ಮತ್ತೆ ಮೂರು ಕೋವಿಡ್ ಸೋಂಕು

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗೂ ಹೆಮ್ಮಾರಿ ದೃಢ

Team Udayavani, Apr 17, 2020, 10:37 AM IST

17-April-01

ಕಲಬುರಗಿ: ನಗರದ ಎಲ್ಲೆಡೆ ಪೊಲೀಸರು ಲಾಠಿ ಹಿಡಿದು ಸಂಚರಿಸಿದರು.

ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗುರುವಾರ ಐದು ವರ್ಷದ ಮಗು ಸೇರಿದಂತೆ ಮತ್ತೆ ಮೂವರಲ್ಲಿ ಮಹಾಮಾರಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಕಲಬುರಗಿ ತಾಲೂಕು, ಅಫಜಲಪುರ ಮತ ಕ್ಷೇತ್ರದ ಕವಲಗಾ (ಬಿ) ಗ್ರಾಮದ ಒಂದು ವರ್ಷದ ಗಂಡು ಮಗುವಿನ ನೇರ ಸಂಪರ್ಕಕ್ಕೆ ಬಂದಿದ್ದ 23 ವರ್ಷದ ಯುವತಿಗೆ ಗುರುವಾರ ಕೊರೊನಾ ಸೋಂಕು ಇರುವುದಾಗಿ ಪ್ರಯೋಗಾಲಯದ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

ಈ ಮಗುವಿಗೆ ಸೋಂಕು ತಗುಲಿರುವ ಹಿನ್ನೆಲೆ ಹಾಗೂ ಪ್ರವಾಸ ಪರಿಶೀಲಿಸಿದಾಗ ಇತ್ತೀಚೆಗೆ ಮಗುವಿನೊಂದಿಗೆ ತಂದೆಯೂ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ತಂದೆಗೆ ಸೋಂಕು ಇಲ್ಲ. ಆದರೆ, ಮಗನಿಗೆ ಸೋಂಕು ಬಂದಿದೆ. ಈ ಕುರಿತು ಇನ್ನುಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಸಿಇಒ ಡಾ| ರಾಜಾ ಪಿ. ಮಾಹಿತಿ ನೀಡಿದ್ದಾರೆ.

ಮತ್ತೊಂದು ಮಗುವಿಗೆ ಹೆಮ್ಮಾರಿ: ಕವಲಗಾ (ಬಿ)ದ ಒಂದು ವರ್ಷದ ಗಂಡು ಮಗು ಹಾಗೂ ವಾಡಿ ಪಟ್ಟಣದ ಎರಡು ವರ್ಷದ ಗಂಡು ಮಗುವಿಗೆ ಹೆಮ್ಮಾರಿ ಸೋಂಕು ದೃಢಪಟ್ಟಿದ್ದು, ಗುರುವಾರ ಕಲಬುರಗಿ ನಗರದ ಐದು ವರ್ಷದ ಗಂಡು ಮಗುವಿನಲ್ಲೂ ಕಾಣಿಸಿಕೊಂಡಿದೆ. ಮಂಗಳವಾರ 10 ವರ್ಷದ ಬಾಲಕಿಗೂ ಕೊರೊನಾ ಪತ್ತೆಯಾಗಿತ್ತು. ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ತಬ್ಲೀಘಿ-ಎ-ಜಮಾತ್‌ ಸಭೆಯಲ್ಲಿ ಪಾಲ್ಗೊಂಡು ಮರಳಿ ಬಂದವರೊಂದಿಗೆ ಸಂಪರ್ಕ ಹೊಂದಿ, ಏ.13ರಂದು ಮೃತಪಟ್ಟ ಬಟ್ಟೆ ವ್ಯಾಪಾರಿಯ ಸಂಪರ್ಕಕ್ಕೆ ಈ ಐದು ವರ್ಷದ ಮಗು ಸಂಪರ್ಕಕ್ಕೆ ಬಂದಿತ್ತು. ಈ ಹಿಂದೆ ಬಟ್ಟೆ ವ್ಯಾಪಾರಿಯ 51 ವರ್ಷದ ಸಹೋದರ ಹಾಗೂ ಸಹೋದರನ ಪುತ್ರಿಯಾದ 10 ವರ್ಷದ ಬಾಲಕಿಗೆ ಸೋಂಕು ಖಚಿತವಾಗಿತ್ತು.

ಬೆಂಗಳೂರಿಂದ ಮರಳಿದ ವ್ಯಕ್ತಿಗೂ ಸೋಂಕು: ಬೆಂಗಳೂರಿನಿಂದ ಮರಳಿದ್ದ 32 ವರ್ಷದ ವ್ಯಕ್ತಿಗೂ ಗುರುವಾರ ಸೋಂಕು ದೃಢಪಟ್ಟಿದೆ. ಮಾ.24ರಂದೇ ನಗರಕ್ಕೆ ಮರಳಿದ್ದ ಈತನನ್ನು ಈ ಹಿಂದೆಯೇ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಈತನಿಗೆ ಕೋವಿಡ್  ನೆಗೆಟಿವ್‌ ಎಂದು ಪ್ರಯೋಗಾಲಯದ ವರದಿ ಬಂದಿತ್ತು. ಮಾ.30ರಿಂದ ಈ ವ್ಯಕ್ತಿಯನ್ನು ಹೋಮ್‌ ಕ್ವಾರಂಟೈನ್‌ ನಲ್ಲಿ ಇರಿಸಲಾಗಿತ್ತು. ಏ.14ರಂದು ಜ್ವರ ಮತ್ತೆ ಕಾಣಿಸಿಕೊಂಡ ಪರಿಣಾಮ ಮತ್ತೂಮ್ಮೆ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿತ್ತು. ಇದೀಗ ಆತನಿಗೆ ಕೊರೊನಾ ಪಾಸಿವಿಟ್‌ ಇರುವುದು ಖಚಿತವಾಗಿದೆ. ಈತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ಟಾಪ್ ನ್ಯೂಸ್

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

All set for the Indian Cultural Festival

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Collection of donations in the name of Sri Siddalinga of Siddaganga Math: Old students upset

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

International Conference ಅತ Buntakal Technical College: Student Symposium

Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.