ಚರಬಸವೇಶ್ವರ ಜಾತ್ರೆಯಲ್ಲಿ “ಜಾನುವಾರು’ ಸಂಭ್ರಮ
Team Udayavani, Apr 9, 2022, 1:05 PM IST
ಶಹಾಪುರ: ಸಗರನಾಡಿನ ಆರಾಧ್ಯ ದೈವ ಶ್ರೀ ಚರಬಸವೇಶ್ವರ ತಾತಾನವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಜಾನುವಾರು ಜಾತ್ರೆ ಏ.6ರಿಂದ ಪ್ರಾರಂಭವಾಗಿದ್ದು, ಒಂದು ವಾರ ಕಾಲ ನಡೆಯಲಿದ್ದು, ಸಂಭ್ರಮವನ್ನು ಇಮ್ಮಡಿ ಮಾಡಿದೆ. ಹೀಗಾಗಿ ಅನ್ನದಾತರೆಲ್ಲ ಒಂದೆಡೆ ಸೇರುವ ಮೂಲಕ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಜಾತ್ರೆಯಲ್ಲಿ ಅಸಂಖ್ಯಾತ ಎತ್ತುಗಳು ಸೇರಿದ್ದು, ಅವುಗಳ ವಹಿವಾಟು ಜೋರಾಗಿ ನಡೆದಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಜಾನುವಾರು ಜಾತ್ರೆಗಳಿಗೆ ಮಂಕು ಕವಿದಿತ್ತು. ರೈತರು ಕೃಷಿ ಕಾರ್ಯಕ್ಕೆ ತಮಗೆ ಬೇಕಾದ ಎತ್ತು ಖರೀದಿಸಲು ಅವಕಾಶ ದೊರೆತಿರಲಿಲ್ಲ. ಇದ್ದುದರಲ್ಲಿಯೇ ಕೃಷಿ ಕಾರ್ಯ ಮಾಡುವ ಅನಿವಾರ್ಯತೆ ಎದುರಾಗಿತ್ತು.
ಬಾರಿ ಚರಬಸವೇಶ್ವರ ಜಾನುವಾರು ಜಾತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಎತ್ತುಗಳು ಕೊಡು-ತೆಗೆದುಕೊಳ್ಳವಲ್ಲಿ ರೈತರು ಬಿಸಿಲನ್ನೂ ಲೆಕ್ಕಿಸದೇ ನಿರತರಾಗಿರುವುದು ಕಂಡು ಬರುತ್ತಿದೆ. ಕನಿಷ್ಟ ಒಂದು ಎತ್ತಿನ ಬೆಲೆ 50 ಸಾವಿರದಿಂದ ಗರಿಷ್ಠ 2.20 ಲಕ್ಷ ರೂ.ವರೆಗೆ ಮಾರಾಟವಾಗುತ್ತಿವೆ. ಇಂಗಳಿಗಿ ಸಲಾದಪುರದ ಒಂದು ಎತ್ತಿನ ಬೆಲೆ 2.50 ಲಕ್ಷ ರೂ. ಹೇಳಲಾಗಿತ್ತು.
ಎರಡು ದಿನಗಳಿಂದ ಆ ಎತ್ತು ಖರೀದಿಗೆ ಸಾಕಷ್ಟು ಜನರು ಪ್ರಯತ್ನಿಸಿ ಶುಕ್ರವಾರ 2.20 ಲಕ್ಷ ರೂ. ಕೊಟ್ಟು ಓರ್ವ ರೈತರು ಅದನ್ನು ಖರೀದಿಸಿದ್ದಾರೆ. ಜಾನುವಾರ ಜಾತ್ರೆಯಲ್ಲಿ ಸೇರಿದ್ದ ಎತ್ತುಗಳನ್ನು ನೋಡಲೆಂದೆ ಹಲವು ಗ್ರಾಮಗಳ ರೈತರು ಆಗಮಿಸುತ್ತಾರೆ. ಅಲ್ಲದೇ ಕೃಷಿ ಪರಿಕರ ಖರೀದಿಯಲ್ಲೂ ರೈತರು ಮುಗಿಬಿದ್ದಿದ್ದಾರೆ. ಬೇಸಿಗೆಯಾದ್ದರಿಂದ ಕೃಷಿ ಚಟುವಟಿಕೆಗೆ ಸ್ವಲ್ಪ ಬಿಡುವಿದೆ. ಬರುವ ಮುಂಗಾರಿಗೂ ಮುಂಚೆ ಜಮೀನನ್ನು ಹದ ಮಾಡಿಕೊಳ್ಳುವುದು, ಕೃಷಿ ಪರಿಕರ ತಯಾರಿಸಿಕೊಳ್ಳುವಲ್ಲಿ ರೈತರು ಬ್ಯುಸಿಯಾಗುತ್ತಾರೆ. ಮುಂಗಾರು ಆರಂಭವಾಗುತ್ತಿದ್ದಂತೆ ಅವರ ಕೃಷಿ ಚಟುವಟಿಕೆ ಗರಿಗೆದರುತ್ತದೆ. ಅದಕ್ಕೆ ಬೇಕಾದ ಪೂರಕ ಸಾಮಗ್ರಿ ವ್ಯವಸ್ಥೆಗೊಳಿಸಿಕೊಳ್ಳುವುದು ವಾಡಿಕೆ.
ಎರಡು ವರ್ಷದಿಂದ ಎತ್ತುಗಳ ಜಾತ್ರೆ ನಡೆಯದಿದ್ದಕ್ಕೆ ರೈತರಿಗೆ ತೊಂದರೆಯಾಗಿತ್ತು. ಈ ವರ್ಷ ಎತ್ತುಗಳ ಮಾರಾಟ-ಜಾತ್ರೆ ನಡೆಯುತ್ತಿದೆ. ನಮಗೆ ಬೇಕಾದ ಎತ್ತು ಖರೀದಿಸುತ್ತೇವೆ. ಸಣ್ಣ ರೈತರು, ದೊಡ್ಡ ರೈತರು ತಮ್ಮ ಶಕ್ತಿಗನುಗುಣವಾಗಿ ಎತ್ತುಗಳನ್ನು ಖರೀದಿಸುತ್ತಿದ್ದಾರೆ. ಕೃಷಿ ಸಾಮಗ್ರಿಗಳೂ ಜಾತ್ರೆಯಲ್ಲಿ ದೊರೆಯುತ್ತಿವೆ. ಎತ್ತುಗಳ ಬೆಲೆಯೂ ದುಬಾರಿಯಾಗಿವೆ. -ಬಸಪ್ಪ, ಜಾತ್ರೆಗೆ ಆಗಮಿಸಿದ ರೈತ
ಕಳೆದೆರಡು ವರ್ಷಗಳಿಂದ ಯಾವುದೇ ಜಾತ್ರೆ- ಉತ್ಸವಕ್ಕೆ ಕೊರೊನಾ ಬ್ರೇಕ್ ಹಾಕಿತ್ತು. ಈ ವರ್ಷ ಜಾತ್ರೋತ್ಸವ ಆರಂಭವಾಗಿದ್ದರಿಂದ ಕೃಷಿಕರು ಉತ್ಸಾಹದಲ್ಲಿದ್ದಾರೆ. ಕೃಷಿಗೆ ಬೆನ್ನೆಲುಬಾದ ಎತ್ತುಗಳ ಖರೀದಿ ಜೋರಾಗಿ ನಡೆದಿದೆ. ಈ ಬಾರಿ ಜಾತ್ರೆಯಲ್ಲಿ ಅತಿ ಹೆಚ್ಚು ಗರಿಷ್ಠ ಬೆಲೆ ಮಾರಾಟವಾದದು ಇಂಗಳಿಗಿ ಸಲಾದಪುರ ಗ್ರಾಮದ ಎತ್ತು 2.20 ಲಕ್ಷ ರೂ. ಗೆ ಖರೀದಿಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಇನ್ನೂ 2-3 ದಿನ ಜಾತ್ರೆ ನಡೆಯಲಿದೆ. -ಶರಣು ಗದ್ದುಗೆ, ಚರಬಸವೇಶ್ವರ ದೇವಸ್ಥಾನ ವಂಶಸ್ಥರು
-ಮಲ್ಲಿಕಾರ್ಜುನ ಮುದ್ನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.