ಕಲಬುರಗಿ: ಸಕಲರನ್ನು ಮೋಡಿ ಮಾಡಿದಾತ ಶೇಕ್ಸಪಿಯರ್; ಡೋಣೂರು
ಶೇಕ್ಸಪಿಯರ್ ಭಾರತೀಯರ ಕಲ್ಪನೆಯನ್ನು ಸೆರೆಹಿಡಿದು ಆವರಿಸಿಕೊಂಡಿದ್ದಾನೆ
Team Udayavani, Apr 13, 2023, 2:20 PM IST
ಕಲಬುರಗಿ: ವಿಲಿಯಂ ಶೇಕ್ಸಪಿಯರ್ ಮಾನವ ಸ್ವಭಾವವಗಳನ್ನು ಪ್ರಚೋದಿಸುವಂತಹ ನಾಟಕಕಾರರಲ್ಲಿ ಒಬ್ಬ. ಅವನ ಕೃತಿಗಳು ಮಾನವ ಜೀವನದ ವಿವಿಧ ಆಯಾಮಗಳಲ್ಲಿನ ಮೌಲ್ಯಗಳನ್ನು ವ್ಯಾಖ್ಯಾನಿಸುತ್ತವೆ. ಆತ ಎಲ್ಲ ವರ್ಗದ ಚಿಂತಕರು, ಬರಹಗಾರರು, ಶಿಕ್ಷಣ ತಜ್ಞರು, ಓದುಗರು, ರಂಗಕರ್ಮಿಗಳನ್ನು ಮೋಡಿ ಮಾಡುವ ವ್ಯಕ್ತಿಯಾಗಿದ್ದಾನೆ ಎಂದು ಸಿಯುಕೆ ಮಾನವಿಕ, ಭಾಷಾ ನಿಕಾಯದ ಡೀನ್ ಪ್ರೊ|ಬಸವರಾಜ ಪಿ.ಡೋಣೂರು ಹೇಳಿದರು.
ಸಿಯುಕೆನಲ್ಲಿ ಏ.24, 25ರಂದು ನಡೆಯಲಿರುವ “ವಿಲಿಯಂ ಶೇಕ್ಸಪಿಯರ್: ವ್ಯಾಖ್ಯಾನಗಳು, ಅಳವಡಿಕೆಗಳು ಮತ್ತು ವಿನಿಯೋಗ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದಲ್ಲಿ ವಸಾಹತುಶಾಹಿ ಯುಗದಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ರಂಜಿಸಲು ಶೇಕ್ಸಪಿಯರ್‌ನ ನಾಟಕಗಳನ್ನು ಪ್ರದರ್ಶಿಸಲಾಯಿತು. ತರುವಾಯ, ಶೇಕ್ಸಪಿಯರ್‌ನ ನಾಟಕಗಳ ಪ್ರದರ್ಶನಗಳು ಬೆಳೆದು ಯಶಸ್ಸು ಕಂಡು, ಅನೇಕ ದೇಶೀಯ ನಾಟಕಕಾರರು ಶೆಕ್ಸ್‌ಪಿಯರ್‌ನ ನಾಟಕಗಳನ್ನು ಭಾಷಾಂತರಿಸಲು ಮತ್ತು ಅಳವಡಿಸಿಕೊಳ್ಳಲು ಪ್ರೇರೇಪಿಸಿತು. ಇದರಿಂದಾಗಿ ಹಲವಾರು ಭಾರತೀಯ ಭಾಷೆಗಳಲ್ಲಿ ಶೇಕ್ಸಪಿಯರ್‌ನ ನಾಟಕಗಳನ್ನು ಅನುವಾದಿಸಿ ಅಳವಡಿಸಲಾಯಿತು. ಅಂದಿನಿಂದ, ಶೇಕ್ಸಪಿಯರ್ ಭಾರತೀಯರ ಕಲ್ಪನೆಯನ್ನು ಸೆರೆಹಿಡಿದು ಆವರಿಸಿಕೊಂಡಿದ್ದಾನೆ ಎಂದರು.
ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ|ಬಟ್ಟು ಸತ್ಯನಾರಾಯಣ, ಇಂತಹ ಸಮ್ಮೇಳನಗಳು ಜ್ಞಾನವನ್ನು ಪ್ರಸಾರ ಮಾಡಲು ಮತ್ತು ಬುದ್ಧಿಜೀವಿಗಳನ್ನು ಒಂದೇ ವೇದಿಕೆಯಲ್ಲಿ ತರುತ್ತವೆ. ಇದು ಯುವ ಅಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತಮ್ಮ ಜ್ಞಾನ ಪ್ರದರ್ಶಿಸಲು ಮತ್ತು ತಜ್ಞರಿಂದ ಕಲಿಯಲು ವೇದಿಕೆ ಒದಗಿಸುತ್ತದೆ. ಈ ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸುತ್ತೇನೆ ಮತ್ತು ಶಿಕ್ಷಕರು ಆಗಾಗ್ಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕೋರುತ್ತೇನೆ ಎಂದು ಹೇಳಿದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ|ಪ್ರಕಾಶ ಬಾಳಿಕಾಯಿ ಮಾತನಾಡಿ, ಎರಡು ದಿನಗಳ ಈ ವಿಚಾರ ಸಂಕಿರಣದಲ್ಲಿ ವಿಲಿಯಂ ಶೇಕ್ಸಪಿಯರ್‌ನ ಬದಲಾವಣೆ ಮತ್ತು ನಿಶ್ಚಲತೆ, ಜನಪ್ರಿಯ ಸಂಸ್ಕೃತಿಯಲ್ಲಿ ಶೇಕ್ಸಪಿಯರ್, ಶೇಕ್ಸಪಿಯರ್ ಮತ್ತು ಅಂಗವೈಕಲ್ಯ ಅಧ್ಯಯನಗಳು, ಪೋಸ್ r-ಹ್ಯೂಮನಿಸಂ ಮತ್ತು ಶೇಕ್ಸಪಿಯರ್, ಶೇಕ್ಸಪಿಯರ್‌ನ ನಾಟಕಗಳಲ್ಲಿ ಮಾನವ ಸಂಬಂಧಗಳ ಜಟಿಲತೆಗಳು, ಶೆಕ್ಸ ಪಿಯರ್ ಮತ್ತು ನಾಟಕಗಳಲ್ಲಿನ ಬದಲಾವಣೆಗಳು,
ಶೇಕ್ಸಪಿಯರ್ ಮತ್ತು ಟ್ರಾಮಾ ಸ್ಟಡೀಸ್, ಶೇಕ್ಸಪಿಯರ್‌ನ ನಾಟಕಗಳಲ್ಲಿ ರಾಜರು ಮತ್ತು ಮುರ್ಖರು, ಭಾರತೀಯ ಭಾಷೆ, ಚಲನಚಿತ್ರಗಳಲ್ಲಿ ಶೇಕ್ಸಪಿಯರ್, ಶೇಕ್ಸಪಿಯರ್‌ನ ಭಾಷಾಂತರದಲ್ಲಿಯ ಸವಾಲುಗಳು, ಶೇಕ್ಸಪಿಯರ್‌ನ ನಾಟಕಗಳಲ್ಲಿ ಲಿಂಗದ ಮರು ವ್ಯಾಖ್ಯಾನ, ಸಂಸ್ಕೃತಿಗಳನ್ನು ಓದುವ ಸಾಧನವಾಗಿ ಶೇಕ್ಸಪಿಯರ್, ಶೇಕ್ಸಪಿಯರ್ ಮತ್ತು ಸಬಾಲ್ಟರ್ನ್ ಅಧ್ಯಯನಗಳ ಕುರಿತು ಲೆಖನಗಳ ಮಂಡನೆ ಮತ್ತು ಸಂವಾದ ನಡೆಯಲಿದೆ ಎಂದು ಹೇಳಿದರು.
ಡಾ|ಸಂಜೀವರಾಯಪ್ಪ ಎನ್.ಸಿ, ಡಾ|ಆಶಿಶ ಆಗಸರ, ಡಾ|ಶ್ರೀಲತಾ ಮಾದಾ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.