ಒಂದೇ ದಿನ 100 ಸೋಂಕಿತರು ಡಿಸ್ಚಾರ್ಜ್
9 ಮಕ್ಕಳು ಸೇರಿ ಮತ್ತೆ 19 ಜನರಿಗೆ ಕೋವಿಡ್
Team Udayavani, Jun 18, 2020, 10:37 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಲಬುರಗಿ: ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ಮಧ್ಯೆಯೂ ಬುಧವಾರ ಒಂದೇ ದಿನ ಬರೋಬ್ಬರಿ 100 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದೇ ವೇಳೆ ಹೊಸದಾಗಿ 9 ಮಕ್ಕಳು ಸೇರಿ ಮತ್ತೆ 19 ಜನರಿಗೆ ಮಹಾಮಾರಿ ಸೋಂಕು ದೃಢಪಟ್ಟಿದೆ.
ಗುಜರಾತ್ ಪ್ರವಾಸ ಹಿನ್ನೆಲೆಯ ಕುರುಣೇಶ್ವರ ನಗರದ ಏಳು ವರ್ಷದ ಬಾಲಕ (ಪಿ-7691) ಮತ್ತು ಮಿಸ್ಬಾ ನಗರದ 9 ವರ್ಷದ ಬಾಲಕ (ಪಿ-7679) ಹಾಗೂ ಉಳಿದಂತೆ ಮಹಾರಾಷ್ಟ್ರದಿಂದ ಆಗಮಿಸಿದ 17 ಜನರಿಗೆ ಸೋಂಕು ಪತ್ತೆಯಾಗಿದೆ. ಆದರೆ, ಮಿಸ್ಬಾ ನಗರದ ಬಾಲಕನಿಗೆ ಯಾರಿಂದ? ಹೇಗೆ? ಸೋಂಕು ತಗುಲಿದೆ ಎಂಬುವುದು ಗೊತ್ತಾಗಿಲ್ಲ. ಕಲಬುರಗಿ ತಾಲೂಕಿನ ಹಿರೇಸಾವಳಗಿ ಗ್ರಾಮದ 48 ವರ್ಷದ ಮಹಿಳೆ, ಹಾರುತಿ ಹಡಗಲ್ ಗ್ರಾಮದ 2 ವರ್ಷದ ಗಂಡು ಮಗು, ಕಲ್ಲಹಂಗರಗಾ ಗ್ರಾಮದ ನಾಲ್ಕು ವರ್ಷದ ಗಂಡು ಮಗು, 13 ವರ್ಷದ ಬಾಲಕಿ, 23 ವರ್ಷದ ಮಹಿಳೆ ಹಾಗೂ ಇಟಗಾ ಕೆ. ತಾಂಡಾದ 9 ವರ್ಷದ ಬಾಲಕಿಗೆ ಸೋಂಕು ಕಾಣಿಸಿಕೊಂಡಿದೆ.
ಚಿತ್ತಾಪುರದ ತಾಲೂಕಿನ ವಾಡಿ ಪಟ್ಟಣದ 41 ವರ್ಷದ ಮಹಿಳೆ, ಇಂದಿರಾ ನಗರದ 2 ವರ್ಷದ ಗಂಡು ಮಗು, ಸೂಗುರ ಗ್ರಾಮದ 65 ವರ್ಷದ ವೃದ್ಧ, ನಾಲವಾರ ತಾಂಡಾದ 45 ವರ್ಷದ ಮಹಿಳೆ ಹಾಗೂ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದ ಮೂರು ಮತ್ತು ನಾಲ್ಕು ವರ್ಷದ ಬಾಲಕರು ಮತ್ತು 32 ವರ್ಷದ ಮಹಿಳೆ, ಕಮಲಾಪುರದಲ್ಲಿ ಇಬ್ಬರು ಹಾಗೂ ಚಿಂಚೋಳಿ ತಾಲೂಕಿನಲ್ಲಿ ಒಬ್ಬರಿಗೆ ಕೋವಿಡ್ ಅಂಟಿಕೊಂಡಿದೆ.
ಕೋವಿಡ್ ಗೆದ್ದ 99ರ ಅಜ್ಜಿ!
ಕಮಲಾಪುರ ತಾಲೂಕಿನ ಬುಗಡಿ ತಾಂಡಾದ 99 ವರ್ಷದ ಅಜ್ಜಿ ಕೋವಿಡ್ ಗೆದ್ದು ಮನೆಗೆ ಮರಳಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದ್ದ ಈ ಅಜ್ಜಿ (ಪಿ-4901)ಗೆ ಜೂ.6ರಂದು ಸೋಂಕು ದೃಢಪಟ್ಟಿತ್ತು. ಸೋಂಕಿನಿಂದ ಗುಣವಾದ ಹಿನ್ನೆಲೆಯಲ್ಲಿ ಬುಧವಾರ ಹಿರಿಯ ಜೀವ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.