ಜಮೀನು ಖರೀದಿ ಮಾಡಿದಷ್ಟೇ ಖುಷಿ

14 ಜನರಿಗೆ ವೃದ್ಧಾಪ್ಯದ ವೇತನ, 10 ಮಹಿಳೆಯರಿಗೆ ವಿಧವಾ ವೇತನ, ಐದು ಜನರಿಗೆ ಕೃಷಿ ಯಂತ್ರೋಪಕರಣ

Team Udayavani, Mar 16, 2021, 6:18 PM IST

Land

ಕಲಬುರಗಿ: ತಾತ-ಮುತ್ತಾತನ ಹೆಸರಿನಲ್ಲಿದ್ದ ಭೂಮಿ ತಮ್ಮ ಹೆಸರಿಗೆ ಹಕ್ಕು ಪತ್ರ ವರ್ಗಾವಣೆ ಯಾಗದಿದ್ದಕ್ಕೆ ನಮಗೆ ಎಲ್ಲೂ ನಯಾ ಪೈಸೆ ಸಾಲ ತೆಗೆದುಕೊಳ್ಳಲಿಕ್ಕೆ ಸಾಧ್ಯವಾಗಿರಲಿಲ್ಲ. ಅದೇ ರೀತಿ ಸರ್ಕಾರದ ಯಾವೊಂದು ಯೋಜನೆ ಲಾಭ ಪಡೆದುಕೊಳ್ಳಲಿಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಸಾಧ್ಯವಾಗಿರುವುದು ಹೊಸದಾಗಿ ಜಮೀನು ಖರೀದಿ ಮಾಡಿರುವಷ್ಟು ಖುಷಿಯಾಗಿದೆ.

ಇದು ಸೇಡಂ ತಾಲೂಕಿನ ಮುಧೋಳದಲ್ಲಿ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್‌ ತೇಲ್ಕೂರ ಅವರು ನಡೆಸಿದ ಜನಸ್ಪಂದನದಲ್ಲಿ ಎರಡ್ಮೂರು ದಶಕಗಳಿಂದ ತಮ್ಮ ಹೆಸರಿಗೆ ಆಗದಿರುವ ಜಮೀನು ಜಮೀನು ತಮ್ಮ ಹೆಸರಿಗಾಗುತ್ತಿರುವುದಕ್ಕೆ 44 ರೈತ ಕುಟುಂಬಗಳು ವ್ಯಕ್ತಪಡಿಸಿದ ಸಂತಸವಿದು.

ಮುಧೋಳದ ರಮೇಶ ನರಸಪ್ಪ ಚೆಟ್ಟಪಲ್ಲಿ, ಬಸಪ್ಪ ಬಿಚ್ಚಪ್ಪ, ಮಹಾಲಿಂಗಮ್ಮ ತಾಯಪ್ಪ, ದೊಡ್ಡ ಕಿಷ್ಟಪ್ಪ ನರಸಪ್ಪ, ದ್ಯಾವಮ್ಮ ಭೀಮಪ್ಪ ಮುಂತಾದವರು ಸೋಮವಾರ ಮುಧೋಳ ಕರ್ನಾಟಕ ಪಬ್ಲಿಕ್‌ ಶಾಲಾ ಆವರಣದಲ್ಲಿ ನಡೆದ ಶಾಸಕರ ಅಧ್ಯಕ್ಷತೆ ಜನಸ್ಪಂದನ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ಪಡೆದ ಸಂದರ್ಭದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಈ ಜನಸ್ಪಂದನದಲ್ಲಿ 44 ಕುಟುಂಬಗಳಿಗೆ ಹೊಲದ ಹಕ್ಕು ಬದಲಾವಣೆ ಪತ್ರ, 14 ಜನರಿಗೆ ವೃದ್ಧಾಪ್ಯದ ವೇತನ, 10 ಮಹಿಳೆಯರಿಗೆ ವಿಧವಾ ವೇತನ, ಐದು ಜನರಿಗೆ ಕೃಷಿ ಯಂತ್ರೋಪಕರಣ ವಿತರಣೆ
ನೆರವೇರಿಸಲಾಯಿತು.

ಶಾಸಕ ರಾಜಕುಮಾರ ಪಾಟೀಲ್‌ ತೇಲ್ಕೂರ, ಜನಸ್ಪಂದನ ಒಂದು ದಿನಕ್ಕೆ ಮಾತ್ರ ಸಿಮೀತವಲ್ಲ. ವಾರ ಮುಂಚೆ ಹಾಗೂ ಜನಸ್ಪಂದನ ನಂತರ ನೋಡಲ್‌ ಅ ಧಿಕಾರಿಯೊಬ್ಬರು ಎರಡು ವಾರ ಜನಸ್ಪಂದನಾ ಕೇಂದ್ರದಲ್ಲೇ ಇದ್ದು, ಕಾರ್ಯ ಎಲ್ಲ ದೂರುಗಳಿಗೆ ಪರಿಹಾರ ಕಲ್ಪಿಸಿ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಂದು ಮುಟ್ಟಿಸಲಿದ್ದಾರೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲರೂ ಕೆಲಸ ಮಾಡಿ. ಮಹಿಳೆಯರ ಕೂಲಿ ಹಣವನ್ನು ಗಂಡ ಇಲ್ಲವೇ ಮನೆಯ ಇತರರು ಒತ್ತಾಯದಿಂದ ಹಣ ಪಡೆದಲ್ಲಿ ಪೊಲೀಸರಿಗೆ ದೂರು ಕೊಡಿ. ದೂರಿಗೆ ತಕ್ಷಣವೇ ಸ್ಪಂದಿಸಿ ಎಂದು ಪೊಲೀಸರಿಗೆ ಸೂಚಿಸಿದ  ಶಾಸಕ ರಾಜಕುಮಾರ ತೇಲ್ಕೂರ, ಗ್ರಾಪಂ ಅಭಿವೃದ್ಧಿ
ಅಧಿಕಾರಿಗಳು, ಜೆಸ್ಕಾಂ, ಕಂದಾಯ ಇಲಾಖೆ ಸೇರಿ ಇತರ ಅಧಿಕಾರಿಗಳು ಕೆಳ ಮಟ್ಟದಲ್ಲಿ ಜನ ಸಾಮಾನ್ಯರ ಕೆಲಸಗಳಿಗೆ ಸ್ಪಂದಿಸದಿದ್ದರೆ ಮುಲಾಜಿಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ನೀಡಬೇಡಿ ಎಂದು ಕಿವಿಮಾತು ಹೇಳಿದರು.

ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಮಾತನಾಡಿ, ಕಂದಾಯ ಇಲಾಖೆಯಿಂದ 110 ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಬಹು ಮುಖ್ಯವಾಗಿ ಜಮೀನು ಹಕ್ಕು ವರ್ಗಾವಣೆ, ಪಹಣಿ ತಿದ್ದುಪಡಿ ಇನ್ಮುಂದೆ ಸರಳವಾಗಿ ನೆರವೇರಿಸಲಾಗುವುದು ಎಂದು ಹೇಳಿದರು. ತಾಪಂ ಇಒ ಗುರುನಾ ಶೆಟಕಾರ, ಕೃಷಿ ಸಹಾಯಕ ನಿರ್ದೇಶಕ ಎ.ವೈ. ಹಂಪಣ್ಣ, ಆರೋಗ್ಯಾಧಿಕಾರಿ ಡಾ.ವೀರೇಂದ್ರ ಪಾಟೀಲ್‌, ಬಿಇಒ ಸತ್ಯಕುಮಾರ ಭಾಗೋಡಿ, ಸಿಪಿಐಗಳಾದ ರಾಜಶೇಖರ ಹಳಿಗೋಧಿ, ಆನಂದರಾವ್‌, ಬಿಜೆಪಿ ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಣಿಕಮ್ಮ ಕಲಾಲ, ತಾಪಂ ಸದಸ್ಯರಾದ ವೆಂಕಟರಾವ ಮಿಸ್ಕಿನ್‌, ನಾಗರೆಡ್ಡಿ ದೇಶಮುಖ, ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಸಿಎಂ ಒಪ್ಪಿಗೆ ಪಡೆದು ಜನ ಸಾಮಾನ್ಯರಿಗೆ ಸ್ಪಂದಿಸುವ ಜನಸ್ಪಂದನ ನಡೆಸಲಾಗಿದೆ. ಸೇಡಂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧತೆ ಹೊಂದಿ ಮುನ್ನಡೆಯಲಾಗುತ್ತಿದೆ. 47 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಸಹಾಯಕವಾಗುವ 639 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದೆ. ಅದೇ ರೀತಿ ಮುಧೋಳ ವಲಯದಲ್ಲಿ 59 ಕೆರೆಗಳಿಗೆ ಸನ್ನತಿ ಬ್ಯಾರೇಜ್‌ದಿಂದ ನೀರು ತುಂಬಿಸುವ ನಿಟ್ಟಿನ
ಸರ್ವೇ ಕಾರ್ಯ ನಡೆದಿದೆ.

ರಾಜಕುಮಾರ ಪಾಟೀಲ್‌ ತೇಲ್ಕೂರ, ಶಾಸಕರು ಸೇಡಂ

ಟಾಪ್ ನ್ಯೂಸ್

pratap-Simha

Mysuru Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಮಾಜಿ ಸಂಸದ ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

pratap-Simha

Mysuru Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಮಾಜಿ ಸಂಸದ ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.