರ್ಚನಾ ಕುಲಕರ್ಣಿ ಮಾತನಾಡಿ, ನಮ್ಮ ರಾಜ್ಯದಿಂದ ನೆರೆಯ ರಾಜ್ಯಗಳಿಗೆ ದುಡಿಯಲು ಗುಳೆ ಹೋದ
ಸುಮಾರು 7 ಸಾವಿರ ಜನ ಕೂಲಿ ಕಾರ್ಮಿಕರು ಮರಳಿ ತಾಲೂಕಿಗೆ ಬಂದಿದ್ದಾರೆ. ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಅವರವರ ಮನೆಗಳಲ್ಲಿಯೇ
ಹೋಮ್ ಕ್ವಾರೆಂಟೈನ್ ಮಾಡಲಾಗಿದೆ. ಅವರೆಲ್ಲ ಈಗ ಆರೋಗ್ಯವಂತರಾಗಿದ್ದಾರೆ. ಆದರೂ ದಿನಕ್ಕೆರಡು ಬಾರಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಬೇರೆ ದೇಶಗಳಿಂದ 27 ಜನ ಬಂದಿದ್ದು, ಹೋಂ ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು.ಸದ್ಯ ಅವರ ನಿಗಾ ಅವಧಿ ಮುಗಿದಿದ್ದು, ಎಲ್ಲರೂ ಆರೋಗ್ಯದಿಂದ
ಇದ್ದಾರೆ ಎಂದರು.
ಕೊರೊನಾ ರೋಗಿಗಳಿಗಾಗಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ 10 ಹಾಸಿಗೆಗಳುಳ್ಳ ಒಂದು ಕೊಠಡಿ ಸಿದ್ಧಗೊಂಡಿದೆ. ಅವಶ್ಯಕತೆ ಬಿದ್ದರೆ ಪಟ್ಟಣದಲ್ಲಿನ
ಸ್ಪಂದನಾ ಆಸ್ಪತ್ರೆಯನ್ನೂ ಬಳಸಲಾಗುವುದು ಎಂದರು. ಇನ್ನು ಪಿಪಿಈ ಕಿಟ್, 2 ವೆಂಟಿಲೇಟರ್, ಮಾಸ್ಕ್ಗಳು ಹಾಗೂ ಇನ್ನೂ ಒಂದು ಆ್ಯಂಬುಲೆನ್ಸ್ ಅವಶ್ಯಕತೆಯಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ತಾಪಂ ಇಒ ಡಾ| ವಿಜಯಕುಮಾರ ಆಜೂರ ಮಾತನಾಡಿ, ತಾಲೂಕಿನಲ್ಲಿ ಕೊರೋನಾ ಸೋಂಕಿತರ ಪತ್ತೆಗಾಗಿ 14 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ.
ಹೊರಗಿನಿಂದ ಬರುವವರನ್ನು ಅಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುವುದು ಎಂದರು. ಡಿವೈಎಸ್‌ಪಿ ಎಂ.ಬಿ.ಸಂಕದ ಮಾತನಾಡಿ, ಗ್ರಾಮಗಳಿಗೆ ಹೊಸಬರು ಬಂದರೆ ತಕ್ಷಣವೇ ಪೊಲೀಸ್ ಸಿಬ್ಬಂದಿಗೆ ಜನರು ಕರೆ ಮಾಡುತ್ತಾರೆ. ಅಂಥವರನ್ನು ಕರೆತಂದು ತಪಾಸಣೆ ಮಾಡಿ ಹೋಂ ಕ್ವಾರೆಂಟೈನ್ ಮಾಡಲಾಗುತ್ತಿದೆ ಎಂದರು.
ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ ಮಾತನಾಡಿ, ವಿನಾಕಾರಣ ಜನರು ಹೊರ ಬರಬಾರದು. ಅನಗತ್ಯವಿದ್ದವರಿಗೆ ಪೆಟ್ರೋಲ್ ಹಾಕದಿರಲು ಸೂಚನೆ
ನೀಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.