Kalaburagi: ಜೈಲಿಂದ ಶಂಕಿತ ಉಗ್ರ ಜುಲ್ಫಿಕರ್ ಸೇರಿ ಆರು ನಟೋರಿಯಸ್ ಕೈದಿಗಳ ಎತ್ತಂಗಡಿ
ಶಂಕಿತ ಉಗ್ರ ಜುಲ್ಫಿಕರ್ ಸೇರಿ ಆರು ನಟೋರಿಯಸ್ ಕೈದಿಗಳು
Team Udayavani, Dec 6, 2024, 8:58 AM IST
ಕಲಬುರಗಿ: 2013 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಉಗ್ರ ಜುಲ್ಫಿಕರ್ ಸೇರಿದಂತೆ ಒಟ್ಟು ಆರು ಜನ ನಟೋರಿಯಸ್ ಕೈದಿಗಳನ್ನು ರಾಜ್ಯದ ಇತರೆ ಜೈಲುಗಳಿಗೆ ಶಿಫ್ಟ್ ಮಾಡುವ ಮೂಲಕ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಉಪಟಳಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.
ಎನ್ ಐಎ ಕೋರ್ಟ್ ನ ಅನುಮತಿ ಪಡೆದು ಉಗ್ರ ಜುಲ್ಫಿಕರ್ ಶಿಫ್ಟ್, ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಹಾಗೂ ಅಬ್ದುಲ್ ಖಾದರ್ ಜಿಲಾನಿ ಧಾರವಾಡ ಕೇಂದ್ರ ಕಾರಾಗೃಹ, ಶೇಖ್ ಸದಾಂ ಹುಸೇನ್- ಕೇಂದ್ರ ಕಾರಾಗೃಹ ಶಿವಮೊಗ್ಗ, ಜಾಕೀರ್ ತಂದೆ ಹನೀಫ್- ಕೇಂದ್ರ ಕಾರಾಗೃಹ ಶಿವಮೊಗ್ಗ, ವಿಶಾಲ್ ತಂದೆ ವಿಜಯಕುಮಾರ್ ರಾಥೋಡ್ ಕೇಂದ್ರ ಕಾರಾಗೃಹ ಬಳ್ಳಾರಿ ಜೈಲುಗಳಿಗೆ ಎತ್ತಂಗಡಿ ಮಾಡಲಾಗಿದೆ.
ಈ ನಟೋರಿಯಸ್ ಕೈದಿಗಳು ಕಳೆದ ಹಲವು ತಿಂಗಳುಗಳಿಂದ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇಡೀ ವಾತಾವರಣವನ್ನು ಹಾಳು ಮಾಡಿದ್ದರು ಎನ್ನಲಾಗಿದೆ. ತಮ್ಮ ಸ್ವಹಿತಾ ಶಕ್ತಿಗಾಗಿ ಜೈಲು ಅಧಿಕಾರಿಗಳು ಸೇರಿದಂತೆ ಕೆಲವು ಕೈದಿಗಳನ್ನು ತಮ್ಮ ಹಿತಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದರಿಂದಾಗಿ ಜೈಲಿನಲ್ಲಿ ಗುಟ್ಕಾ, ಸಿಗರೇಟ್, ಬೀಡಿ ಸೇರಿದಂತೆ ಇತರೆ ಅಮಲು ಬರಿಸುವಂತಹ ವಸ್ತುಗಳ ಪೂರೈಕೆ ಯಥೇಚ್ಛವಾಗಿ ನಡೆದಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗೆ ಖುದ್ದು ಜೈಲಿನಲ್ಲಿರುವ ಕೈದಿಗಳೇ ತಮಗೆ ಗುಟುಕ, ಗಾಂಜಾ, ಸಿಗರೇಟ್ ಬೇಕೆಂದು ಪ್ರತಿಭಟನೆ ಮಾಡಿ ಬಾರಿ ಸದ್ದು ಮಾಡಿದ್ದರು.
ಖುದ್ದು ಜೈಲು ಅಧಿಕಾರಿಗಳ ವಿಡಿಯೋಗಳನ್ನು ಬ್ಲ್ಯಾಕ್ ಮೇಲ್ ಮಾಡ್ತಿದ್ದ ನಟೋರಿಯಸ್ ಗಳು. ಬ್ಲ್ಯಾಕ್ ಮೇಲ್ ಮಾಡಿ ಹೈಫೈ ಜೀವನ ನಡೆಸುತ್ತಿದ್ದರು.
ಹೊಸ ಜೈಲರ್ ನಿಂದ ಟೈಟ್:
ಈ ಎಲ್ಲಾ ಅಕ್ರಮಗಳಿಗೆ ಡಾ. ಅನಿತಾ ನೂತನವಾಗಿ ಜೈಲರ್ ಆಗಿ ಬರುವ ಮುಖಾಂತರ ಇಡೀ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿನ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು.
ಇದರಿಂದಾಗಿ ಪ್ರಮುಖ ಕೈದಿಗಳು ಸೇರಿದಂತೆ ಇತರರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದರು. ಅದಲ್ಲದೆ ಜೈಲಿನ ಸಿಬ್ಬಂದಿ ಹಾಗೂ ಕೆಲ ಅಧಿಕಾರಿಗಳಿಗೆ ಬರುತ್ತಿದ್ದ ಆದಾಯವು ನಿಂತು ಹೋಗಿತ್ತು. ಇದರಿಂದಾಗಿ ಇಡೀ ವ್ಯವಸ್ಥೆಯ ವಿರುದ್ಧ ಭುಗಿಲೇಳುವ ಮೂಲಕ ಕೇಂದ್ರ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಆಗುವಂತೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಮಿಷನರ್ ಸೇರಿದಂತೆ ಬಂದಿಖಾನೆಯ ಹಲವು ಹಿರಿಯ ಅಧಿಕಾರಿಗಳು ಕೂಡ ಕಲ್ಬುರ್ಗಿ ಜೈಲಿಗೆ ಭೇಟಿ ನೀಡಿ ಗಮನ ಸೆಳೆದಿದ್ದರು. ಆದರೂ ಕೂಡ ಕೈದಿಗಳು ಸುಮ್ಮನಾಗಿರಲಿಲ್ಲ. ಸಾಲದಕ್ಕೆ ನೂತನ ಜೈಲರ್ ಅಕೌಂಟಿಗೆ ಹಣ ವರ್ಗಾವಣೆಯಂತಹ ಮತ್ತು ಕಾರನ್ನು ಸ್ಪೋಟಿಸುವ ಬೆದರಿಕೆ ಕೂಡ ಹಾಕಿದ್ದರು. ಇದರಿಂದಾಗಿ ಕಲ್ಬುರ್ಗಿ ಕೇಂದ್ರ ಕಾರಾಗೃಹ ರಾಜ್ಯದ ಗಮನ ಸೆಳೆದಿತ್ತಲ್ಲದೆ, ಕೈದಿಗಳ ಕಪಿಮುಷ್ಠಿಯಲ್ಲಿತ್ತು ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈಗ ಈ ಎಲ್ಲಾ ಕೂಕೃತ್ಯಗಳಿಗೆ ನೂತನ ಜೈಲರ್ ಬ್ರೇಕ್ ಹಾಕಿದಂತಾಗಿದೆ.
ಎನ್ ಐ ಏ ಕೋರ್ಟ್ ಅನುಮತಿ ಪಡೆಯುವ ಮೂಲಕ ಜೈಲರ್ ಅನಿತಾ, ಜುಲ್ಫಿಕರ್ ಸೇರಿದಂತೆ ಹಲವು ಕಿಡಿಗೇಡಿ ಕೈದಿಗಳನ್ನು ಹೆಡಮುರಿ ಕಟ್ಟಿದ್ದಾರೆ. ಅದಲ್ಲದೆ ಕೈದಿಗಳ ಇಂತಹ ಸಾಹಸಕ್ಕೆ ಬಂದಿಖಾನೆ ಇಲಾಖೆ ಬಗ್ಗುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಇದರಿಂದಾಗಿ ಕಲ್ಬುರ್ಗಿ ಜೈಲಿನಲ್ಲಿರುವ ವಾತಾವರಣ ತುಸು ತಿಳಿಯಾಗುವ ಸಾಧ್ಯತೆ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.