![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 12, 2021, 6:11 PM IST
ಕಲಬುರಗಿ: ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಗುರುವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಶಿವನ ಮಂದಿರಗಳಿಗೆ ಭಕ್ತರು ಕುಟುಂಬ ಸಮೇತರಾಗಿ ತೆರಳಿ ದರ್ಶನ ಪಡೆದು, ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಿ ಶಿವನಾಮ ಸ್ಮರಣೆ ಮಾಡಿದರು. ಕೆಲವರು ದಿನವಿಡಿ ಉಪವಾಸ ಮಾಡಿ, ರಾತ್ರಿಯೆಲ್ಲ ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರು.
ಇಲ್ಲಿನ ಇತಿಹಾಸ ಪ್ರಸಿದ್ಧ ರಾಮತೀರ್ಥ ದೇವಸ್ಥಾನ, ಬ್ರಹ್ಮಕುಮಾರ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಸರೋವರ, ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಹಬ್ಬದ ಅಂಗವಾಗಿ ದೇಗುಲಗಳು ಮತ್ತು ಶಿವಲಿಂಗಗಳಿಗೆ ವಿಶೇಷ ಅಲಂಕಾರ ಮಾಡಿದ್ದನ್ನು ಕಂಡು ಭಕ್ತರು ಪುನೀತರಾದರು.
ಸೇಡಂ ರಸ್ತೆಯಲ್ಲಿರುವ ಅಮೃತ ಸರೋವರದಲ್ಲಿ ಭಕ್ತರ ದಂಡೇ ನೆರೆದಿತ್ತು. ಶಿವರಾತ್ರಿ ಪ್ರಯುಕ್ತ ವಿಶೇಷವಾದ ಅಲಂಕಾರದಿಂದ ಅಮೃತ ಸರೋವರ ಕಂಗೊಳಿಸುತ್ತಿತ್ತು. ಇಲ್ಲಿನ ಪರಿಸರ ಪ್ರವೇಶಿಸುತ್ತಿದ್ದಂತೆ ಆಕರ್ಷಕ ಬೃಹತ್ ಶಿವಲಿಂಗ ಸೆಳೆಯುತ್ತಿತ್ತು. ಅದರಲ್ಲೂ ಈ ಬಾರಿ ಹಬ್ಬದ ಅಂಗವಾಗಿ ಲಿಂಗವನ್ನು ಸಂಪೂರ್ಣವಾಗಿ ಮುತ್ತಿನಿಂದ ಸಿಂಗಾರ ಮಾಡಲಾಗಿತ್ತು. ಒಂದು ಲಕ್ಷಕ್ಕೂ ಹೆಚ್ಚು ಬಿಳಿ ಮತ್ತು ಚಿನ್ನದ ಬಣ್ಣದ ಮುತ್ತುಗಳಿಂದ ಅಲಂಕೃತಗೊಂಡಿದ್ದ
ಶಿವಲಿಂಗವು ಹಬ್ಬದ ಕಳೆ ಹೆಚ್ಚಿಸಿತ್ತು.
ಶಾಶ್ವತವಾಗಿ ಸ್ಥಾಪಿಸಿರುವ ದ್ವಾದಶ (12) ಜ್ಯೋತಿರ್ಲಿಂಗಗಳನ್ನು ವಿಶೇಷವಾಗಿ ಅಲಂಕಾರ ಗೊಳಿಸಲಾಗಿತ್ತು. ಸೋಮನಾಥೇಶ್ವರ, ನಾಗೇಶ್ವರ,
ಶ್ರೀಶೈಲ ಮಲ್ಲಿಕಾರ್ಜುನ, ಮಹಾ ಕಾಳೇಶ್ವರ, ಓಂಕಾರೇಶ್ವರ, ವೈದ್ಯನಾಥ, ಭೀಮಾ ಶಂಕರ, ರಾಮೇಶ್ವರ, ವಿಶ್ವನಾಥ, ತ್ರಯಂಬ ಕೇಶ್ವರ, ಕೇದಾರನಾಥ, ಘೃಷ್ಣೇಶ್ವರ ಜ್ಯೋತಿರ್ಲಿಂಗಗಳಿಗೆ ವಿವಿಧ ಬಗೆಯ ವೈಭವದ ಅಲಂಕಾರದಿಂದ ಭಕ್ತರ ಗಮನ ಸೆಳೆದವು. ಕಡಲ ಚಿಪ್ಪುಗಳು, ರುದ್ರಾಕ್ಷಿ, ಹತ್ತು ಮುಖ ಬೆಲೆಯ ನೋಟುಗಳು, ದ್ರಾಕ್ಷಿ, ಗೋಡಂಬಿ, ಸಿರಿಧಾನ್ಯ… ಹೀಗೆ ಪ್ರತಿ ಒಂದು ಜ್ಯೋತಿರ್ಲಿಂಗಕ್ಕೂ ವಿಶೇಷ ಅಲಂಕಾರ ಕಂಡು, ದರ್ಶನ ಪಡೆಯುವ ಮೂಲಕ ಭಕ್ತರು ಪುಳಕಿತಗೊಂಡರು.
ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೂ ಹಬ್ಬದ ಅಂಗವಾಗಿ ಭಕ್ತರು ದಂಡು ಹರಿಬಂದಿತ್ತು. ಮಧ್ಯಾಹ್ನದ ಸುಡು ಬಿಲಿಸಿನಲ್ಲೂ ದೇವರ ದರ್ಶನ ಪಡೆದು ಪಾವನರಾದರು. ಆಳಂದ ರಸ್ತೆಯಲ್ಲಿರುವ ರಾಮತೀರ್ಥದಲ್ಲೂ ಜಾತ್ರೆ ವಾತಾವರಣ ನಿರ್ಮಾಣವಾಗಿತ್ತು. ಶಿವಲಿಂಗ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.
ಪಾರ್ವತಿ, ಪರಮೇಶ್ವರ, ಗಣಪತಿ, ಶಿವಲಿಂಗವನ್ನು ವಿಶೇಷ ಅಲಂಕಾರಿಕ ಹೂಗಳೊಂದಿಗೆ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ದೇವರ ದರ್ಶನ ಪಡೆಯಲು
ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಉದ್ದನೆ ಸಾಲಿನಲ್ಲಿ ನಿಂತ ಭಕ್ತರು ಶಾಂತಚಿತ್ತದಿಂದ ದರ್ಶನ ಪಡೆದರು.
ವಿಜಯ ನಗರ ಕಾಲೋನಿಯ ಮಲ್ಲಿಕಾರ್ಜುನ ದೇವಸ್ಥಾನ, ಖೂಬಾ ಪ್ಲಾಟ್ ಪ್ರದೇಶದ ಶಿವ ದೇವಾಲಯ, ಹೊಸ ಜೇವರ್ಗಿ ರಸ್ತೆಯ ಕೃಷ್ಣೇಶ್ವರ ದೇವಾಲಯ ಸೇರಿದಂತೆ ಹಲವೆಡೆಯ ಶಿವ ಮಂದಿರ, ಈಶ್ವರ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಪೂಜಾ-ಕೈಂಕರ್ಯ ನೆರವೇರಿಸಿ ಮಹಾಶಿವರಾತ್ರಿಯ
ಭಕ್ತಿ, ಭಾವ ಮೆರೆದರು.
ಭಕ್ತರು ಶಿವ ಭಕ್ತಿಗೀತೆಗಳನ್ನು ಹಾಡುವ ಮೂಲಕ ಶಿವನಾಮ ಸ್ಮರಣೆ ಮಾಡಿದರು.ನಿರಾಹಾರಿಗಳಾಗಿದ್ದ ಭಕ್ತರು ಹಾಲು, ಹಣ್ಣು ಸೇವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ, ಮನೆಗಳಲ್ಲೂ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಪೂಜೆ, ಪುನಸ್ಕಾರಗಳು ಜರುಗಿದವು. ಮನೆಯಂಗಳದಲ್ಲೂ ರಂಗೋಲಿ
ಮೂಲಕ ಶಿವ ಲಿಂಗಗಳನ್ನು ಬಿಡಿಸಿ ಭಕ್ತಿ ಮರೆದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.