ಹೊಸ ರೈಲ್ವೆ ನಿಲ್ದಾಣ ಕಾಮಗಾರಿಗೆ ಒತ್ತಾಯ
Team Udayavani, May 17, 2022, 2:14 PM IST
ಅಫಜಲಪುರ: ತಾಲೂಕಿನ ನೀಲೂರ ಗ್ರಾಮಕ್ಕೆ ಹೊಸ ರೈಲು ನಿಲ್ದಾಣ ನಿರ್ಮಿಸಲು ಒತ್ತಾಯಿಸಿ ರೈಲ್ವೆ ಬೋರ್ಡ್ ನವದೆಹಲಿಯ ಪಿಎಸ್‌ಸಿ ಕಮಿಟಿ ಅಧ್ಯಕ್ಷ ರಮೇಶಚಂದ್ರ ರತನ್ ಅವರಿಗೆ ಗ್ರಾಮದ ಸುಧಾರಣಾ ಸಮಿತಿ ಪ್ರಮುಖರು ಗಾಣಗಾಪುರ ರೈಲ್ವೆ ನಿಲ್ದಾಣದಲ್ಲಿ ಮನವಿ ಪತ್ರ ಸಲ್ಲಿಸಿದರು.
ನೀಲೂರ ಗ್ರಾಮ ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಯಾತ್ರಾ ಸ್ಥಳವಾಗಿದೆ. 12ನೇ ಶತಮಾನದ ಶಿವಶರಣೆ ನಿಂಬೆಕ್ಕ ದೇವಿ ಜನ್ಮಸ್ಥಾನ ಆಗಿರುವುದರಿಂದ ಕಳೆದ ಮಾರ್ಚ್ 2022ರ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ನಿಂಬೆಕ್ಕ ದೇವಸ್ಥಾನವನ್ನು ಉನ್ನತೀಕರಿಸಿ ಯಾತ್ರಿಕ ಸ್ಥಳವನ್ನಾಗಿ ಮಾಡಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಸೂಫಿ ಸಂತ ಮೆಹಬೂಬ್ ಸುಬಹಾನಿ ದರ್ಗಾ ಇದ್ದು, ಇಲ್ಲಿಗೆ ಅಸಂಖ್ಯಾತ ಭಕ್ತರು ರಾಜ್ಯದ ಉದ್ದಗಲ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ದರ್ಶನಕ್ಕಾಗಿ ಆಗಮಿಸುತ್ತಾರೆ.
ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದ್ದು, ಉದ್ಯೋಗ ಮತ್ತಿತರ ವ್ಯಾಪಾರ, ವಾಣಿಜ್ಯ ಕೆಲಸಗಳಿಗಾಗಿ ಸಂಚಾರಕ್ಕಾಗಿ ರೈಲು ಮಾರ್ಗವನ್ನೇ ಬಳಸುತ್ತಾರೆ. ನೀಲೂರ ಗ್ರಾಮಕ್ಕೆ ಬರಲು 2 ಕಿ.ಮೀ ದೂರದ ಹುಣಸಿ ಹಡಗಿಲ್‌ನಲ್ಲಿ ರೈಲ್ವೆ ಸ್ಟೇಷನ್ ಇದ್ದು, ಅಲ್ಲಿ ಕೇವಲ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲ್ಲುತ್ತವೆ. ಹೀಗಾಗಿ ಭಕ್ತಾದಿಗಳ ಅನುಕೂಲ ಮತ್ತು ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಕೂಡಲೇ ಗ್ರಾಮಕ್ಕೆ ಹಲವು ಮೂಲಭೂತ ಸೌಕರ್ಯ ಒದಗಿಸಿ ಗ್ರಾಮದ ಬ್ರಿಡ್ಜ್ ಸಂಖ್ಯೆ: 545/6ರಲ್ಲಿ ಹೊಸ ರೈಲ್ವೆ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಶರಣು ಹಾಳಮಳ್ಳಿ, ದತ್ತಾತ್ರೇಯ ಬಿಲ್ಕರ್, ಪ್ರಕಾಶ ಹಡಪದ, ಸುರೇಶ ಮುಗದಿ, ಅಜೇಯ ಬಿಲ್ಕರ್, ಅಬ್ದುಲ್ ಸತ್ತಾರ್ ಹಾಗೂ ಬೋರ್ಡ್ ಸದಸ್ಯರಾದ ಶಿವರಾಜ ಗಂದಗೆ, ಜೆ.ಎನ್. ನಾಗರಾಜ, ಏಟ್ಟಮನೂರ ರಾಧಾಕೃಷ್ಣ, ವಿಭಾಗೀಯ ವ್ಯವಸ್ಥಾಪಕ ಶೈಲೇಂದ್ರ ಸಿಂಗ್ ಮುಂತಾದವರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.