ರಾಜ್ಯದ 70 ಲಕ್ಷ ಈಡಿಗ ಜನಾಂಗಕ್ಕೆ ಅನ್ಯಾಯ
Team Udayavani, May 9, 2022, 2:26 PM IST
ವಾಡಿ: ಈಚಲು ಮರದಿಂದ ನೀರಾ ಇಳಿಸುವ ಈಡಿಗರ ಕುಲಕಸುಬು ಕಸಿದುಕೊಂಡ ಸರ್ಕಾರಗಳು ತಳಸಮುದಾಯವನ್ನು ಬೀದಿಪಾಲು ಮಾಡಿವೆ ಎಂದು ಈಡಿಗ ಸಮಾಜದ ಪೂಜ್ಯ ಶ್ರೀ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಶ್ರೀಗಳು ರವಿವಾರ ಸಂಜೆ ಪಟ್ಟಣ ಪ್ರವೇಶ ಪಡೆಯುವ ಮೂಲಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದರು.
ಈಡಿಗ ಸಮುದಾಯ ಯಾರೊಬ್ಬರ ಮನೆಯ ಮುಂದೆ ನಿಂತು ಬೇಡುವ ಕುಲವಲ್ಲ. ದಾನಧರ್ಮ ಮಾಡಿದ ಮಾನವೀಯ ಸಮಾಜ. ಆದರೆ ನಾವಿಂದು ನಮ್ಮ ಕುಲಕಸುಬು ಮತ್ತೆ ವಾಪಸ್ ಕೊಡಿ ಎಂದು ಬೀದಿಗಿಳಿದು ಕೇಳುವ ಕೆಟ್ಟ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದಿಟ್ಟಿದೆ. ಈಡಿಗರು ಈಗ ಪುನಃ ಸಂಘಟಿತರಾಗುವ ಮೂಲಕ ಜಾಗೃತರಾಗಿದ್ದಾರೆ. ಸೇಂದಿ ಇಳಿಸಲು ಪರವಾನಗಿ ಕೊಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿ ಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಸುನೀಲ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಹುಸನಯ್ಯ ಗುತ್ತೇದಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಶೀನಾಥ ಗುತ್ತೇದಾರ. ವಿನೋದ ಗುತ್ತೇದಾರ, ಶಂಕರ ಗುತ್ತೇದಾರ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ, ಸತೀಶ ಗುತ್ತೇದಾರ, ಹಣಮಯ್ಯ ಗುತ್ತೇದಾರ, ಕಿಶನ್ ಗುತ್ತೇದಾರ, ಸಂಗಯ್ಯ ಗುತ್ತೇದಾರ, ಮಲ್ಲಯ್ಯ ಗುತ್ತೇದಾರ, ಸಂತೋಷ ಗುತ್ತೇದಾರ, ಅಶೋಕ ಗುತ್ತೇದಾರ, ಬಾಬು ಗುತ್ತೇದಾರ, ದೀಪಕ್ ಗುತ್ತೇದಾರ, ರಾಜು ಮುಕ್ಕಣ್ಣ, ಶಾಂತಪ್ಪ ಶೆಳ್ಳಗಿ, ದೇವಿಂದ್ರ ಕರದಳ್ಳಿ, ಸೂರ್ಯಕಾಂತ ರದ್ದೇವಾಡಿ, ಶರಣು ನಾಟೀಕಾರ, ಶ್ರವಣಕುಮಾರ ಮೊಸಲಗಿ, ಅಶ್ರಫ್ ಖಾನ್, ಪೃಥ್ವಿರಾಜ ಸೂರ್ಯವಂಶಿ, ಬಸವರಾಜ ಕೇಶ್ವಾರ, ನಾಗೇಂದ್ರ ಜೈಗಂಗಾ, ರವಿ ಕಾರಬಾರಿ ಪಾಲ್ಗೊಂಡಿದ್ದರು.
ಖರ್ಗೆ ಸೋಲಿಸಲು ಮಾಲೀಕಯ್ಯ ಬಳಕೆ
ಕಳೆದ ಲೋಕಸಭೆ ಚುನವಣೆಯಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಈಡಿಗ ಸಮುದಾಯದ ಮಾಲೀಕಯ್ಯ ಗುತ್ತೇದಾರ ಅವರನ್ನು ಬಳಸಿಕೊಂಡ ಬಿಜೆಪಿ ನಾಯಕರು, ಚುನಾವಣೆ ನಂತರ ಅವರಿಗೆ ಯಾವುದೇ ಸ್ಥಾನಮಾನ ಕೊಡದೇ ಮೂಲೆಗುಂಪು ಮಾಡಿದರು. ಬದಲಿಗೆ ವಿಧಾನಸಭೆ ಚುನಾವಣೆಯಲ್ಲೂ ಮಾಲೀಕಯ್ಯ ಅವರನ್ನು ಸೋಲಿಸಿದರು. ಈಗ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ. ಅಂದರೆ ನಮ್ಮ ಕುಲದ ರಾಜಕೀಯ ನಾಯಕನೊಬ್ಬನನ್ನು ಬಳಸಿ ಬೀಸಾಡಿದ್ದಾರೆ. ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ನಮ್ಮನ್ನು ತುಳಿಯಲಾಗಿದೆ.
ಮರಾಠಾ ಸಮುದಾಯಕ್ಕೆ ನಿಗಮ ನೀಡಲಾಗಿದೆ. ಬ್ರಾಹ್ಮಣರು ಯಾವತ್ತೂ ಬೀದಿಗಿಳಿದು ಕೇಳಿರಲಿಲ್ಲ. ಆದರೂ ಅವರಿಗೆ ಪ್ರತ್ಯೇಕ ನಿಗಮ ಕೊಡಲಾಗಿದೆ. ಅವರಿಗೆ ಕೊಡಬಾರದು ಎಂಬುದು ನಮ್ಮ ವಾದವಲ್ಲ. ಆದರೆ ಈಡಿಗ ಸಮುದಾಯಕ್ಕೂ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ. ಬಿಜೆಪಿಯವರಿಗೆ ಇನ್ನೂ ಒಂದು ವರ್ಷ ಕಾಲಾವಕಾಶವಿದೆ. ಎಷ್ಟು ಜನ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತೀರೋ ಗೊತ್ತಿಲ್ಲ. ನಮ್ಮ ಸಮುದಾಯದ ಉಪಜೀವನ ಮರಳಿ ಕೊಡಿ. ಇಲ್ಲದಿದ್ದರೆ ಬರುವ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಪೂಜ್ಯ ಪ್ರಣವಾನಂದ ಶ್ರೀಗಳು ಎಚ್ಚರಿಕೆ ನೀಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.